Advertisement
ಅಯರ್‌ಲ್ಯಾಂಡ್ ವಿರುದ್ಧ ಜೂನ್ 27 ಮತ್ತು 29ರಂದು ಎರಡು ಟಿ20 ಪಂದ್ಯ ನಡೆಯಲಿವೆ. ಇದಕ್ಕೂ ಮುನ್ನವೇ ವಿರಾಟ್ ಕೊಹ್ಲಿ, ಇಂಗ್ಲೆಂಡ್‌ನ ಕೌಂಟಿ ತಂಡ ಸರ್ರೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಜೂನ್ ತಿಂಗಳಿಡೀ ತಿಂಗಳು ಆ ತಂಡದ ಪರ ಆಡುವುದಾಗಿ ತಿಳಿಸಿದ್ದರು. ಇದನ್ನು ಸರ್ರೆ ವೆಬ್‌ಸೈಟ್‌ನಲ್ಲಿ ಮುಂಚೆಯೇ ಪ್ರಕಟಿಸಲಾಗಿತ್ತು. ಆ ಪ್ರಕಾರ ಕೊಹ್ಲಿ ಜೂ .25ರಿಂದ 28ರ ತನಕ ಸರ್ರೆ ಪರ ಯಾರ್ಕ್‌ಶೈರ್ ವಿರುದ್ಧ ಕೌಂಟಿ ಪಂದ್ಯವಾಡಲಿದ್ದಾರೆ. ಮುಂದೆ ಇಂಗ್ಲೆಂಡ್ ಪ್ರವಾಸವಿರುವುದರಿಂದ ಅದಕ್ಕೆ ಸಿದ್ಧವಾಗಲಿಕ್ಕಾಗಿಯೇ ಕೊಹ್ಲಿ ಈ ವ್ಯವಸ್ಥೆ ಮಾಡಿಕೊಂಡಿದ್ದರು.
ವಿರಾಟ್ ಕೊಹ್ಲಿಯ ನಿರ್ಧಾರ ಬಿಸಿಸಿಐಗೆ ಗೊತ್ತಿದ್ದರೂ ಅಯರ್‌ಲ್ಯಾಂಡ್ ವಿರುದ್ಧ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿರುವುದು ಅನೇಕ ಪ್ರಶ್ನೆಗಳನ್ನು ಮೂಡಿಸಿವೆ. ಮೂಲಗಳ ಪ್ರಕಾರ ಕೊಹ್ಲಿಯನ್ನು ಹೀಗೆ ಆಯ್ಕೆ ಮಾಡುವುದಕ್ಕೆ ಒಳಜಗಳ ಕಾರಣ ಎನ್ನಲಾಗಿದೆ. ಜೂ. 14ರಿಂದ ಬೆಂಗಳೂರಿನಲ್ಲಿ ಆಫ್ಘಾನಿಸ್ಥಾನದ ಪಾದಾರ್ಪಣೆ ಟೆಸ್ಟ್ ಪಂದ್ಯ ನಡೆಯಲಿದೆ. ಇದರಲ್ಲಿ ಆಡದಿರಲು ಕೊಹ್ಲಿ ನಿರ್ಧರಿಸಿದ್ದಾರೆ. ಇದನ್ನು ಬಿಸಿಸಿಐನ ಒಂದು ಬಣ ವಿರೋಧಿಸಿದೆ. ಮತ್ತೂಂದು ಬಣ ಬೆಂಬಲಿಸಿದೆ. ಈ ಜಗಳ ಅವರನ್ನು ಅಯರ್‌ಲ್ಯಾಂಡ್‌ಗೆ ಆಯ್ಕೆ ಮಾಡುವುದರೊಂದಿಗೆ ಮುಕ್ತಾಯವಾಗಿದೆ ಎಂದು ಹೇಳಲಾಗಿದೆ. ಕೊಹ್ಲಿ ಆಡುತ್ತಾರೆ: ಬಿಸಿಸಿಐ ಸ್ಪಷ್ಟನೆ
ಈ ಗೊಂದಲಗಳ ಕುರಿತು ಬಿಸಿಸಿಐ ಕಾರ್ಯದರ್ಶಿ ಅಮಿತಾಭ್ ಚೌಧರಿ ಅವರನ್ನು ಪ್ರಶ್ನಿಸಿದಾಗ, ಎಲ್ಲವೂ ಸರಿಯಾಗಿದೆ ಎಂದು ಉತ್ತರಿಸಿದ್ದಾರೆ.
Related Articles
Advertisement