Advertisement

ರಾಜಕಾರಣಿಗಳ ವಿರೋಧಿ ಹೇಳಿಕೆ: ವಾಸು ಮಲ್ಪೆಗೆ ಪೊಲೀಸರ ಎಚ್ಚರಿಕೆ

05:13 AM Mar 18, 2019 | |

ಮಲ್ಪೆ: ಸಾಮಾಜಿಕ ಜಾಲತಾಣದಲ್ಲಿ “ವೈರಲ್‌ ಸ್ಟಾರ್‌’ ಎಂದು ಪ್ರಸಿದ್ಧಿ ಪಡೆದಿರುವ ವಾಸು ಮಲ್ಪೆ ಅವರನ್ನು ರಾಜಕೀಯ ಪಕ್ಷವೊಂದರ ನಾಯಕರ ವಿರುದ್ಧ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ರವಿವಾರ ಸೆನ್‌ ಅಪರಾಧ ಪೊಲೀಸರು ಠಾಣೆಗೆ ಕರೆಸಿ ಎಚ್ಚರಿಕೆ ನೀಡಿದ್ದಾರೆ.

Advertisement

ರಾಜಕೀಯ ಪ್ರೇರಿತ ಮಾತುಗಳು, ಒಂದು ಪಕ್ಷದ ವಿರುದ್ಧ ತೆಗಳುವುದು, ರಾಜಕೀಯ ಪಕ್ಷ ಒಂದರ ನಾಯಕರ ಬಗ್ಗೆ ಕೀಳಾಗಿ  ಮಾತನಾಡುವ, ಅಪಹಾಸ್ಯ ಮಾಡುವ ಇವರ ವಿಡಿಯೋಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್  ಆಗಿದ್ದವು.  ವಾಸು ಅವರ ಬಳಿ ಮೊಬೈಲ್ ಇಲ್ಲ, ಮಲ್ಪೆ ಪರಿಸರದಲ್ಲಿ ತಿರುಗಾಡುವ ಈ ವ್ಯಕ್ತಿಗೆ ಅಪರಿಚಿತರು ಹಣ, ಮದ್ಯದ ಆಸೆ ತೋರಿಸಿ  ವೀಡಿಯೋ ಮಾಡಿ ಸಾಮಾಜಿಕ  ಜಾಲತಾಣದಲ್ಲಿ ಹರಿಯಬಿಡುತ್ತಾರೆ.

ಚುನಾವಣೆ ಸಂಹಿತೆ  ಜಾರಿ ಯಲ್ಲಿರುವ ಸಮಯದಲ್ಲಿ, ಮತ್ತು ಸಮಾಜದ ಸ್ವಾಸ್ಥ್ಯ ಕಾಪಾಡುವ ಉದ್ದೇಶದಿಂದ ವಾಸು ಅವರನ್ನು ಕರೆತಂದು ಎಚ್ಚರಿಕೆ ನೀಡಿ ಕಳಿಸಿದ್ದೇವೆ. ಮುಂದಿನ ದಿನಗಳಲ್ಲಿ ವಾಸು ಅವರ ವಿಡಿಯೋ ಚಿತ್ರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು  ಸೆನ್‌ ಅಪರಾಧ ಪೊಲೀಸರು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next