ಲಂಡನ್: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸತತ ವೈಫಲ್ಯ ಅನುಭವಿಸುತ್ತಿದ್ದಾರೆ. ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲೂ ವಿರಾಟ್ ಕೊಹ್ಲಿ ಅಗ್ಗಕ್ಕೆ ವಿಕೆಟ್ ಒಪ್ಪಿಸಿದರು.
ವಿರಾಟ್ ಕೊಹ್ಲಿ ಇಂಗ್ಲೆಂಡ್ ನಲ್ಲಿ ಅದರಲ್ಲೂ ಜೇಮ್ಸ್ ಆ್ಯಂಡರ್ಸನ್ ವಿರುದ್ಧ ಅನುಭವಿಸುತ್ತಿರುವ ಸಮಸ್ಯೆಯನ್ನು ಬಗೆಹರಿಸಲು ಸಚಿನ್ ತೆಂಡೂಲ್ಕರ್ ಜೊತೆ ಮಾತನಾಡಬೇಕಾದ ಅನಿವಾರ್ಯತೆಯಿದೆ ಎಂದು ಸುನೀಲ್ ಗಾವಸ್ಕರ್ ಹೇಳಿದ್ದಾರೆ.
ಲೀಡ್ಸ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ 17 ಎಸೆತ ಎದುರಿಸಿ 7 ರನ್ ಮಾತ್ರ ಗಳಿಸಿದ್ದರು. ಜೇಮ್ಸ್ ಅ್ಯಂಡರ್ಸನ್ ಎಸೆತದಲ್ಲಿ ಜೋಸ್ ಬಟ್ಲರ್ ಗೆ ಕ್ಯಾಚ್ ನೀಡಿ ವಿರಾಟ್ ನಿರ್ಗಮಿಸಿದ್ದರು. ಟೆಸ್ಟ್ ಕ್ರಿಕೆಟ್ ನಲ್ಲಿ ಏಳನೇ ಬಾರಿಗೆ ವಿರಾಟ್ ಕೊಹ್ಲಿ ವಿಕೆಟ್ ಒಪ್ಪಿಸಿದರು.
ಇದನ್ನೂ ಓದಿ:ಆಸ್ಟ್ರೇಲಿಯದ ಸೈಕ್ಲಿಸ್ಟ್‌ಗೆ ಬಂಗಾರ
ಈ ವೇಳೆ ವೀಕ್ಷಕ ವಿವರಣೆ ನೀಡುತ್ತಿದ್ದ ಸುನೀಲ್ ಗಾವಸ್ಕರ್, ವಿರಾಟ್ ಕೊಹ್ಲಿಯು ತ್ವರಿತವಾಗಿ ಸಚಿನ್ ತೆಂಡೂಲ್ಕರ್ ಗೆ ಕರೆ ಮಾಡಿ, ತಾನೇನು ಮಾಡಬೇಕು ಎಂದು ಕೇಳುವ ಅಗತ್ಯವಿದೆ ಎಂದರು.
ಸಚಿನ್ ತೆಂಡೂಲ್ಕರ್ ಸಿಡ್ನಿ ಟೆಸ್ಟ್ ನಲ್ಲಿ ಏನು ಮಾಡಿದ್ದರು ಅದನ್ನೇ ವಿರಾಟ್ ಮಾಡುವ ಅಗತ್ಯವಿದೆ. ತಾನು ಕವರ್ ಡ್ರೈವ್ ಆಡುವುದಿಲ್ಲ ಎಂದು ವಿರಾಟ್ ನಿರ್ಧರಿಸಿ ಆಡಬೇಕಿದೆ ಎಂದು ಗಾವಸ್ಕರ್ ಹೇಳಿದರು.