Advertisement
ಗುರುವಾರ ಪಶ್ಚಿಮ ಬಂಗಾಲದಲ್ಲೂ ಸ್ಥಳಾಂತರ ಆರಂಭಿಸಲಾಗಿದ್ದು, 3.5 ಲಕ್ಷ ಜನರನ್ನು ಸ್ಥಳಾಂತರ ಮಾಡಲಾಗಿದೆ. 2 ರಾಜ್ಯಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಪುರಿಯ ಜಗನ್ನಾಥ ಮಂದಿರಕ್ಕೆ ಭೇಟಿ ನೀಡಬೇಡಿ ಎಂದು ಒಡಿಶಾ ಸರಕಾರ ಭಕ್ತರಿಗೆ ಮನವಿ ಮಾಡಿದೆ. ಇದೇ ವೇಳೆ, ಚಂಡಮಾರುತದ ಪ್ರಭಾವದಿಂದಾಗಿ ಝಾರ್ಖಂಡ್ನಲ್ಲಿಯೂ ಧಾರಾಕಾರ ಮಳೆಯಾಗಲಿದೆ. ಹೀಗಾಗಿ ಅಲ್ಲಿಯೂ ಕೂಡ ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಲಾಗಿದೆ.
Related Articles
Advertisement
ಸೈಕ್ಲೋನ್ ಹಿನ್ನೆಲೆ: 350 ರೈಲುಗಳ ರದ್ದುಸೈಕ್ಲೋನ್ ಹಿನ್ನೆಲೆಯಲ್ಲಿ ಒಡಿಶಾ, ಪಶ್ಚಿಮ ಬಂಗಾಲ ಮೂಲಕ ಸಂಚರಿಸಲಿರುವ 350ಕ್ಕೂ ಹೆಚ್ಚು ರೈಲುಗಳ ಸಂಚಾರ ರದ್ದು ಮಾಡಲಾಗಿದೆ. ಹೌರಾ- ಸಿಕಂದಾರಾಬಾದ್, ಸಂಭಾಲ್ಪುರ-ಪುರಿ ಎಕ್ಸ್ಪ್ರೆಸ್ ಸೇರಿದಂತೆ 350ಕ್ಕೂ ಹೆಚ್ಚು ರೈಲುಗಳನ್ನು ರದ್ದು ಮಾಡ ಲಾಗಿದೆ ಎಂದು ರೈಲ್ವೇ ಇಲಾಖೆ ತಿಳಿಸಿದೆ. ಕರ್ನಾಟಕದ 2 ರೈಲುಗಳೂ ರದ್ದು
ಚಂಡಮಾರುತ ಹಿನ್ನೆಲೆಯಲ್ಲಿ ಪುರಿ- ಯಶವಂತಪುರ ಗರೀಬ್ ರಥ ಸಾಪ್ತಾಹಿಕ ಎಕ್ಸ್ ಪ್ರಸ್, ಅ. 26ರಂದು ಯಶವಂತಪುರದಿಂದ ಹೊರಡುವ ಯಶವಂತಪುರ-ಪುರಿ ಗರೀಬ್ ರಥ ಸಾಪ್ತಾಹಿಕ ಎಕ್ಸ್ಪ್ರೆಸ್, ಅ.27ರಂದು ಗುವಾಹಾಟಿಯಿಂದ ಹೊರಡುವ ಗುವಾ ಹಾಟಿ- ಎಸ್ಎಂವಿಟಿ ಬೆಂಗಳೂರು ಟ್ರೆ„-ವೀಕ್ಲಿ ಎಕ್ಸ್ ಪ್ರಸ್ ಸಂಚಾರ ರದ್ದು ಮಾಡಲಾಗಿದೆ. ಬಂಗಾಲದಲ್ಲಿ 3.5 ಲಕ್ಷ, ಒಡಿಶಾದಲ್ಲಿ 10 ಲಕ್ಷ ಮಂದಿ ಸ್ಥಳಾಂತರ
ಪಶ್ಚಿಮ ಬಂಗಾಲದಲ್ಲಿ ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವ ಸುಮಾರು 3.5 ಲಕ್ಷ ಮಂದಿಯನ್ನು ಸ್ಥಳಾಂತರ ಮಾಡಲು ಸರಕಾರ ಸೂಚಿಸಿದೆ. ಸಮರೋಪಾದಿಯಲ್ಲಿ ಈ ಕೆಲಸ ಕೈಗೊಂಡಿರುವ ವಿಪತ್ತು ನಿರ್ವಹಣ ದಳ ಹಾಗೂ ಪೊಲೀಸರು, ಎಲ್ಲರನ್ನೂ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸುತ್ತಿದ್ದಾರೆ. ಪೊಲೀಸರಿಗೆ ಸ್ಥಳಾಂತರಕ್ಕೆ ಸಹಕರಿಸಿ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮನವಿ ಮಾಡಿದ್ದಾರೆ. ಇದೇ ವೇಳೆ, ಒಡಿಶಾದ 14 ಜಿಲ್ಲೆಗಳಲ್ಲಿ 10 ಲಕ್ಷ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ. ಕೋಲ್ಕತಾ ವಿ.ನಿಲ್ದಾಣದಲ್ಲಿ 15 ಗಂಟೆ ಹಾರಾಟ ಸ್ಥಗಿತ
ಚಂಡಮಾರುತ ಹಿನ್ನೆಲೆಯಲ್ಲಿ ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ಗುರುವಾರ ಸಂಜೆ 5 ಗಂಟೆಯಿಂದ ಶುಕ್ರವಾರ ಬೆಳಗ್ಗೆ 9 ಗಂಟೆಯವರೆಗೆ ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿದೆ.