Advertisement

ಕೋವಿಡ್ ಎಫೆಕ್ಟ್ : ಈ ಬಾರಿ ವರ್ಚ್ಯುವಲ್‌ ಚಿತ್ರಸಂತೆ

01:34 PM Nov 22, 2020 | Suhan S |

ಬೆಂಗಳೂರು: ಕೋವಿಡ್‌ ಹಿನ್ನೆಲೆಯಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ತು 18ನೇ ಚಿತ್ರಸಂತೆಯನ್ನು ಒಂದು ತಿಂಗಳು ವರ್ಚ್ಯುವಲ್ (ಆನ್‌ಲೈನ್‌) ಮೂಲಕ ನಡೆಸಲು ತೀರ್ಮಾನಿಸಿದೆ.  ಜ.3ರಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಈ ಅಪರೂಪದ ಚಿತ್ರಸಂತೆಗೆ ಚಾಲನೆ ನೀಡಲಿದ್ದಾರೆ.

Advertisement

ಪ್ರತಿ ವರ್ಷದಂತೆ ಈ ಬಾರಿ ಕೂಡ ರಾಜ್ಯ ಮತ್ತು ಹೊರ ರಾಜ್ಯದಿಂದ 1500 ಕಲಾವಿದರು ಭಾಗವಹಿಸಲಿದ್ದು ಚಿತ್ರ ಸಂತೆಯನ್ನು ಕೊರೊನಾ ಯೋಧರ ಉದಾತ್ತ ಸೇವೆಗೆ ಅರ್ಪಣೆ ಮಾಡಲು ನಿರ್ಧರಿಸಲಾಗಿದೆ. ಪ್ರತಿ ಕಲಾವಿದರಿಗೂ ಪ್ರತ್ಯೇಕವಾಗಿ ಒಂದು ಆನ್‌ಲೈನ್‌ಪುಟವನ್ನು ಮೀಸಲಿರಿಸಲಾಗುತ್ತದೆ. “ಮನೆಗೊಂದುಕಲಾಕೃತಿ’ ಎಂಬ ಆಶಯದೊಂದಿಗೆ ಆನ್‌ಲೈನ್‌ ಪುಟ ನೀಡಲಾಗುವುದು. ಪ್ರತಿ ಕಲಾವಿದ ತಮಗೆ ಮೀಸಲಿರಿಸಿದ ಪುಟದಲ್ಲಿ 10 ಕಲಾ ಕೃತಿಗಳನ್ನು ಪ್ರದರ್ಶಿಸಬಹುದಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್‌.ಶಂಕರ್‌, ಪರಿಷತ್ತಿನ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಸಾಮಾಜಿಕ ತಾಣಗಳ ಮೂಲಕದೊಡ್ಡಮಟ್ಟದಲ್ಲಿ ಚಿತ್ರಸಂತೆ ನಡೆಯುತ್ತಿದೆ. ಪರಿಷತ್ತಿನ ಎಲ್ಲಾಗ್ಯಾಲರಿಯಲ್ಲಿ ಭಾರತ ಆಯ್ದ, ಆಹ್ವಾನಿತ ಕಲಾವಿದರ ಕಲಾಕೃತಿಗಳನ್ನು ಚಿತ್ರ ಸಂತೆಯಲ್ಲಿ ಪ್ರದರ್ಶಿಸಲಾಗುವುದು ಎಂದು ಹೇಳಿದರು.

ವಿದೇಶಿ ಕಲಾವಿದರಿಂದಲೂ ಆಸಕ್ತಿ: ಚಿತ್ರಸಂತೆಯಲ್ಲಿ ಭಾಗವಹಿಸುವ ರಾಜ್ಯದ ಕಲಾವಿದರಿಗೆ 500 ರೂ. ಇತರೆ ರಾಜ್ಯದ ಕಲಾವಿದರಿಗೆ 1000 ರೂ. ಶುಲ್ಕ ನಿಗದಿ ಪಡಿಸಲಾಗಿದೆ. ಚಿತ್ರಸಂತೆಯಲ್ಲಿ ಫ್ರಾನ್ಸ್‌, ಸಿಂಗಾಪುರ, ಮಲೇಷಿಯಾ ದೇಶಗಳ ಕಲಾವಿದರು ಆಸಕ್ತಿ ತೋರಿದ್ದಾರೆ. ಶೀಘ್ರದಲ್ಲೆ ಕಲಾವಿದರ ಆಯ್ಕೆ ಪ್ರಕ್ರಿಯೆ ಕೂಡ ಆರಂಭವಾಗಲಿದೆ.

ಬರೋಡ ಕಲಾವಿದೆಗೆ ಪ್ರಶಸ್ತಿ :  ಪರಿಷತ್ತಿನ ಸಂಸ್ಥಾಪಕ ಮುಖ್ಯಕಾರ್ಯದರ್ಶಿ “ಪ್ರೊ. ಎಂ.ಎಸ್‌. ನಂಜುಂಡರಾವ್‌ ರಾಷ್ಟ್ರೀಯ ಪ್ರಶಸ್ತಿ’ಯನ್ನುಈ ಬಾರಿ ಬರೋಡಾದ ಹಿರಿಯಕಲಾವಿದೆ ನೀಲಿಮಾ ಶೇಖ್‌ ಅವರಿಗೆ ನೀಡಲು ತೀರ್ಮಾನಿಸಲಾಗಿದೆ. ಪ್ರಶಸ್ತಿಯು ಒಂದು ಲಕ್ಷ ರೂ. ನಗದು ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ. ಹಾಗೆಯೇ ಚಿತ್ರಕಲಾ ಸಮ್ಮಾನ್‌ ಪ್ರಶಸ್ತಿಗಳ ಅಡಿಯಲ್ಲಿ ಡಿ. ದೇವರಾಜ್‌ ಅರಸು ಪ್ರಶಸ್ತಿ, ಎಚ್‌.ಕೆ.ಕೇಜ್ರಿವಾಲ್‌ ಪ್ರಶಸ್ತಿ, ಎಂ.ಆರ್ಯಮೂರ್ತಿ ಪ್ರಶಸ್ತಿ ಹಾಗೂ ವೈ. ಸುಬ್ರಹ್ಮಣ್ಯ ರಾಜು ಪ್ರಶಸ್ತಿಯನ್ನು ನಾಲ್ಕುಕಲಾವಿದರಿಗೆ ತಲಾ50 ಸಾವಿರ ರೂ. ನೀಡಿ ಗೌರವಿಸಲಾಗುವುದು.

Advertisement

ಎಲ್ಲೆಲ್ಲಿ ನೇರ ಪ್ರಸಾರ :  ಫೇಸ್‌ ಬುಕ್‌, ಇನ್‌ ಸ್ಟಾಗ್ರಾಂ,ಯೂಟ್ಯೂಬ್‌, chitrasanthe.org  ಗಳಲ್ಲಿ ವೀಕ್ಷಿಸಬಹುದು. ಸಮಕಾಲೀನ ಕಲಾಕೃತಿಗಳು, ಮೈಸೂರು, ತಂಜಾವೂರು, ರಾಜಸ್ಥಾನಿ ಮತ್ತು ಮಧುಬನಿ ಸೇರಿದಂತೆ ಇನ್ನಿತರಕಲಾಕೃತಿಗಳನ್ನು ಆನ್‌ಲೈನ್‌ನಲ್ಲಿಕಲಾಕೃತಿಗಳನ್ನು ವೀಕ್ಷಿಸಿ ಆಲ್‌ಲೈನ್‌ ಮೂಲಕ ಖರೀದಿ ಮಾಡಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next