ಲಾಹೋರ್: 14 ವರ್ಷಗಳ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ, ಭಾರತದ ಮಾಜಿ ಬ್ಯಾಟರ್ ವೀರೇಂದ್ರ ಸೆಹವಾಗ್ ಅವರು ಟೆಸ್ಟ್ ಕ್ರಿಕೆಟ್ ಆಡುವ ವಿಧಾನವನ್ನು ಬದಲಾಯಿಸಿದರು. ಕನಿಷ್ಠ ಫುಟ್ ವರ್ಕ್ ಆದರೆ ಗರಿಷ್ಠ ಇಂಟೆಂಟ್ ನಿಂದ, ಸೆಹವಾಗ್ ಟೆಸ್ಟ್ ಸ್ವರೂಪದಲ್ಲಿ ರನ್ ಗಳಿಸಿದರು. ಸೆಹವಾಗ್ ಟೆಸ್ಟ್ ಮಾದರಿಯಲ್ಲಿ ಟಿ20 ಕ್ರಿಕೆಟ್ ಗೆ ಹೆಸರುವಾಸಿಯಾಗಿದ್ದರು.
ಭಾರತ ತಂಡದ ಪರ 104 ಟೆಸ್ಟ್‌ಗಳನ್ನು ಆಡಿದ ಸೆಹವಾಗ್ 49.34 ರ ಸರಾಸರಿಯಲ್ಲಿ 8,586 ರನ್‌ಗಳನ್ನು ಗಳಿಸಿದರು, ಇದರಲ್ಲಿ ಎರಡು ತ್ರಿಶತಕಗಳು ಸೇರಿವೆ. ಆದರೆ ಪಾಕಿಸ್ತಾನದ ಮಾಜಿ ವೇಗಿ ರಾಣಾ ನವೇದ್-ಉಲ್-ಹಸನ್ ಅವರು ಮಾತ್ರ ಸೆಹವಾಗ್ ಅವರನ್ನು ಔಟ್ ಮಾಡುವುದು ಸುಲಭ ಎಂದು ಹೇಳಿದ್ದಾರೆ.
“ಸೆಹವಾಗ್ ಔಟ್ ಮಾಡಲು ಸುಲಭ. ಬೌಲಿಂಗ್ ಮಾಡಲು ಅತ್ಯಂತ ಕಷ್ಟಕರ ಎಂದರೆ ರಾಹುಲ್ ದ್ರಾವಿಡ್” ಎಂದು ನಾದಿರ್ ಅಲಿ ಅವರ ಪಾಡ್ ಕ್ಯಾಸ್ಟ್ ನಲ್ಲಿ ನವೇದ್-ಉಲ್-ಹಸನ್ ಹೇಳಿದ್ದಾರೆ.
ಇದನ್ನೂ ಓದಿ:Theerthahalli: ಭೀಮನ ಅಮವಾಸ್ಯೆ ಪ್ರಯುಕ್ತ ಭೀಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ
251 ಏಕದಿನ ಪಂದ್ಯಗಳಲ್ಲಿ, ಸೆಹವಾಗ್ 35.05 ಸರಾಸರಿಯಲ್ಲಿ 8,273 ರನ್ ಗಳಿಸಿದರು. 38 ಅರ್ಧಶತಕಗಳೊಂದಿಗೆ 15 ಶತಕಗಳನ್ನು ಗಳಿಸಿದರು. 19 ಟ್ವೆಂಟಿ-20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಅವರು ಎರಡು ಅರ್ಧ ಶತಕಗಳೊಂದಿಗೆ 394 ರನ್ ಗಳಿಸಿದ್ದಾರೆ.
ಮತ್ತೊಂದೆಡೆ, ನವೇದ್-ಉಲ್-ಹಸನ್ 74 ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. 29.28 ಸರಾಸರಿಯಲ್ಲಿ 110 ವಿಕೆಟ್ ಗಳನ್ನು ಪಡೆದಿದ್ದಾರೆ.