Advertisement

IPL 2023 ಮುನಿಸು ಮರೆತ ದಾದಾ- ಕಿಂಗ್: DC- RCB ಪಂದ್ಯದ ಬಳಿಕ ನಡೆದಿದ್ದೇನು?

01:43 PM May 07, 2023 | Team Udayavani |

ಹೊಸದಿಲ್ಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಶನಿವಾರದ ಐಪಿಎಲ್ ಪಂದ್ಯದಲ್ಲಿ ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಆತಿಥೇಯ ಡೆಲ್ಲಿ ತಂಡವು ಗೆಲುವು ಸಾಧಿಸಿದೆ.

Advertisement

ಈ ಪಂದ್ಯವು ವಿರಾಟ್ ಕೊಹ್ಲಿ ಮತ್ತು ಸೌರವ್ ಗಂಗೂಲಿ ಕಾರಣಕ್ಕೆ ಮಹತ್ವ ಪಡೆದಿತ್ತು. ಈ ಹಿಂದಿನ ಮುಖಾಮುಖಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಗಂಗೂಲಿ ನಡುವಿನ ಶೀತಲ ಸಮರ ಜಗಜ್ಜಾಹೀರಾಗಿತ್ತು. ಇವರಿಬ್ಬರೂ ಕೈ ಕುಲಕದೆ ಕೋಪ ತೋರಿದ್ದರು. ಘಟನೆಯ ನಂತರ ಇಬ್ಬರೂ ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಅನ್‌ಫಾಲೋ ಮಾಡಿದ ಬಗ್ಗೆಯೂ ವರದಿಯಾಗಿತ್ತು.

ಆದರೆ ಶನಿವಾರದ ಪಂದ್ಯದ ಬಳಿಕ ವಿರಾಟ್ ಮತ್ತು ಗಂಗೂಲಿ ಹಸ್ತಲಾಘವ ಮಾಡಿಕೊಂಡಿದ್ದಾರೆ. ಈ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.

ಇದನ್ನೂ ಓದಿ:ಕಾಂಗ್ರೆಸ್ ಪ್ರಣಾಳಿಕೆಗೆ ‘ಬಜರಂಗದಳ- ಪಿಎಫ್ಐ ನಿಷೇಧ’ ಸೇರಿದ್ಹೇಗೆ? ಇಲ್ಲಿದೆ Inside story

ಹೊಸದಿಲ್ಲಿಯಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಾಲ್ಕು ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿದರೆ, ಫಿಲ್ ಸಾಲ್ಟ್ ಬ್ಯಾಟಿಂಗ್ ಸಹಾಯದಿಂದ ಡೆಲ್ಲಿ ತಂಡವು 16.4 ಓವರ್ ನಲ್ಲಿ ಮೂರು ವಿಕೆಟ್ ಕಳೆದುಕೊಂಡು 187 ರನ್ ಮಾಡಿ ಜಯ ಗಳಿಸಿತು. ಫಿಲ್ ಸಾಲ್ಟ್ 45 ಎಸೆತದಲ್ಲಿ 87 ರನ್ ಬಾರಿಸಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next