ತಿರುವನಂತಪುರಂ: ಶ್ರೀಲಂಕಾ ವಿರುದ್ದದ ಏಕದಿನ ಸರಣಿಯ ಅಂತಿಮ ಪಂದ್ಯವನ್ನು ದಾಖಲೆಯ ಅಂತರದಲ್ಲಿ ಗೆದ್ದು ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ತಿರುವನಂತಪುರಂನ ಗ್ರೀನ್ ಫೀಲ್ಡ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡವು ದಸುನ ಶನಕಾ ಪಡೆಯ ಮೇಲೆ ಸಂಪೂರ್ಣ ಸವಾರಿ ಮಾಡಿದೆ.
ವಿರಾಟ್ ಕೊಹ್ಲಿ ಮತ್ತು ಶುಭಮನ್ ಗಿಲ್ ಅವರ ಶತಕದ ನೆರವಿನಿಂದ ಭಾರತ ತಂಡವು ಐದು ವಿಕೆಟ್ ನಷ್ಟಕ್ಕೆ 390 ರನ್ ಗಳಿಸಿದರೆ, ಸಂಪೂರ್ಣ ಶರಣಾದ ಶ್ರೀಲಂಕಾ ಕೇವಲ 73 ರನ್ ಗೆ ಆಲೌಟಾಯಿತು. ರೋಹಿತ್ ಶರ್ಮಾ ಬಳಗವು ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಅತೀ ದೊಡ್ಡ ಅಂದರೆ 317 ರನ್ ಅಂತರದ ಗೆಲುವು ಸಾಧಿಸಿತು.
ಇದೇ ವೇಳೆ ಭಾರತ ತಂಡವು ತನ್ನ ಬೌಲಿಂಗ್ ಆಯ್ಕೆಗಳ ಕುರಿತಾಗಿ ಪ್ರಯೋಗ ನಡೆಸಿತು. ಶ್ರೇಯಸ್ ಅಯ್ಯರ್ ಅವರಿಗೆ ನಾಯಕ ರೋಹಿತ್ ಶರ್ಮಾ ಬೌಲಿಂಗ್ ನೀಡಿದರು.
ಇದನ್ನೂ ಓದಿ:ದೇಶಕ್ಕಾಗಿ ಪ್ರಾಣ ಕೊಡುವುದಕ್ಕಿಂತ ಕೆಲಸ ಮಾಡುವುದು ಮುಖ್ಯ: ಸಿಎಂ ಬೊಮ್ಮಾಯಿ
ಅಯ್ಯರ್ ಅವರ ಸ್ಪಿನ್ನಿಂಗ್ ಎಸೆತವು ವಿರಾಟ್ ಕೊಹ್ಲಿಯನ್ನು ಸಂಪೂರ್ಣವಾಗಿ ಬೆಚ್ಚಿ ಬೀಳಿಸಿತು. ಸ್ಲಿಪ್ ನಲ್ಲಿ ನಿಂತಿದ್ದ ವಿರಾಟ್ ಆಶ್ಚರ್ಯಕರ ಪ್ರತಿಕ್ರಿಯೆ ನೀಡಿದ ವಿಡಿಯೋ ವೈರಲ್ ಆಗಿದೆ.
ಅಯ್ಯರ್ ಅವರು ತಮ್ಮ ಓವರ್ ನಲ್ಲಿ ಕೇವಲ 2 ರನ್‌ಗಳನ್ನು ಬಿಟ್ಟುಕೊಟ್ಟು ಉತ್ತಮ ಆಯ್ಕೆಯಾಗಿ ಹೊರಹೊಮ್ಮಿದರು.