Advertisement

ರಹಾನೆ- ಪೂಜಾರ ಭವಿಷ್ಯದ ಬಗ್ಗೆ ಹೇಳುವುದು ನನ್ನ ಕೆಲಸವಲ್ಲ: ವಿರಾಟ್

09:38 AM Jan 15, 2022 | Team Udayavani |

ಕೇಪ್ ಟೌನ್: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಭಾರತ ತಂಡ 2-1 ರ ಅಂತರದಿಂದ ಕಳೆದುಕೊಂಡಿದೆ. ಕೇಪ್ ಟೌನ್ ಟೆಸ್ಟ್ ಪಂದ್ಯವನ್ನು ಏಳು ವಿಕೆಟ್ ಗಳಿಂದ ಸೋತ ವಿರಾಟ್ ಪಡೆ, ಇತಿಹಾಸ ನಿರ್ಮಿಸುವ ಅವಕಾಶವನ್ನು ಕಳೆದುಕೊಂಡಿತು.

Advertisement

ಸರಣಿ ಸೋಲಿಗೆ ಬ್ಯಾಟರ್ ಗಳೇ ಕಾರಣ ಎಂದು ದೂರಿದ ನಾಯಕ ವಿರಾಟ್ ಕೊಹ್ಲಿ, ಅನುಭವಿ ಆಟಗಾರರಾದ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ ಪೂಜಾರ ಕ್ರಿಕೆಟ್ ಭವಿಷ್ಯದ ಬಗ್ಗೆ ಹೇಳಲು ನಿರಾಕರಿಸಿದರು. ಅದಲ್ಲದೆ ಅದನ್ನು ನಿರ್ಧಾರ ಮಾಡುವುದು ನನ್ನ ಕೆಲಸವಲ್ಲ ಎಂದರು.

” ಭವಿಷ್ಯದಲ್ಲಿ ಏನಾಗಬಹುದು ಎಂಬುದರ ಕುರಿತು ನಾನು ಇಲ್ಲಿ ಕುಳಿತು ಮಾತನಾಡಲು ಸಾಧ್ಯವಿಲ್ಲ. ಆಯ್ಕೆದಾರರ ಮನಸ್ಸಿನಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳಲು ನೀವು ಅವರೊಂದಿಗೆ ಮಾತನಾಡಬೇಕು, ಅದು ನನ್ನ ಕೆಲಸವಲ್ಲ” ಎಂದು ವಿರಾಟ್ ಕೊಹ್ಲಿ ಹೇಳಿದರು.

“ನಾನು ಮೊದಲೇ ಹೇಳಿದಂತೆ ಮತ್ತೊಮ್ಮೆ ಹೇಳುತ್ತೇನೆ. ಚೇತೇಶ್ವರ ಮತ್ತು ಅಜಿಂಕ್ಯಾ ರಹಾನೆ ಅವರು ಯಾವ ರೀತಿಯ ಆಟಗಾರರು ಮತ್ತು ಇಷ್ಟು ವರ್ಷಗಳಲ್ಲಿ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಏನು ಮಾಡಿದ್ದಾರೆ ಎಂಬ ಕಾರಣಕ್ಕಾಗಿ ನಾವು ಅವರನ್ನು ಬೆಂಬಲಿಸುವುದನ್ನು ಮುಂದುವರಿಸಿದ್ದೇವೆ. ಅವರು ನಿರ್ಣಾಯಕ ಸಂದರ್ಭಗಳಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದಾರೆ ಎಂಬುದನ್ನು ನೀವೂ ನೋಡಿದ್ದೀರಿ. ಎರಡನೇ ಟೆಸ್ಟ್ ನ ಮತ್ತು ಎರಡನೇ ಇನ್ನಿಂಗ್ಸ್‌ ನಲ್ಲಿನ ಅವರ ಪ್ರಮುಖ ಪಾರ್ಟನ್ ಶಿಪ್ ನಿಂದಾಗಿ ನಾವು ಉತ್ತಮ ರನ್ ಗಳಿಸಲು ಸಾಧ್ಯವಾಗಿತ್ತು” ಎಂದು ಕೊಹ್ಲಿ ಹೇಳಿದರು.

ಇದನ್ನೂ ಓದಿ:ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಸಂಕ್ರಾಂತಿ ಸಂಭ್ರಮ: ಸೆಟ್ಟೇರಿದವು ಹಲವು ಚಿತ್ರಗಳು

Advertisement

“ಇವು ಒಂದು ತಂಡವಾಗಿ ನಾವು ಗುರುತಿಸುವ ರೀತಿಯ ಪ್ರದರ್ಶನಗಳಾಗಿವೆ. ಆದರೆ ಆಯ್ಕೆದಾರರ ಮನಸ್ಸಿನಲ್ಲಿ ಏನಿದೆ, ಅವರು ಏನು ಮಾಡಲು ನಿರ್ಧರಿಸುತ್ತಾರೆ ಎಂದು ನಾನು ಈ ಕ್ಷಣದಲ್ಲಿ ಇಲ್ಲಿ ಕುಳಿತುಕೊಂಡು ಅದರ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ” ಎಂದು ವಿರಾಟ್ ಹೇಳಿದರು.

ದಕ್ಷಿಣ ಆಫ್ರಿಕಾ ಸರಣಿಯಲ್ಲಿ ರಹಾನೆ 3 ಟೆಸ್ಟ್‌ಗಳಲ್ಲಿ 136 ರನ್ ಗಳಿಸಿದರೆ, ಪೂಜಾರ 3 ಟೆಸ್ಟ್‌ಗಳಲ್ಲಿ 124 ರನ್ ಗಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next