Advertisement

ಉದ್ಯೋಗ ಕಳೆದುಕೊಳ್ಳುವ ಭೀತಿ ಬೇಡ

02:33 AM Mar 31, 2017 | Team Udayavani |

ವಾಷಿಂಗ್ಟನ್‌: ‘ನಿಮ್ಮ ಉದ್ಯೋಗಕ್ಕೆ ತೊಂದರೆಯಾಗುವಂಥ ಯಾವುದೇ ನಿಯಮವನ್ನು ಅಮೆರಿಕ ಸರಕಾರ ಜಾರಿ ಮಾಡಿಲ್ಲ. ಅಂಥ ನಿಯಮ ತರದಂತೆ ಮನವೊಲಿಸುವ ಪ್ರಯತ್ನವೂ ನಡೆಯುತ್ತಿದೆ.’ ಭಾರತೀಯ ಐಟಿ ವೃತ್ತಿಪರರಿಗೆ ಈ ರೀತಿಯ ಭರವಸೆ ತುಂಬಿದ್ದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌. ಎಚ್‌1 ಬಿ ವೀಸಾ ಮೇಲಿನ ನಿರ್ಬಂಧ ಸೇರಿದಂತೆ ಅಮೆರಿಕದ ಟ್ರಂಪ್‌ ಆಡಳಿತದ ಹೊಸ ನಿಯಮಗಳಿಂದ ಐಟಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿರುವಾಗಲೇ ಸಚಿವೆ ಸುಷ್ಮಾ ರಾಜ್ಯಸಭೆಯಲ್ಲಿ ಈ ಮಾಹಿತಿ ನೀಡಿದ್ದಾರೆ.

Advertisement

‘ಅನಿಶ್ಚಿತತೆಯ ವಾತಾವರಣ ಇದೆ ಎನ್ನುವುದನ್ನು ಒಪ್ಪಿಕೊಳ್ಳುತ್ತೇನೆ. ವೀಸಾ ನಿರ್ಬಂಧಕ್ಕೆ ಸಂಬಂಧಿಸಿದ 5 ಮಸೂದೆಗಳು ಯುಎಸ್‌ ಕಾಂಗ್ರೆಸ್‌ಗೆ ಬಂದಿವೆಯಾದರೂ ಅವ್ಯಾವುದಕ್ಕೂ ಅಂಗೀಕಾರ ಸಿಕ್ಕಿಲ್ಲ. ಜತೆಗೆ, ನಾವು ಅಮೆರಿಕ ಸರಕಾರದೊಂದಿಗೆ ಮಾತು ಕತೆ ನಡೆಸುತ್ತಿದ್ದೇವೆ. ಭಾರತೀಯ ಐಟಿ ಕಂಪೆನಿಗಳು ಮತ್ತು ಅಮೆರಿಕ ನಡುವಿನ ಸಂಬಂಧದಿಂದ ಎರಡೂ ದೇಶಗಳಿಗೆ ಅನುಕೂಲಗಳಿವೆ ಎಂಬುದನ್ನು ಸಾಬೀತುಪಡಿಸುವಂಥ ಅಂಕಿಅಂಶಗಳನ್ನು ನೀಡಿದ್ದೇವೆ. ಎಚ್‌1ಬಿ ವೀಸಾಧಿದಾರರ ಕೆಲಸ ಉಳಿಸಿಕೊಳ್ಳಲು ಯತ್ನಿಸುತ್ತಿದ್ದೇವೆ’ ಎಂದಿದ್ದಾರೆ. ಇದೇ ವೇಳೆ, 2016ರಲ್ಲಿ ಅಮೆರಿಕವು 1.26 ಲಕ್ಷ ಎಚ್‌1ಬಿ ಕೆಲಸದ ಪರವಾನಿಗೆ ಸೇರಿಧಿದಂತೆ ಸುಮಾರು 1.5 ಲಕ್ಷ ಭಾರತೀಯರಿಗೆ ಉದ್ಯೋಗ ಆಧಾರಿತ ವೀಸಾವನ್ನು ವಿತರಿಸಿದೆ ಎಂದು ವಿದೇಶಾಂಗ ಇಲಾಖೆ ಸಹಾಯಕ ಸಚಿವ ಜ| ವಿ.ಕೆ. ಸಿಂಗ್‌ ಮಾಹಿತಿ ನೀಡಿದ್ದಾರೆ.

ಸುಧಾರಣೆಯ ಅಗತ್ಯವಿದೆ: ಅಮೆರಿಕದಲ್ಲಿ ಉದ್ಯೋಗ ಸೃಷ್ಟಿಗೆ ಕಾರಣಾಗುವ ಮತ್ತು ನಮ್ಮ ಆರ್ಥಿಕತೆಯನ್ನು ಬೆಳೆಸುವ ವಲಸಿಗರಿಗೆ ದೇಶವು ಮುಕ್ತವಾಗಿರಬೇಕು. ಎಚ್‌1ಬಿ ವೀಸಾ ವ್ಯವಸ್ಥೆಯಲ್ಲಿ ಸ್ವಲ್ಪಮಟ್ಟಿಗೆ ಸುಧಾರಣೆ ತರಬೇಕು ಎಂದು ಭಾರತೀಯ – ಅಮೆರಿಕದ ಕಾಂಗ್ರೆಸ್‌ ಸದಸ್ಯ ರೋ ಖನ್ನಾ ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next