Advertisement
ಆಸ್ಟ್ರೇಲಿಯದಲ್ಲಿ ಆಡಲಾದ ಅಡಿಲೇಡ್ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಹೀನಾಯ ಸೋಲನುಭವಿಸಿತ್ತು. ಬಳಿಕ ಅಜಿಂಕ್ಯ ರಹಾನೆ ಸಾರಥ್ಯದಲ್ಲಿ ಸರಣಿ ಗೆದ್ದು ಮೆರೆದದ್ದು ಈಗ ಇತಿಹಾಸ. ಹೀಗಾಗಿ ಟೆಸ್ಟ್ ತಂಡಕ್ಕೆ ರಹಾನೆ ಸಾರಥ್ಯವೇ ಸೂಕ್ತ ಎಂಬ ಅಭಿಪ್ರಾಯ ಎಲ್ಲೆಡೆ ಕೇಳಿಬರುತ್ತಿರುವ ಹೊತ್ತಿನಲ್ಲೇ ಕೊಹ್ಲಿ ಮರಳಿ ನಾಯಕತ್ವದ ಜವಾಬ್ದಾರಿ ಹೊರಲಿದ್ದಾರೆ. ಇದರಲ್ಲಿ ಅವರು ಯಶಸ್ಸು ಸಾಧಿಸಬೇಕಾದ ತುರ್ತು ಅಗತ್ಯ ಇದೆ. ಆಗ ಕೊಹ್ಲಿ ಕೆಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳಲಿದ್ದಾರೆ.
ಇವುಗಳಲ್ಲೊಂದು ದಾಖಲೆಯೆಂದರೆ, ಭಾರತದಲ್ಲಿ ಅತ್ಯಧಿಕ ಗೆಲುವು ಸಾಧಿಸಿದ ನಾಯಕನಾಗಿ ಮೂಡಿಬರುವುದು. ಸದ್ಯ 21 ಟೆಸ್ಟ್ ಪಂದ್ಯಗಳಲ್ಲಿ ಗೆಲುವು ಕಂಡ ಮಹೇಂದ್ರ ಸಿಂಗ್ ಧೋನಿ ಹೆಸರಲ್ಲಿ ಈ ದಾಖಲೆ ಇದೆ. ಕೊಹ್ಲಿ ತವರಿನ 20 ಟೆಸ್ಟ್‌ಗಳಲ್ಲಿ ಗೆಲುವು ಕಂಡಿದ್ದಾರೆ. ನಾಲ್ಕರಲ್ಲಿ ಎರಡು ಟೆಸ್ಟ್‌ಗಳನ್ನು ಗೆದ್ದರೆ ದಾಖಲೆ ಕೊಹ್ಲಿ ಪಾಲಾಗಲಿದೆ. ಇದನ್ನೂ ಓದಿ:ಇಸ್ರೇಲ್ ಎಂಬೆಸಿ ಸ್ಫೋಟ ಪ್ರಕರಣ : ಎನ್‌ಐಎ ನೇತೃತ್ವದಲ್ಲಿ ತನಿಖೆ
Related Articles
ಟೆಸ್ಟ್ ನಾಯಕನಾಗಿ ಅತ್ಯಧಿಕ ರನ್ ಬಾರಿಸಿದ ಸಾಧಕರ ಯಾದಿಯಲ್ಲಿ ಮೇಲೇರುವ ಅವಕಾಶವೂ ವಿರಾಟ್ ಕೊಹ್ಲಿ ಮುಂದಿದೆ. ಇದಕ್ಕೆ ಬೇಕಿರುವುದು ಕೇವಲ 14 ರನ್ ಮಾತ್ರ. ಆಗ ಕೊಹ್ಲಿ ವೆಸ್ಟ್ ಇಂಡೀಸಿಕ ಕ್ಲೈವ್ ಲಾಯ್ಡ ಅವರನ್ನು ಮೀರಿ 4ನೇ ಸ್ಥಾನಕ್ಕೆ ಏರಲಿದ್ದಾರೆ. ಸದ್ಯ ಕೊಹ್ಲಿ ನಾಯಕನಾಗಿ 5,220 ರನ್ ಬಾರಿಸಿದ್ದಾರೆ.
Advertisement
ದಾಖಲೆ 8,659 ರನ್ ಬಾರಿಸಿದ ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ ಹೆಸರಲ್ಲಿದೆ. ಆಸ್ಟ್ರೇಲಿಯದ ಅಲನ್ ಬೋರ್ಡರ್ ದ್ವಿತೀಯ (6,623), ರಿಕಿ ಪಾಂಟಿಂಗ್ ತೃತೀಯ ಸ್ಥಾನದಲ್ಲಿದ್ದಾರೆ (6,542 ರನ್).