Advertisement

ಕುಲಭೂಷಣ್‌ ಜಾಧವ್‌ ತಾಯಿಯ ವೀಸಾ ಅರ್ಜಿ ಪರಿಶೀಲನೆಯಲ್ಲಿ : ಪಾಕ್‌

07:48 PM Jul 13, 2017 | udayavani editorial |

ಹೊಸದಿಲ್ಲಿ : ಪಾಕಿಸ್ಥಾನದಲ್ಲಿ ಮಿಲಿಟರಿ ಕೋರ್ಟ್‌ನಿಂದ ಮರಣ ದಂಡನೆ ಶಿಕ್ಷೆ ವಿಧಿಸಲ್ಪಟ್ಟಿರುವ ಹಾಗೂ ಪ್ರಕೃತ ಅಲ್ಲಿನ ಜೈಲಿನಲ್ಲಿರುವ ಭಾರತೀಯ ಪ್ರಜೆ ಕುಲಭೂಷಣ್‌ ಜಾಧವ್‌ ಅವರನ್ನು ಭೇಟಿಯಾಗಲು ಬಯಸಿರುವ ಅವರ ತಾಯಿ ಆವಂತಿಕಾ ಜಾಧವ್‌ ಅವರ ವೀಸಾ ಕೋರಿಕೆ ಅರ್ಜಿಯು  ಪರಿಶೀಲನೆಯಲ್ಲಿದೆ ಎಂದು ಪಾಕಿಸ್ಥಾನದ ವಿದೇಶ ಕಾರ್ಯಾಲಯ ಇಂದು ಗುರುವಾರ ಹೇಳಿದೆ.

Advertisement

ಪಾಕ್‌ ವಿದೇಶ ಕಾರ್ಯಾಲಯದ ವಕ್ತಾರ ನಫೀಸ್‌ ಝಕಾರಿಯಾ ಅವರನ್ನು ಉಲ್ಲೇಖೀಸಿ ಪಾಕಿಸ್ಥಾನದ ಡಾನ್‌ ದೈನಿಕದ ಅಂತರ್‌ಜಾಲ ಆವೃತ್ತಿಯು ಈ ವಿಷಯವನ್ನು ವರದಿ ಮಾಡಿದೆ. 

ಝಕಾರಿಯಾ ಅವರು ವಾರದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ‘ಭಾರತದಲ್ಲಿ ಚಿಕಿತ್ಸೆ ಪಡೆಯಬಯಸುವ ಪಾಕಿಸ್ಥಾನೀಯರ ವೀಸಾ ಕೋರಿಕೆಯ ಅರ್ಜಿಯ ಮೇಲೆ ಶರತ್ತುಗಳನ್ನು ಹೇರಲಾಗುತ್ತಿದೆ’ ಎಂದು ಆರೋಪಿಸಿದರು. 

“ದ ಹೇಗ್‌’ನಲ್ಲಿನ ಅಂತಾರಾಷ್ಟ್ರೀಯ ನ್ಯಾಯಾಲಯವು ಕಳೆದ ಮೇ 18ರಂದು ಕುಲಭೂಷಣ್‌ ಜಾಧವ್‌ ಮರಣ ದಂಡನೆ ಶಿಕ್ಷೆಯ ಜಾರಿಗೆ ತಡೆ ನೀಡಿತ್ತಲ್ಲದೆ ಜಾಧವ್‌ಗೆ ದೂತಾವಾಸದ ಸಂಪರ್ಕಾವಕಾಶ ಕಲ್ಪಿಸಬೇಕೆಂಬ ಭಾರತದ ಕೋರಿಕೆಯನ್ನು ಮನ್ನಿಸಬೇಕಂದೂ ಪಾಕಿಸ್ಥಾನಕ್ಕೆ ಸೂಚಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next