Advertisement

ಕೊಳಚೆ ನೀರಿನಲ್ಲಿ ವೈರಸ್‌ ವಂಶವಾಹಿ ಪತ್ತೆ

12:37 PM Jun 10, 2020 | mahesh |

ಐಐಟಿ-ಗಾಂಧಿನಗರದ ಸಂಶೋಧಕರ ತಂಡವೊಂದು ಅಹ್ಮದಾಬಾದ್‌ನ ಹೊರವಲಯದಲ್ಲಿ ಸಂಗ್ರಹಿಸಿದ ಸಂಸ್ಕರಣೆ ಮಾಡದೇ ಇದ್ದ ಕೊಳಚೆ ನೀರಿನಲ್ಲಿ ಕೋವಿಡ್ ವೈರಸ್‌ನ ಸಾಂಕ್ರಾಮಿಕವಲ್ಲದ ವಂಶವಾಹಿಗಳನ್ನು ಪತ್ತೆ ಹಚ್ಚಿದೆ. ಈವರೆಗೆ ಆಸ್ಟ್ರೇಲಿಯಾ, ಫ್ರಾನ್ಸ್‌, ನೆದರ್‌ಲ್ಯಾಂಡ್‌, ಅಮೆರಿಕಗಳ ಒಳಚರಂಡಿ ನೀರಿನಲ್ಲಿ ಸಾರ್ಸ್‌-ಕೋವ್‌-2 ವೈರಸ್‌ ಪತ್ತೆಯಾಗಿರುವುದು ವರದಿಯಾಗಿತ್ತು. ಆದರೆ, ಭಾರತದಲ್ಲಿ ಒಳಚರಂಡಿ ನೀರಿನಲ್ಲಿ “ಸಾರ್ಸ್‌-ಕೋವ್‌-2′ ವೈರಸ್‌ ಪತ್ತೆಯಾಗಿರುವುದು ಇದೇ ಮೊದಲು ಎನ್ನಲಾಗಿದೆ.

Advertisement

ಈ ಕುರಿತಂತೆ ಹೆಚ್ಚಿನ ಮಾಹಿತಿ ನೀಡಿದ ಸಂಶೋಧಕರ ತಂಡದ ಮುಖ್ಯಸ್ಥ ಐಐಟಿ-ಗಾಂಧಿನಗರದ ಪ್ರಾಧ್ಯಾಪಕ ಮನೀಶ್‌ ಕುಮಾರ್‌, “”ಸೋಂಕಿನ ಲಕ್ಷಣ ಇರುವ ವ್ಯಕ್ತಿಯ ದೇಹದಿಂದ ಮಾತ್ರವಲ್ಲದೆ, ಸೋಂಕಿನ ಲಕ್ಷಣ ಕಂಡು ಬರದ ವ್ಯಕ್ತಿಯ ದೇಹದಿಂದಲೂ ಕೋವಿಡ್ ವೈರಸ್‌ ವಿಸರ್ಜನೆಯಾಗಬಹುದು. ವ್ಯಕ್ತಿಯ ದೇಹದಿಂದ ವಿಸರ್ಜನೆಯಾಗುವ ಮಲ, ಮೂತ್ರಗಳ ಮೂಲಕ ಇದು ಚರಂಡಿ ನೀರನ್ನು ಸೇರುವ ಸಾಧ್ಯತೆ ಇರುತ್ತದೆ. ದೇಶದ ವಿವಿಧ ಭಾಗಗಳಲ್ಲಿ ಕೋವಿಡ್ ವೈರಸ್‌ ಹಾಟ್‌ಸ್ಪಾಟ್‌ಗಳನ್ನು ಗುರುತಿಸುವಾಗ ಮತ್ತು ಕೋವಿಡ್ ನಿಯಂತ್ರಿಸಲು ಕ್ರಮ ಕೈಗೊಳ್ಳುವಾಗ ಆ ಪ್ರದೇಶದಲ್ಲಿನ ತ್ಯಾಜ್ಯ ನೀರಿನ ಮೇಲೆ ಕಣ್ಗಾವಲು ಇರಿಸಬೇಕಾದ ಅಗತ್ಯತೆಯನ್ನು ಇದು ಎತ್ತಿ ತೋರಿಸುತ್ತದೆ” ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next