ಬೆಂಗಳೂರು: ಸಾರ್ವಕಾಲಿಕ ಅತ್ಯುತ್ತಮ ಬ್ಯಾಟರ್ ಗಳಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ ಸದ್ಯ ಉತ್ತಮ ಫಾರ್ಮ್ ನಲ್ಲಿದ್ದಾರೆ. ಐಪಿಎಲ್ ನಲ್ಲಿ ಎಂಎಸ್ ಧೋನಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಡ್ವೇನ್ ಬ್ರಾವೋ, ಸುರೇಶ್ ರೈನಾ, ಮುಂತಾದವರು ಸೇರಿದಂತೆ ಲೀಗ್ ನಲ್ಲಿ ಕೆಲವು ದೊಡ್ಡ ಹೆಸರು ಮಾಡಿದ ಸಾಧಕರಿದ್ದಾರೆ. ಆದರೆ ಐಪಿಎಲ್ ನ GOAT ಯಾರು ಎಂದು ವಿರಾಟ್ ಕೊಹ್ಲಿ ಅವರನ್ನು ಆಯ್ಕೆ ಮಾಡಲು ಕೇಳಿದಾಗ, ಇದು ತುಂಬಾ ಕಷ್ಟದ ಕೆಲಸ ಎಂದು ಹೇಳಿದರು.
ಜಿಯೋ ಸಿನಿಮಾದ ಪ್ರಶ್ನೋತ್ತರದಲ್ಲಿ ವಿರಾಟ್ ಕೊಹ್ಲಿ ಐಪಿಎಲ್ ಗೆ ಸಂಬಂಧಿಸಿದ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು.
ಐಪಿಎಲ್ GOAT (Greatest Of All Time) ಆಟಗಾರ ಯಾರು ಎಂದು ಕೇಳಿದಾಗ ವಿರಾಟ್ ಕೊಹ್ಲಿ ಅವರು ಎರಡು ಹೆಸರುಗಳನ್ನು ಆಯ್ಕೆ ಮಾಡಿದರು. ಮಾಜಿ ಆರ್ ಸಿಬಿ ಆಟಗಾರ ಎಬಿ ಡಿವಿಲಿಯರ್ಸ್ ಮತ್ತು ಮುಂಬೈ ಇಂಡಿಯನ್ಸ್ ನ ಲಸಿತ್ ಮಾಲಿಂಗ ಐಪಿಎಲ್ ನ ಸಾರ್ವಕಾಲಿಕ ಶ್ರೇಷ್ಠ ಆಟಗಾರರು ಎಂದರು.
ಡಿವಿಲಿಯರ್ಸ್ ಅವರು ಐಪಿಎಲ್ ಕಂಡ ಅತ್ಯುತ್ತಮ ಫಿನಿಶರ್ ಗಳಲ್ಲಿ ಒಬ್ಬರು. ಅವರ 184 ಐಪಿಎಲ್ ಪಂದ್ಯಗಳಲ್ಲಿ, ಡಿವಿಲಿಯರ್ಸ್ 39.71 ರ ಸರಾಸರಿಯಲ್ಲಿ 151.69 ರ ಸ್ಟ್ರೈಕ್-ರೇಟ್‌ನಲ್ಲಿ 5162 ರನ್ ಗಳಿಸಿದರು.
ತನ್ನ ಸಂಪೂರ್ಣ ಐಪಿಎಲ್ ವೃತ್ತಿಜೀವನದಲ್ಲಿ ಮುಂಬೈ ಇಂಡಿಯನ್ಸ್‌ಗಾಗಿ ಮಾತ್ರ ಆಡಿದ ಮಾಲಿಂಗ 122 ಪಂದ್ಯಗಳಲ್ಲಿ 7.14 ರ ಅದ್ಭುತ ಏಕಾನಮಿ ರೇಟ್ ನಲ್ಲಿ 170 ವಿಕೆಟ್ ಗಳನ್ನು ಪಡೆದರು.
ವಿರಾಟ್ ಉತ್ತರಿಸಿದ ಕೆಲವು ಪ್ರಶ್ನೆಗಳು
ಮೋಸ್ಟ್ ಅಂಡರ್ ರೇಟೆಡ್ ಬ್ಯಾಟರ್: ಅಂಬಟಿ ರಾಯುಡು.
ಶ್ರೇಷ್ಠ ಆಲ್ ರೌಂಡರ್: ಶೇನ್ ವ್ಯಾಟ್ಸನ್.
ನರೈನ್ ಮತ್ತು ರಶೀದ್ ನಡುವೆ ಉತ್ತಮ ಸ್ಪಿನ್ನರ್: ರಶೀದ್.
ಟಿ20ಯಲ್ಲಿ ಮೆಚ್ಚಿನ ಶಾಟ್: ಪುಲ್ ಶಾಟ್.
ಅಚ್ಚುಮೆಚ್ಚಿನ ಎದುರಾಳಿ ತಂಡ: ಸಿಎಸ್‌ಕೆ ದೊಡ್ಡ ಅಭಿಮಾನಿ ಬಳಗದಿಂದಾಗಿ.