Advertisement

ವಿರಾಟ್‌ ಕೊಹ್ಲಿ ವಿಶ್ವದ ಶ್ರೇಷ್ಠ ಆಟಗಾರ: ಕೆವಿನ್‌ ಪೀಟರ್ಸನ್‌

11:57 PM May 16, 2020 | Sriram |

ಹೊಸದಿಲ್ಲಿ: ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌ ಆಗಿದ್ದು ಆಸೀಸ್‌ ತಂಡದ ಸ್ಟಿವನ್‌ ಸ್ಮಿತ್‌ ಅವರು ಕೊಹ್ಲಿ ದಾಖಲೆಗಳ ಸಮೀಪ ಕೂಡ ಬರಲು ಸಾಧ್ಯವಿಲ್ಲ ಎಂದು ಇಂಗ್ಲೆಂಡ್‌ ತಂಡದ ಮಾಜಿ ಆಟಗಾರ ಕೆವಿನ್‌ ಪೀಟರ್ಸನ್‌ ಹೇಳಿದ್ದಾರೆ.

Advertisement

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ವಿರಾಟ್‌ ಕೊಹ್ಲಿ ಚೇಸಿಂಗ್‌ ವಿಷಯಕ್ಕೆ ಬಂದಾಗ ಭಾರತದ ಪರ ಅತ್ಯುತ್ತಮ ದಾಖಲೆಯನ್ನು ಹೊಂದಿದ್ದಾರೆ. ಟೀಮ್‌ ಇಂಡಿಯಾ ಪರ ಅದ್ಭುತ ಬ್ಯಾಟ್ಸ್‌ಮನ್‌ ಸ್ಮಿತ್‌ ಕೊಹ್ಲಿ ದಾಖಲೆಗಳ ಸಮೀಪ ಕೂಡ ಬರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಕೊಹ್ಲಿ ಅವರ ಚೇಸಿಂಗ್‌ ದಾಖಲೆಗಳು ಭಯಾನಕವಾಗಿವೆ. ಅವರು ಚೇಸಿಂಗ್‌ ವೇಳೆ ಶೇ. 80 ಕ್ಕಿಂತ ಹೆಚ್ಚು ಸರಾಸರಿ ಹೊಂದಿದ್ದಾರೆ. ಬ್ಯಾಟಿಂಗ್‌ ನಲ್ಲಿ ಅತ್ಯುತ್ತಮ ಸ್ಥಿರತೆ ಹೊಂದಿದ್ದಾರೆ. ಎಂತಹುದೇ ಕ್ಲಿಷ್ಟಕರ ಪರಿಸ್ಥಿತಿ ಇದ್ದರೂ ತಮ್ಮ ಅಮೋಘ ಬ್ಯಾಟಿಂಗ್‌ ಕೌಶಲ್ಯದ ಮೂಲಕ ಪರಿಸ್ಥಿತಿಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುತ್ತಾರೆ. ಆ ಮೂಲಕ ತಂಡದ ಗೆಲುವಿಗೆ ಕಾರಣರಾಗುತ್ತಾರೆ ಎಂದು ಪೀಟರ್ಸನ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next