ಹೊಸದಿಲ್ಲಿ: ಹಾವುಗಳು ಏಕಕಾಲದಲ್ಲಿ ಗಾಂಭೀರ್ಯ ಮತ್ತು ಭಯಂಕರವಾದ ಭಯವನ್ನೂ ಉತ್ಪತ್ತಿ ಮಾಡಬಲ್ಲ ಜೀವಿಗಳು. ಭಾರತೀಯ ಕಾಡುಗಳು ಇಂತಹ ಹಲವಾರು ವೈವಿಧ್ಯಮಯ ಜೀವಿಗಳನ್ನು ತನ್ನ ಒಡಲೊಳಗೆ ಹೊಂದಿದೆ. ಡಿಜಿಟಲ್ ಕ್ರಾಂತಿಯ ಈ ಯುಗದಲ್ಲಿ ಜಗತ್ತನ್ನು ಹತ್ತಿರಕ್ಕೆ ತಂದಂತೆ ಪ್ರಾಣಿ ಪ್ರಪಂಚದ ವಿಡಿಯೋಗಳು, ಫೋಟೋಗಳು ಕೂಡ ಸಂವೇದನೆಯಾಗಿ ಮಾರ್ಪಟ್ಟಿದ್ದು, ಅದಕ್ಕೆ ಹೊಸ ಸೇರ್ಪಡೆಯಾಗಿ ಒಟ್ಟಿಗೆ ಇರುವ ಕಪ್ಪು ಬಣ್ಣದ ಮೂರು ಹಾವುಗಳ ಈ ಫೋಟೋ ಅಂತರ್ಜಾಲದಲ್ಲಿ ಬಿರುಗಾಳಿ ಎಬ್ಬಿಸಿದೆ.
ಮಹಾರಾಷ್ಟ್ರದಲ್ಲಿ ಕಂಡು ಬಂಡ ಮೂರು ಕಪ್ಪು ನಾಗರ ಹಾವುಗಳ ಚಿತ್ರವೊಂದು ನೆಟ್ಟಿಗರನ್ನು ಬೆಚ್ಚಿ ಬೀಳಿಸಿದೆ. ಐಎಫ್‌ಎಸ್ ಅಧಿಕಾರಿ ಸುಸಂತ ನಂದಾ ಅವರು ಟ್ವಿಟ್ಟರ್‌ನಲ್ಲಿ ಈ ಫೋಟೋ ಹಂಚಿಕೊಂಡಿದ್ದು, ಅಮರಾವತಿ ಜಿಲ್ಲೆಯ ಹರಿಸಲ್ ಕಾಡಿನಲ್ಲಿ ಮರದ ತೊಗಟೆಯ ಸುತ್ತಲೂ ಮೂರು ನಾಗರಹಾವುಗಳು ಸುತ್ತಿರುವುದನ್ನು ಕಾಣಬಹುದಾಗಿದೆ.
ಮಾಧ್ಯಮಗಳ ವರದಿ ಪ್ರಕಾರ, ಈ ಚಿತ್ರಗಳನ್ನು ಮೊದಲು ಭಾರತೀಯ ವನ್ಯಜೀವಿ ಹೆಸರಿನ ಫೇಸ್‌ಬುಕ್ ಗುಂಪಿನಲ್ಲಿ ಹಂಚಿಕೊಳ್ಳಲಾಯಿತು ಮತ್ತು ಹಾವುಗಳನ್ನು ರಕ್ಷಿಸಿ ಹರಿಸಲ್ ಕಾಡಿನಲ್ಲಿ ಬಿಡುಗಡೆ ಮಾಡಿದ ನಂತರ ತೆಗೆಯಲಾಗಿದೆ.
ಐಎಫ್‌ಎಸ್ ಅಧಿಕಾರಿ ನಂದಾ ಅವರು ನವೆಂಬರ್ 16 ರಂದು ಟ್ವೀಟ್ ಮಾಡಿ, “ಆಶೀರ್ವಾದಗಳು… ಒಂದೇ ಸಮಯದಲ್ಲಿ ಮೂರು ನಾಗರ ಹಾವುಗಳು ನಿಮ್ಮನ್ನು ಆಶೀರ್ವದಿಸಿದಾಗ.” ಎಂದು ಬರೆದಿದ್ದರು.