Advertisement

Viral Video: ಫಿಲಡೆಲ್ಫಿಯಾ ಬೀದಿ, ಬೀದಿಯಲ್ಲಿ ವಿಚಿತ್ರ ವರ್ತನೆ…ಏನಿದು ಜೋಂಬಿ ಡ್ರಗ್‌ !

05:03 PM May 29, 2023 | Team Udayavani |

ವಾಷಿಂಗ್ಟನ್:‌ ಅಮೆರಿಕದ ಫಿಲಡೆಲ್ಫಿಯಾದ ಬೀದಿಗಳಲ್ಲಿ “ಜೋಂಬಿ ಡ್ರಗ್ಸ್”‌ ಸೇವಿಸಿ ಜೋಂಬಿಯಂತೆ ವರ್ತಿಸುತ್ತಿರುವವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ‌

Advertisement

ಇದನ್ನೂ ಓದಿ:Actress: ಮೊದಲ ಮಗುವಿನ ನಿರೀಕ್ಷೆ; ಬಣ್ಣದ ಲೋಕ ತೊರೆಯಲು ನಿರ್ಧರಿಸಿದ ಖ್ಯಾತ ನಟಿ

ವಿಯೋನ್‌ ನ್ಯೂಸ್‌ ವರದಿಯ ಪ್ರಕಾರ, ಕೆನ್ಸಿಂಗ್ಟನ್‌ ನೆರೆಹೊರೆ ಪ್ರದೇಶದಲ್ಲಿ ಜೋಂಬಿ ಡ್ರಗ್ಸ್‌ ವ್ಯಸನಿಗಳು ಜೋಂಬಿಗಳಂತೆ ವರ್ತಿಸುತ್ತಿರುವುದು ಸೆರೆಯಾಗಿದೆ. Raphouse Tv ತನ್ನ ಟ್ವೀಟರ್‌ ಹ್ಯಾಂಡಲ್‌ ನಲ್ಲಿ ವಿಡಿಯೋವನ್ನು ಅಪ್‌ ಲೋಡ್‌ ಮಾಡಿದೆ.

ಕ್ಸೈಲಾಝಿನ್‌ ಅಥವಾ ಟ್ರಾಂಖ್‌ ಡ್ರಗ್‌ ಅತಿಯಾಗಿ ಸೇವಿಸುವವರ ಸಂಖ್ಯೆ ಅಮೆರಿಕದ ಪ್ರಮುಖ ನಗರಗಳಲ್ಲಿ ಕಂಡು ಬರುತ್ತಿದ್ದು, ಕ್ಸೈಲಾಝಿನ್‌ ಸೇವನೆಯಿಂದ ಚರ್ಮ ಕೊಳೆಯಲು ಆರಂಭವಾಗುತ್ತದೆ ಎಂಬುದು ಆರೋಗ್ಯ ತಜ್ಞರ ಅಭಿಪ್ರಾಯವಾಗಿದೆ.

ಜೋಂಬಿ ವರ್ತನೆ ಏಕೆ?

Advertisement

ಡ್ರಗ್‌ ಓವರ್‌ಡೋಸ್‌ ಆಗುತ್ತಿದ್ದಂತೆ ಹಲವು ರೀತಿಯ ಸಮಸ್ಯೆ ಎದುರಾ­ಗುತ್ತದೆ. ತೀವ್ರ ನಿದ್ರೆ, ಖನ್ನತೆ, ಮೈ ಮೇಲಿನ ನಿಯಂತ್ರಣ ತಪ್ಪು ವುದು ವರದಿಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಜನರು ಜೋಂಬಿ ಗಳ ರೀತಿಯೇ ವರ್ತಿಸುತ್ತಿದ್ದು, ಈ ಔಷಧ ಮನುಷ್ಯರನ್ನು ಜೋಂಬಿಗಳಾಗಿ ಪರಿವರ್ತಿ­ಸುತ್ತಿದೆಯೇ ಎನ್ನುವ ಆತಂಕವೂ ಮೂಡಿದೆ. ಡ್ರಗ್‌ ಓವರ್‌ಡೋಸ್‌ನಿಂದ 2020ರಲ್ಲಿ ಮೃತಪಟ್ಟವರಲ್ಲಿ ಶೇ.6.7 ಮಂದಿಯಲ್ಲಿ ಕ್ಸೆ„ಲಾಜಿನ್‌ ಅಂಶವಿರುವುದು ಪತ್ತೆಯಾಗಿತ್ತು. ಈಗ ಮತ್ತೆ ಅದರ ಅಕ್ರಮ ಬಳಕೆ ಹೆಚ್ಚಾಗಿರುವುದು ವರದಿಯಾಗಿದೆ.

ಏನಿದು ಜೋಂಬಿ ಡ್ರಗ್‌?

ಕ್ಸೆ„ಲಾಜಿನ್‌ ಅಥವಾ ಜೋಂಬಿ ಡ್ರಗ್‌ ಎನ್ನುವ ಔಷಧವನ್ನು ಪ್ರಾಣಿಗಳಿಗೆ ಮಾತ್ರ ಬಳಸಲು ಪ್ರಮಾಣೀಕರಿ­ಸಲಾಗಿದೆ. ಆದರೆ ನಿಷೇಧಿತ ಮಾದಕವಸ್ತು­ಗಳಲ್ಲಿಯೂ ಈ ಡ್ರಗ್‌ ಅನ್ನು ಅಕ್ರಮವಾಗಿ ಬಳಸುತ್ತಿರು­ವುದು ವರದಿಯಾಗಿದೆ. ಮನುಷ್ಯರು ಇದರ ಬಳಿಯಿರುವ ಮಾದಕ­ ವಸ್ತುಗಳನ್ನು ಸೇವಿಸುತ್ತಿದ್ದಂತೆ ಡ್ರಗ್‌ ಓವರ್‌ ಡೋಸ್‌ ಆಗಿ ಸಾಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next