Advertisement

Asia Cup 2023; ’15 ವರ್ಷಗಳಲ್ಲೇ ಇದೇ ಮೊದಲು….’: ಲಂಕಾ ಪಂದ್ಯಕ್ಕೆ ಮೊದಲು ವಿರಾಟ್ ಮಾತು

10:51 AM Sep 12, 2023 | Team Udayavani |

ಕೊಲಂಬೊ: ಏಷ್ಯಾ ಕಪ್ 2023ರ ಕೂಟದಲ್ಲಿ ಭಾರತ ತಂಡ ತನ್ನ ಮೊದಲ ಸೂಪರ್ ಫೋರ್ ಕದನವನ್ನು ಸುಲಭದಲ್ಲಿ ಗೆದ್ದು ಬೀಗಿದೆ. ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ ಬಳಗ 228 ರನ್ ಅಂತರದಿಂದ ಗೆಲುವು ಸಾಧಿಸಿದೆ. ಬ್ಯಾಟರ್ ಗಳ ಅದ್ಭುತ ಪ್ರದರ್ಶನ ಮತ್ತು ಬೌಲರ್ ಗಳ ಸಾಂಘಿಕ ದಾಳಿಯಿಂದ ಬೃಹತ್ ಗೆಲುವು ಸಾಧಿಸಿದ ತಂಡವು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.

Advertisement

ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತೆ ಪಾಕ್ ಮೇಲೆ ಸವಾರಿ ಮಾಡಿದರು. ಕೇವಲ 94 ಎಸೆತಗಳನ್ನು ಎದುರಿಸಿದ ವಿರಾಟ್ ಅಜೇಯ 122 ರನ್ ಬಾರಿಸಿದರು. ಅರ್ಹವಾಗಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿದು ಬಂತು.

ಪಾಕಿಸ್ತಾನ ವಿರುದ್ಧದ ಪಂದ್ಯ ರವಿವಾರ ನಡೆಯಬೇಕಿತ್ತು. ಆದರೆ ಮಳೆಯ ಕಾರಣದಿಂದ ಮೀಸಲು ದಿನವಾದ ಸೋಮವಾರ ಪೂರ್ಣಗೊಂಡಿದೆ. ಮೂಲ ವೇಳಾಪಟ್ಟಿಯಂತೆ ಮಂಗಳವಾರ (ಸೆ.12) ಭಾರತ ತಂಡವು ಶ್ರೀಲಂಕಾ ವಿರುದ್ಧ ಆಡಲಿದೆ. ಇದರ ಬಗ್ಗೆ ವಿರಾಟ್ ಕೊಹ್ಲಿ ಮಾತನಾಡಿದ್ದಾರೆ.

ಇದನ್ನೂ ಓದಿ:Accused arrested: ಅಂಗಡಿಯಲ್ಲಿ ಚಿನ್ನದ ಸರ ಕೊರಳಿಗೆ ಹಾಕಿಕೊಂಡು ಪರಾರಿಯಾಗಿದ್ದವನ ಸೆರೆ

“ನಾನು ರನ್ ಗಾಗಿ ವೇಗವಾಗಿ ಓಡುತ್ತಿದ್ದೆ. ಇದರ ಬಗ್ಗೆ ಖುಷಿಯಿದೆ. ಆದರೆ ನಾಳೆ ಮಧ್ಯಾಹ್ನ 3 ಗಂಟೆಗೆ ಮತ್ತೆ ಆಡಬೇಕಿದೆ ಎಂದು ನಾನು ಯೋಚಿಸುತ್ತಿದ್ದೆ” ಎಂದು ಸೋಮವಾರ ಪ್ರಶಸ್ತಿ ಸಮಾರಂಭದ ವೇಳೆ ಹೇಳಿದರು.

Advertisement

“ಈ ರೀತಿ ಸತತ ಆಡುತ್ತಿರುವುದು ನನ್ನ 15 ವರ್ಷದ ವೃತ್ತಿ ಜೀವನದಲ್ಲೇ ಇದೇ ಮೊದಲು. ಅದೃಷ್ಟಕ್ಕೆ ನಾವು ಟೆಸ್ಟ್ ಆಟಗಾರರು. ನಮಗೆ ಮರುದಿನ ಮತ್ತೆ ಬಂದು ಆಡುವುದು ಗೊತ್ತು. ಚೇತರಿಸಿಕೊಳ್ಳುವುದು ನಿರ್ಣಾಯಕ. ಇಂದು ಅಲ್ಲಿ ತೇವವಿತ್ತು. ನವೆಂಬರ್‌ನಲ್ಲಿ ನನಗೆ 35 ವರ್ಷವಾಗುತ್ತದೆ. ಆದ್ದರಿಂದ ನನ್ನ ಚೇತರಿಕೆಯ ಬಗ್ಗೆ ನಾನು ಕಾಳಜಿ ವಹಿಸಬೇಕಾಗಿದೆ” ಎಂದು ವಿರಾಟ್ ಹೇಳಿದರು.

ಕೊಲಂಬೊದ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ, ಶುಭಮನ್ ಗಿಲ್, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಬ್ಯಾಟಿಂಗ್ ಪರಾಕ್ರಮದಿಂದ ತಂಡಕ್ಕೆ ನೆರವಾದರು. ವಿರಾಟ್ ಮತ್ತು ರಾಹುಲ್ ಶತಕ ಸಿಡಿಸಿದರೆ, ಬೌಲಿಂಗ್ ನಲ್ಲಿ ಕುಲದೀಪ್ ಯಾದವ್ ಐದು ವಿಕೆಟ್ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next