Advertisement
ಡೆಲ್ಲಿ ತಂಡದಲ್ಲಿ ಈ ಬಾರಿ ಒಂದೆಡೆ ಬಿಗ್ ಹಿಟ್ಟರ್ ರಿಷಬ್ ಪಂತ್ ಕೊರತೆ ಎದ್ದು ಕಾಣುತ್ತಿದ್ದು, ಇನ್ನೊಂದೆಡೆ ತಂಡದಲ್ಲಿ ಈ ವರೆಗೆ ಸಿಡಿದೇಳುವ ಬ್ಯಾಟಿಂಗ್ ಸ್ಟಾರ್ ಕಂಡುಬಂದಿಲ್ಲ. ಇದು ಹೀಗೇ ಮುಂದುವರಿದರೆ ತಂಡ ತೀವ್ರ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ.
Related Articles
Advertisement
2018 ರಲ್ಲಿ ಭಾರತದ ಅಂಡರ್-19 ತಂಡವನ್ನು ಮುನ್ನಡೆಸಿದ್ದ ಪೃಥ್ವಿ ಶಾ ಅವರ ಇತ್ತೀಚಿನ ಕ್ರಿಕೆಟ್ ಬೆಳವಣಿಗೆ ಬಗ್ಗೆ ಮಾತನಾಡಿದ ಸೆಹ್ವಾಗ್, ಅಂಡರ್-19 ತಂಡದಲ್ಲಿ ಪೃಥ್ವಿ ಶಾ ಜೊತೆಗೆ ತಂಡದಲ್ಲಿದ್ದ ಶುಭ್‌ಮಾನ್ ಗಿಲ್ ಇಂದು ಎಲ್ಲಾ ಮೂರು ವಿಭಾಗದಲ್ಲಿ ಭಾರತ ತಂಡದ ಪರ ಭರ್ಜರಿ ಬ್ಯಾಟಿಂಗ್ ನಡೆಸಿ ಸೈ ಎನಿಸಿಕೊಂಡಿದ್ಧಾರೆ ಎಂದರು.
ಪೃಥ್ವಿ ಶಾ ಅವರ ಹೊಡೆತಗಳಿಗೆ ಬೇಸರ ವ್ಯಕ್ತಪಡಿಸಿದ ಸೆಹ್ವಾಗ್, ʻತಪ್ಪು ಹೊಡೆತಗಳಿಗೆ ಪ್ರಯತ್ನಿಸಿ ಶಾ ಬಹಳಷ್ಟು ಬಾರಿ ವಿಕೆಟ್ ಒಪ್ಪಿಸಿದ್ದಾರೆ. ಆದರೆ ಅವರು ಆ ತಪ್ಪುಗಳಿಂದ ಸುಮಾರಷ್ಟು ಸಂಗತಿಗಳನ್ನು ಕಲಿಯಬೇಕಾಗುತ್ತದೆ ಅಲ್ಲವೇ?ʼ ಎಂದು ಹೇಳಿದ್ಧಾರೆ.
ʻಭಾರತ ತಂಡದ ಪರ ಎಲ್ಲಾ ಮೂರು ವಿಭಾಗಗಳಲ್ಲೂ ಆಡುತ್ತಿರುವ ಶುಭ್‌ಮಾನ್ ಗಿಲ್ 2018ರಲ್ಲಿ ಪೃಥ್ವಿ ಶಾ ಜೊತೆಗೂ ಆಡಿದ್ದರು. ಇಂದು ಅವರು ಭಾರತ ತಂಡದಲ್ಲಿ ಮಿಂಚುತ್ತಿದ್ದಾರೆ. ಆದರೆ ಶಾ ಇನ್ನೂ ಐಪಿಎಲ್‌ನಲ್ಲಿ ರನ್ ಗಳಿಸಲು ಒದ್ದಾಡುತ್ತಿದ್ಧಾರೆʼ ಎಂದು ಸೆಹ್ವಾಗ್ ಹೇಳಿದ್ದಾರೆ.
ಇದೇ ವೇಳೆ ಪೃಥ್ವಿ ಶಾ ಅವರನ್ನು ಹೋಲಿಸಿ ಋತುರಾಜ್ ಗಾಯಕ್ವಾಡ್ ಬಗ್ಗೆಯೂ ಮಾತನಾಡಿದ ಸೆಹ್ವಾಗ್ ʻಈಗಾಗಲೇ ಐಪಿಎಲ್‌ನಲ್ಲಿ ಒಂದು ಬಾರಿ ಆರೆಂಜ್ ಕ್ಯಾಪ್ ಗಳಿಸಿರುವ ಗಾಯಕ್ವಾಡ್ ಪ್ರತಿ ಸೀಸನ್‌ನಲ್ಲಿಯೂ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಕಂಡುಬರುತ್ತಾರೆ. ಈ ಬಾರಿಯೂ ಉತ್ತಮ ಆಟವನ್ನು ಮುಂದುವರಿಸಿದ್ಧಾರೆ. ಹಾಗಾಗಿ ಪೃಥ್ವಿ ಶಾ ಅವರೂ ಗಾಯಕ್ವಾಡ್, ಗಿಲ್‌ರಂತೆ ದೊಡ್ಡ ಮೊತ್ತ ಪೇರಿಸಲು ಪ್ರಯತ್ನ ಪಡಲೇಬೇಕಾಗಿದೆʼ ಎಂದು ಹೇಳಿದ್ಧಾರೆ.