ಪರ್ತ್: ಟಿ20 ವಿಶ್ವಕಪ್ 2022ರ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಐದು ವಿಕೆಟ್‌ಗಳ ಸೋಲನುಭವಿಸಿದೆ. ಸತತ ಎರಡು ಪಂದ್ಯ ಗೆದ್ದಿದ್ದ ರೋಹಿತ್ ಶರ್ಮಾ ಬಳಗ ಸೂಪರ್ 12ನ ಮೂರನೇ ಪಂದ್ಯದಲ್ಲಿ ಮುಗ್ಗರಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು 9 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿದರೆ, ದಕ್ಷಿಣ ಆಫ್ರಿಕಾ ತಂಡವು 19.4 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿ ಜಯ ಸಾಧಿಸಿತು.
ಪಂದ್ಯದ ಬಳಿಕ ಮಾತನಾಡಿದ ಭುವನೇಶ್ವರ್ ಕುಮಾರ್ ಅವರು, ನಾವು ಏಡನ್ ಮಾರ್ಕ್‌ರಾಮ್ ಕ್ಯಾಚ್ ಪಡೆದಿದ್ದರೆ ಅಥವಾ ಒಂದೆರಡು ರನೌಟ್‌ಗಳು ಸರಿಯಾಗಿ ನಡೆದಿದ್ದರೆ ಫಲಿತಾಂಶ ವಿಭಿನ್ನವಾಗಿರಬಹುದಿತ್ತು ಎಂದರು. ಮಾರ್ಕ್‌ರಾಮ್ ಅವರು 35 ರನ್ ಗಳಿಸಿದ್ದಾಗ ರವಿಚಂದ್ರನ್ ಅಶ್ವಿನ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ ನಲ್ಲಿ ವಿರಾಟ್ ಕೊಹ್ಲಿ ಸುಲಭ ಕ್ಯಾಚನ್ನು ಕೈಚೆಲ್ಲಿದರು.
ಇದನ್ನೂ ಓದಿ:15 ಸಾವಿರಕ್ಕೂ ಅಧಿಕ ಪೌಷ್ಟಿಕ ತೋಟ : ಪೌಷ್ಟಿಕ ತೋಟದಲ್ಲಿ ಏನೇನು ಇರಲಿದೆ?
“ಹೌದು, ಆ ಕ್ಯಾಚ್ ಗಳನ್ನು ಪಡೆದಿದ್ದರೆ ಫಲಿತಾಂಶ ಭಿನ್ನವಾಗಿರುತ್ತಿತ್ತು. ಕ್ಯಾಚ್ ಗಳು ಪಂದ್ಯಗಳನ್ನು ಗೆಲ್ಲುತ್ತವೆ” ಎಂದು ಭುವನೇಶ್ವರ್ ಪಂದ್ಯದ ನಂತರ ಹೇಳಿದರು.
ಮಾರ್ಕ್ರಾಮ್ 41 ಎಸೆತಗಳಲ್ಲಿ 52 ರನ್ ಗಳಿಸಿದರು ಮತ್ತು ಡೇವಿಡ್ ಮಿಲ್ಲರ್ (ಅಜೇಯ 59) ಅವರೊಂದಿಗೆ ನಾಲ್ಕನೇ ವಿಕೆಟ್‌ಗೆ 76 ನಿರ್ಣಾಯಕ ರನ್ ಜೊತೆಯಾಟವಾಡಿದರು.