Advertisement

ಹಸಿರು ಸೊಪ್ಪಿಗೆ ಕೆಮಿಕಲ್‌ ಸೆಲ್ಯೂಷನ್‌- ವಿಡಿಯೋ ವೈರಲ್‌

07:49 PM Mar 21, 2023 | Team Udayavani |

ಇತ್ತೀಚಿನ ದಿನಗಳಲ್ಲಿ ನಾವು ಸೇವಿಸುವ ಎಲ್ಲ ಆಹಾರ ಪದಾರ್ಥಗಳು ಕಲಬೆರಕೆ ಆಗುತ್ತಿರುವುದು ಗೊತ್ತಿಲ್ಲದ ವಿಚಾರವೇನಲ್ಲ. ತರಕಾರಿ, ಹಣ್ಣುಗಳ ಮೇಲೆ ಕೀಟನಾಶಕ ಸಿಂಪಡಿಸುವುದು ಒಂದೆಡೆಯಾದರೆ, ಗ್ರಾಹಕರಿಗೆ ಆಕರ್ಷಕವಾಗಿ ಕಾಣಲಿ ಎಂದು ಬಣ್ಣ ಬಳಿಯುವುದು ಕೂಡ ಹೊಸದೇನಲ್ಲ.

Advertisement

ಆದರೆ, ಈಗ ನೆಟ್ಟಿಗರನ್ನು ಚಿಂತೆಗೇಡು ಮಾಡುತ್ತಿರುವುದು ಒಣಗಿದ ಸೊಪ್ಪನ್ನು ಈಗಷ್ಟೇ ಕೃಷಿ ಭೂಮಿಯಿಂದ ತೆಗೆದುಕೊಂಡು ಬಂದಂತೆ ಪರಿವರ್ತಿಸುವ ಅಂಶದ ಬಗ್ಗೆ. ಸೊಪ್ಪು ಮಾರುವ ವ್ಯಕ್ತಿಯೊಬ್ಬ ಒಣಗಿದ ಸೊಪ್ಪಿನ ಗಂಟೊಂದನ್ನು ದ್ರವ್ಯ ಒಂದರಲ್ಲಿ ಅದ್ದಿ, ಅದು ಕೆಲವೇ ಸೆಕೆಂಡುಗಳಲ್ಲಿ ಈಗಷ್ಟೇ ಕಿತ್ತಿರುವ ಹಸನಾದ ಸೊಪ್ಪಿನಂತೆ ಬದಲಾಗುತ್ತದೆ. ಈ ವಿಡಿಯೋ ಈಗ ವೈರಲ್‌ ಆಗಿದೆ.

ಟ್ವಿಟರ್‌ ಸೇರಿದಂತೆ ಹಲವು ಜಾಲತಾಣಗಳಲ್ಲಿ ಅದು ವೈರಲ್‌ ಆಗಿದೆ. 70 ಸಾವಿರಕ್ಕೂ ಅಧಿಕ ಮಂದಿ ಅದನ್ನು ವೀಕ್ಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next