ಬೆಂಗಳೂರು : ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಳ್ಳುವುದು ಬೆಂಗಳೂರಿಗರಿಗೆ ಹೊಸತೇನಲ್ಲ, ಆದರೆ ಟ್ರಾಫಿಕ್ ಜಾಮ್‌ನಿಂದಾಗಿ ತನ್ನ ಪ್ರೇಮಕಥೆ ಅರಳಿತು ಎಂದು ಬೆಂಗಳೂರಿನ ನಿವಾಸಿಯೊಬ್ಬರು ಹೇಳಿದ್ದಾರೆ.
ರೆಡ್ಡಿಟ್ ಬಳಕೆದಾರರೊಬ್ಬರು ತನ್ನ ಪೋಸ್ಟ್‌ನಲ್ಲಿ ಅರಳಿದ ಪ್ರೇಮ ಕಥೆಯ ಕುರಿತು ಬರೆದಿದ್ದಾರೆ, ಅವರು ಈಗ ಈಜಿಪುರ ಫ್ಲೈಓವರ್ ಕೆಲಸದಿಂದಾಗಿ ಟ್ರಾಫಿಕ್ ಜಾಮ್‌ನಿಂದ ಸೋನಿ ವರ್ಲ್ಡ್ ಸಿಗ್ನಲ್ ಬಳಿ ಅವರ ಬಾಳ ಸಂಗಾತಿಯನ್ನು ಕಂಡು ಕೊಂಡಿದ್ದಾರೆ ಎಂದು ಪೋಸ್ಟ್ ಮಾಡಲಾಗಿದ್ದು, ಫ್ಲೈಓವರ್ ನಿರ್ಮಾಣ ಕಾರ್ಯದ ವೇಗದ ಬಗ್ಗೆ ಅಧಿಕಾರಿಗಳನ್ನು ಗೇಲಿ ಮಾಡುವುದರೊಂದಿಗೆ ಮುಕ್ತಾಯವಾಗಿದೆ!.
ಇದನ್ನೂ ಓದಿ: ರಸ್ತೆ ಹೊಂಡದ ಮಧ್ಯ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿದ ವಧು!: ವಿಡಿಯೋ ವೈರಲ್
” ನಾನು ನನ್ನ ಹೆಂಡತಿಯನ್ನು ಸೋನಿ ವರ್ಲ್ಡ್ ಸಿಗ್ನಲ್ ಬಳಿ ಭೇಟಿಯಾದೆ. ನಾನು ಇಡೀ ಕಥೆಯನ್ನು ಇಲ್ಲಿ ಹಾಕಿಲ್ಲ, ಆದರೆ ಸಾರಾಂಶವೆಂದರೆ ಒಂದು ದಿನ ನಾನು ಅವಳ ಮನೆಗೆ ಡ್ರಾಪ್ ಮಾಡುತ್ತಿದ್ದೆ (ಆಗ ಅವಳು ಸ್ನೇಹಿತ ಎಂದು ಮಾತ್ರ ತಿಳಿದಿದ್ದಳು) ಮತ್ತು ನಾವು ಈಜಿಪುರ ಫ್ಲೈಓವರ್ ಸಿಲುಕಿಕೊಂಡೆವು. ನಾವು ನಿರಾಶೆಗೊಂಡಿದ್ದೆವು, ಹಸಿದಿದ್ದೆವು ಕೂಡಲೇ ಹತ್ತಿರದಲ್ಲೇ ಊಟ ಮಾಡಿದೆವು. ಹೇಗಾದರೂ, ನಾನು ಅವಳೊಂದಿಗೆ 3 ವರ್ಷಗಳ ಕಾಲ ಡೇಟಿಂಗ್ ಮಾಡಿದ್ದೇನೆ ಮತ್ತು 2 ವರ್ಷಗಳ ಹಿಂದೆ ಮದುವೆಯಾಗಿದ್ದೇನೆ, ಆದರೆ 2.5 ಕಿಮೀ ಫ್ಲೈಓವರ್ ಇನ್ನೂ ನಿರ್ಮಾಣ ಹಂತದಲ್ಲಿದೆ, ”ಎಂದು ರೆಡ್ಡಿಟ್ ಪೋಸ್ಟ್ ನಲ್ಲಿ ಬರೆದು ನಿರ್ಮಾಣ ಕಾರ್ಯದ ಆಮೆ ನಡಿಗೆಯ ಕುರಿತು ಗಮನ ಸೆಳೆಯಲಾಗಿದೆ.
ಟ್ವಿಟರ್ ಬಳಕೆದಾರರು ರೆಡ್ಡಿಟ್ ಪೋಸ್ಟ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ ಮತ್ತು ಹಲವಾರು ನೆಟಿಜನ್‌ಗಳು ಬೆಂಗಳೂರು ಟ್ರಾಫಿಕ್ ಲವ್ ಸ್ಟೋರಿಗೆ ಪ್ರತಿಕ್ರಿಯಿಸಿದ್ದಾರೆ.