ಹೊಸದಿಲ್ಲಿ: 14 ನೇ ಆವೃತ್ತಿಯ ಐಪಿಎಲ್ ನಲ್ಲಿ ತಂಡಗಳು ಭಾರಿ ಪೈಪೋಟಿಯಲ್ಲಿ ಸೆಣಸಾಡುತ್ತಿವೆ. ಹಲವು ಅನಿರೀಕ್ಷಿತ ಫಲಿತಾಂಶಗಳ ಪಂದ್ಯಗಳಿಗೆ ಈಗಾಗಲೇ ಕೂಟ ಸಾಕ್ಷಿಯಾಗಿದೆ. ಆದರೆ ಮಾಜಿ ಕ್ರಿಕೆಟಿಗ ವೀರೆಂದ್ರ ಸೆಹವಾಗ್ ಮಾತ್ರ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕಿಡಿಕಾರಿದ್ದಾರೆ.
ಕೆಕೆಆರ್ ತಂಡದ ಆಟ ನೋಡಿದರೆ ಯಾವುದೋ ಬೋರಿಂಗ್ ಸಿನಿಮಾ ನೋಡಿದ ಹಾಗೆ ಅನಿಸುತ್ತದೆ ಎಂದು ಸೆಹವಾಗ್ ಟೀಕಿಸಿದ್ದಾರೆ. ಕೆಕೆಆರ್ ತಂಡ ಇದುವರೆಗೆ ಆಡಿರುವ ಆರು ಪಂದ್ಯಗಳಲ್ಲಿ ಕೇವಲ ಎರಡು ಪಂದ್ಯವನ್ನು ಮಾತ್ರ ಗೆದ್ದಿದೆ.
ಇದನ್ನೂ ಓದಿ:ಕೋವಿಡ್ ವಿರುದ್ಧ ಹೋರಾಟಕ್ಕೆ ಸಹಾಯ ಮಾಡಿದ ಜಯದೇವ್ ಉನಾದ್ಕತ್, ನಿಕೋಲಸ್ ಪೂರನ್
ಕೆಕೆಆರ್ ತಂಡದ ಬ್ಯಾಟಿಂಗ್ ಸರದಿ ನನಗೆ ಇಷ್ಟವಾಗುತ್ತಿಲ್ಲ. ಕಾರಣ ನಿತೀಶ್ ರಾಣಾ ಇನ್ನೂ ಆರಂಭಿಕರಾಗಿ ಆಡುತ್ತಿದ್ದಾರೆ. ಅವರಿಗೆ ಸಿಗಬೇಕಾದ ಆರಂಭ ಸಿಗುತ್ತಿಲ್ಲ. ಶುಭ್ಮನ್ ಗಿಲ್ ಕೂಡಾ ಫಾರ್ಮ್ ನಲ್ಲಿಲ್ಲ ಎಂದು ಸೆಹವಾಗ್ ಹೇಳಿದ್ದಾರೆ.
ಶುಭ್ಮನ್ ಗಿಲ್ ಅವರು ವೇಗವಾಗಿ ಬ್ಯಾಟ್ ಬೀಸುವ ಆಟಗಾರನೊಂದಿಗೆ ಆರಂಭ ಮಾಡಬೇಕಿದೆ. ಇದರಿಂದ ತಂಡಕ್ಕೆ ಉತ್ತಮ. ಕೆಕೆಆರ್ ತಂಡ ಪ್ರತಿ ಪಂದ್ಯದಲ್ಲೂ ತಪ್ಪುಗಳನ್ನು ಮಾಡುತ್ತಿದೆ. ಆದರೆ ಅದನ್ನು ಸರಿಪಡಿಸಿಕೊಳ್ಳದೆ, ಮುಂದಿನ ಪಂದ್ಯದಲ್ಲೂ ಅದೇ ತಪ್ಪನ್ನು ಮಾಡುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಬೊರಿವಲಿ ಗಲ್ಲಿಯಲ್ಲಿ ಆಫ್ ಸ್ಪಿನ್ನರ್ ಆಗಿದ್ದ ರೋಹಿತ್ ದ್ವಿಶತಕದ ಕನಸೂ ಕಂಡಿರಲಿಕ್ಕಿಲ್ಲ…