Advertisement

ಸರ್ರೆ ಕೌಂಟಿಗೆ ವಿರಾಟ್‌ ಕೊಹ್ಲಿ

06:00 AM May 04, 2018 | Team Udayavani |

ಹೊಸದಿಲ್ಲಿ: ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಮುಂಬರುವ ಇಂಗ್ಲಿಷ್‌ ಕೌಂಟಿ ಋತುವಿನಲ್ಲಿ ಸರ್ರೆ ಕೌಂಟಿಯನ್ನು ಪ್ರತಿನಿಧಿಸಲಿದ್ದಾರೆ. ಇದನ್ನು ಸರ್ರೆ ಕೌಂಟಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಗುರುವಾರ ಪ್ರಕಟಿಸಿದೆ. 

Advertisement

“ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಜೂನ್‌ ತಿಂಗಳಲ್ಲಿ ನಮ್ಮ ಕೌಂಟಿ ಪರ ಆಡಲಿದ್ದಾರೆ ಎಂಬುದನ್ನು ತಿಳಿಸಲು ಸರ್ರೆ ಕೌಂಟಿ ಕ್ರಿಕೆಟ್‌ ಕ್ಲಬ್‌ ಹರ್ಷಿಸುತ್ತದೆ’ ಎಂದು ಕ್ಲಬ್‌ನ ಪ್ರಕಟನೆ ತಿಳಿಸಿದೆ. ಸರ್ರೆ ಕೌಂಟಿ ಒಪ್ಪಂದಕ್ಕೆ ಸಹಿ ಹಾಕಿದ್ದಾಗಿ ಒಪ್ಪಿಕೊಂಡಿರುವ ವಿರಾಟ್‌ ಕೊಹ್ಲಿ, ಇಂಗ್ಲಿಷ್‌ ಕೌಂಟಿ ಯನ್ನು ಪ್ರತಿನಿಧಿಸುವುದು ತನ್ನ ಬಹು ದಿನಗಳ ಕನಸಾಗಿತ್ತು ಎಂದಿದ್ದಾರೆ.  

ಕೊಹ್ಲಿ ಜೂನ್‌ ತಿಂಗಳಲ್ಲಿ ಸರ್ರೆ ಪರ 3 ಕ್ರಿಕೆಟ್‌ ಸರಣಿಗಳಲ್ಲಿ ಆಡಲಿದ್ದಾರೆ. ಹೀಗಾಗಿ ಜೂ. 14ರಿಂದ 18ರ ತನಕ ಬೆಂಗಳೂರಿನಲ್ಲಿ ನಡೆಯಲಿರುವ ಅಫ್ಘಾನಿಸ್ಥಾನ ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯದಿಂದ ಹೊರಗುಳಿಯಬೇಕಾಗುತ್ತದೆ. ಇದರೊಂದಿಗೆ ಪ್ರಸಕ್ತ ಕೌಂಟಿ ಋತುವಿನಲ್ಲಿ ಆಡಲಿರುವ ಭಾರ ತೀಯ ಆಟಗಾರರ ಸಂಖ್ಯೆ 5ಕ್ಕೆ ಏರಿತು. ಉಳಿದವರೆಂದರೆ ಚೇತೇ ಶ್ವರ್‌ ಪೂಜಾರ (ಯಾರ್ಕ್‌ಸೈರ್‌), ಇಶಾಂತ್‌ ಶರ್ಮ (ಸಸೆಕ್ಸ್‌), ವರುಣ್‌ ಆರೋನ್‌ (ಲೀಸೆಸ್ಟರ್‌ಶೈರ್‌) ಮತ್ತು ಅಕ್ಷರ್‌ ಪಟೇಲ್‌ (ಡ್ಯುರ್‌ಹ್ಯಾಮ್‌).

Advertisement

Udayavani is now on Telegram. Click here to join our channel and stay updated with the latest news.

Next