ಹೊಸದಿಲ್ಲಿ: ರಾವಲ್ಪಿಂಡಿಯಲ್ಲಿ ನಡೆದ ಪಾಕಿಸ್ಥಾನ-ಆಸ್ಟ್ರೇಲಿಯ ನಡುವಿನ ಟೆಸ್ಟ್ ಪಂದ್ಯದ ವೇಳೆ ವಿರಾಟ್ ಕೊಹ್ಲಿಯ ಪೋಸ್ಟರ್ ಗಮನ ಸೆಳೆದಿದೆ!
ಪ್ರೇಕ್ಷಕರ ಗ್ಯಾಲರಿಯಲ್ಲಿ ಅಭಿಮಾನಿ ಯೋರ್ವ, ಕೊಹ್ಲಿ ತಮ್ಮ 71ನೇ ಶತಕ ಪಾಕಿ ಸ್ಥಾನದಲ್ಲಿ ಬಾರಿಸಬೇಕು ಎಂದು ಪೋಸ್ಟರ್ ಹಿಡಿದು ನಿಂತಿದ್ದ. ಈ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಲ್ಲಿ ಭಾರತೀಯ ಕ್ರಿಕೆಟಿಗೆ ಸಂಬಂಧಿಸಿದ ಮತ್ತೂಂದು ಪೋಸ್ಟರ್ ಕೂಡ ಕಾಣಿಸಿ ಕೊಂಡಿದೆ. ಭಾರತ-ಪಾಕಿಸ್ಥಾನ ನಡುವಿನ ಮುಂಬರುವ ಟಿ20 ವಿಶ್ವಕಪ್‌ನಲ್ಲಿ ರೋಹಿತ್-ಶಾಹೀನ್ ಅಫ್ರಿದಿ ಮುಖಾಮುಖೀ ಯಾಗಲಿದ್ದಾರೆ ಎಂಬ ಪೋಸ್ಟರ್ ಮತ್ತೋರ್ವ ಅಭಿಮಾನಿಯ ಕೈಯಲ್ಲಿತ್ತು!
ಪಾಕ್‌ನಲ್ಲಿ ಕೊಹ್ಲಿಯ ಪೋಸ್ಟರ್‌ಗಳು ಕಾಣಿಸಿಕೊಳ್ಳುತ್ತಿರುವುದು ಇದೇ ಮೊದ ಲೇನಲ್ಲ. ಈ ಹಿಂದೆ “ಪಾಕಿಸ್ಥಾನ್ ಸೂಪರ್ ಲೀಗ್’ ಕೂಡ ಇದಕ್ಕೆ ಸಾಕ್ಷಿಯಾಗಿತ್ತು.ಆಗ ಅಭಿಮಾನಿಯೊಬ್ಬ ಪಾಕ್‌ನಲ್ಲಿ ನಿಮ್ಮ ಶತಕ ನೋಡಬೇಕು ಎಂದು ಬರೆದುಕೊಂಡಿದ್ದ!