ಕುಷ್ಟಗಿ: ಇಲ್ಲಿನ ಮಾರುತಿ ಚಿತ್ರಮಂದಿರದಲ್ಲಿ ಶುಕ್ರವಾರ ತೆರೆ ಕಾಣಬೇಕಿದ್ದ ವಿರಾಟ ವಿರಾಗಿ ಕನ್ನಡ ಚಲನಚಿತ್ರ ಪ್ರದರ್ಶನ ಇಲ್ಲದಿರುವುದು ನಿರಾಶೆ ವ್ಯಕ್ತವಾಗಿದೆ.
ಬಿ.ಎಸ್.ಲಿಂಗದೇವರು ನಿರ್ಧೇಶನದ ಹಾನಗಲ್ ಶ್ರೀ ಕುಮಾರ ಶಿವಯೋಗಿಗಳ ಜೀವನಾಧರಿತ ವಿರಾಟ ವಿರಾಗಿ ಚಲನಚಿತ್ರದ ಮೊದಲ ಷೋ ಪ್ರದರ್ಶನಗೊಳ್ಳದೇ ಮಾರುತಿ ಚಿತ್ರ ಬಂದ್ ಆಗಿದೆ.
ಮಾದ್ಯಮಗಳಲ್ಲಿ ಪ್ರಕಟವಾದಂತೆ ಕುಷ್ಟಗಿ ಮಾರುತಿ ಚಿತ್ರಮಂದಿರದಲ್ಲಿ ಮೊದಲ ಷೋ ಆರಂಭಿಸಬೇಕಿತ್ತು ಆದರೆ ಚಿತ್ರ ಮಂದಿರದಲ್ಲಿ ಈ ಸಿನಿಮಾದ ಪೋಸ್ಟರ್ ಗಳ ಸುಳಿವಿಲ್ಲ.
ನಾಳೆ ಸಂಕ್ರಮಣ ಹಿನ್ನೆಲೆಯಲ್ಲಿ ತೆಲುಗು ಚಿತ್ರ ಪ್ರದರ್ಶನಗೊಳ್ಳುವ ಮಾಹಿತಿ ಇದೆ. ಕಳೆದ ಡಿ.27 ರಂದು ಕುಷ್ಟಗಿಯಲ್ಲಿ ವಿರಾಟ ವಿರಾಗಿ ಸಿನಿಮಾ ಟ್ರೈಲರ್ ಪ್ರದರ್ಶನದಿಂದ ಬಹುತೇಕ ಭಕ್ತಾದಿಗಳು ಈ ಸಿನಿಮಾ ಜ.13 ರಂದು ಸ್ಥಳೀಯ ಚಿತ್ರ ಮಂದಿರದಲ್ಲಿ ನೋಡಿ ಕಣ್ತುಂಬಿಕೊಳ್ಳುವ ನಿರೀಕ್ಷೆಯಲ್ಲಿದ್ದರು. ಆದರೆ ಇವತ್ತಿನ ಪರಿಸ್ಥಿಗೆ ಚಿತ್ರಮಂದಿರ ಮಾಲೀಕರ ಭಕ್ತಿಪ್ರಧಾನ ಕನ್ನಡ ಚಲನಚಿತ್ರದ ಬಗ್ಗೆ ಅಸಡ್ಡೆಗೆ ಬೇಸರ ವ್ಯಕ್ತವಾಗಿದೆ.
ಈ ಕುರಿತು ಕುಷ್ಟಗಿ ಮದ್ದಾನಿಮಠದ ಕರಿಬಸವ ಶ್ರೀಗಳಾದ ಶ್ರೀ ಕರಿಬಸವ ಶಿವಾಚಾರ್ಯ ಸ್ವಾಮೀಜಿ ಪ್ರತಿಕ್ರಿಯಿಸಿ, ವಿರಾಟ ವಿರಾಗಿ ಭಕ್ತಿ ಪ್ರಧಾನ ಚಿತ್ರ. ಈ ಚಿತ್ರವನ್ನು ನೋಡಲು ಉತ್ಸುಕರಾಗಿದ್ದೆವು. ಆದರೆ ಕುಷ್ಟಗಿ ಮಾರುತಿ ಚಿತ್ರ ಮಂದಿರದಲ್ಲಿ ಪ್ರದರ್ಶನ ಇಲ್ಲದಿರುವುದು ಬೇಸರವಾಗಿದೆ. ವೀರಶೈವ ಲಿಂಗಾಯತ ಸಂಸ್ಥಾಪಕರ ಚಿತ್ರಕ್ಕೆ ಈ ರೀತಿಯ ನಿರ್ಲಕ್ಷ್ಯ ನಿಜಕ್ಕೂ ಬೇಸರವಾಗಿದೆ. ಸ್ಥಳೀಯ ವೀರಶೈವ ಲಿಂಗಾಯತ ಮಹಾಸಭಾ ಪಧಾಧಿಕಾರಿಗಳಿಗೆ ಈ ವಿಷಯ ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ ಈ ಚಿತ್ರ ಕೂಡಲೇ ಪ್ರದರ್ಶನ ಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.