Advertisement

Virat Kohli: ಅತೀ ಹೆಚ್ಚು ರನ್ ಗಳಿಸಿದವರ ಟಾಪ್ 5 ಪಟ್ಟಿ ಸೇರಿದ ವಿರಾಟ್ ಕೊಹ್ಲಿ

01:55 PM Jul 21, 2023 | Team Udayavani |

ಪೋರ್ಟ್ ಆಫ್ ಸ್ಪೇನ್: ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಶುಕ್ರವಾರ ದಕ್ಷಿಣ ಆಫ್ರಿಕಾದ ಜಾಕ್ವೆಸ್ ಕಾಲಿಸ್ ಅವರನ್ನು ಹಿಂದಿಕ್ಕಿ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಐದನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ.

Advertisement

ಪೋರ್ಟ್ ಆಫ್ ಸ್ಪೇನ್‌ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಭಾರತದ ಎರಡನೇ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಈ ಸಾಧನೆ ಮಾಡಿದರು. 500 ನೇ ಅಂತಾರಾಷ್ಟ್ರೀಯ ಪಂದ್ಯವಾಡುತ್ತಿರುವ ವಿರಾಟ್ 161 ಎಸೆತಗಳಲ್ಲಿ 87 ರನ್ ಗಳಿಸಿ ಅಜೇಯರಾಗಿ ಬ್ಯಾಟಿಂಗ್ ಉಳಿಸಿಕೊಂಡಿದ್ದಾರೆ. ಈ ಇನ್ನಿಂಗ್ಸ್ ನಲ್ಲಿ ಅವರು ಇದುವರೆಗೆ ಎಂಟು ಬೌಂಡರಿಗಳನ್ನು ಬಾರಿಸಿದ್ದಾರೆ. ಪಂದ್ಯದ ಎರಡನೇ ದಿನದಾಟದಲ್ಲಿ ವಿರಾಟ್ ತಮ್ಮ 76 ನೇ ಅಂತಾರಾಷ್ಟ್ರೀಯ ಶತಕವನ್ನು ಸಿಡಿಸುವುದನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

ವಿರಾಟ್ 500 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 53.67ರ ಸರಾಸರಿಯಲ್ಲಿ 25548 ರನ್ ಗಳಿಸಿದ್ದಾರೆ. 75 ಶತಕ 132 ಅರ್ಧಶತಕ ಬಾರಿಸಿದ್ದಾರೆ. ದಕ್ಷಿಣ ಆಫ್ರಿಕಾದ ಲೆಜೆಂಡರಿ ಆಟಗಾರ ಜ್ಯಾಕ್ ಕ್ಯಾಲಿಸ್ ಅವರು 519 ಪಂದ್ಯಗಳಲ್ಲಿ 25,534 ರನ್ ಗಳಿಸಿದ್ದರು. ಇದರಲ್ಲಿ 62 ಶತಕ ಮತ್ತು 149 ಅರ್ಧ ಶತಕಗಳು ಸೇರಿವೆ.

ಇದನ್ನೂ ಓದಿ:Mangaluru: ಮೂವರು ಭಜರಂಗದಳ ಕಾರ್ಯಕರ್ತರಿಗೆ ಗಡಿಪಾರು ನೋಟಿಸ್

ಪ್ರಸ್ತುತ, ಶ್ರೀಲಂಕಾದ ಮಹೇಲಾ ಜಯವರ್ಧನೆ (652 ಪಂದ್ಯಗಳಲ್ಲಿ 25,957 ರನ್), ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ (560 ಪಂದ್ಯಗಳಲ್ಲಿ 27,483 ರನ್), ಲಂಕಾದ ಕುಮಾರ ಸಂಗಕ್ಕಾರ (594 ಪಂದ್ಯಗಳಲ್ಲಿ 28,016 ರನ್) ಮತ್ತು ಭಾರತದ ದಂತಕಥೆ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ (664 ಪಂದ್ಯಗಳಲ್ಲಿ 34,357 ರನ್) ಅವರಂತಹ ಆಟಗಾರರು ಕೊಹ್ಲಿಗಿಂತ ಮುಂದಿದ್ದಾರೆ.

Advertisement

ವಿರಾಟ್ ಕೊಹ್ಲಿ ತಮ್ಮ 500ನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಮತ್ತು ಎಂಎಸ್ ಧೋನಿ ನಂತರ 500 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ ನಾಲ್ಕನೇ ಭಾರತೀಯ ಕೊಹ್ಲಿ.

Advertisement

Udayavani is now on Telegram. Click here to join our channel and stay updated with the latest news.

Next