Advertisement

ವಿವಿಯನ್ ರಿಚರ್ಡ್ ಗೆ ಬಿಗ್ ಬಾಸ್ ಎಂದ ವಿರಾಟ್ ಕೊಹ್ಲಿ

10:13 AM Dec 09, 2019 | Team Udayavani |

ತಿರುವನಂತಪುರ: ವೆಸ್ಟ್ ಇಂಡೀಸ್ ನ ಕ್ರಿಕೆಟ್ ದಂತಕಥೆ  ವಿವಿಯನ್ ರಿಚರ್ಡ್ ರನ್ನು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಬಿಗ್ ಬಾಸ್ ಎಂದು ಕರೆದಿದ್ದಾರೆ.

Advertisement

ವೆಸ್ಟ್ ಇಂಡೀಸ್ ವಿರುದ್ಧದ ಹೈದರಾಬಾದ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಈ ಭರ್ಜರಿ ಬ್ಯಾಟಿಂಗ್ ಅನ್ನು ಮೆಚ್ಚಿ ವಿವಿಯನ್ ರಿಚರ್ಡ್ ಟ್ವೀಟ್ ಮಾಡಿದ್ದರು.

ಉಪ್ಪಳ್ ಅಂಗಳದಲ್ಲಿ ಕೊಹ್ಲಿ ಸಿಡಿಸಿದ್ದ 94 ರನ್ ನೋಡಿ ವಿವಿಯನ್ ರಿಚರ್ಡ್ ‘ಅದ್ಭುತ’ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರಕಿಕ್ರಿಯೆ ನೀಡಿರುವ ವಿರಾಟ್, ಧನ್ಯವಾದಗಳು ಬಿಗ್ ಬಾಸ್. ನಿಮ್ಮ ಈ ಮಾತುಗಳು ನನಗೆ ಅತ್ಯಮೂಲ್ಯ ಎಂಬರ್ಥದಲ್ಲಿ ಕೊಹ್ಲಿ ಟ್ವೀಟ್ ಮಾಡಿದ್ದಾರೆ.

ಮೊದಲ ಟಿ ಟ್ವೆಂಟಿ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನೀಡಿದ್ದ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡಕ್ಕೆ ಆಸರೆಯಾದ ಕೊಹ್ಲಿ ಅಜೇಯ 94 ರನ್ ಬಾರಿಸಿದ್ದರು. ಕೇವಲ 50 ಎಸೆತ ಎದುರಿಸಿದ್ದ ವಿರಾಟ್ ತಲಾ ಆರು ಬೌಂಡರಿ- ಸಿಕ್ಸರ್ ಬಾರಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next