Advertisement
ರಿಷಿ ಸುನಕ್ ಮತ್ತು ಆಶಿಷ್ ನೆಹ್ರಾ ವಾಸ್ತವದಲ್ಲಿ ಅಣ್ಣ-ತಮ್ಮ ಆಗಿರಬಹುದು. ಕುಂಭಮೇಳದಲ್ಲಿ ಅವರಿಬ್ಬರೂ ಕಳೆದು ಹೋಗಿದ್ದಿರಬಹುದು.***
ಯುಕೆ ಪ್ರಧಾನಿಯಾಗಿ ನೇಮಕಗೊಂಡ ಆಶಿಷ್ ನೆಹ್ರಾರಿಗೆ ಅಭಿನಂದನೆಗಳು. ಈಗಲಾದರೂ “ಅದನ್ನು’ (ಕೊಹಿನೂರ್) ವಾಪಸ್ ತನ್ನಿ.
1. ಮೊದಲು ಸುನಕ್‌ರನ್ನು ಭಾರತಕ್ಕೆ ಆಹ್ವಾನಿಸುವುದು.
2. ತಮ್ಮ ಮಾವನ ಮನೆಗೆ ಹೋಗುತ್ತಾ, ಬೆಂಗಳೂರು ಟ್ರಾಕ್‌ನಲ್ಲಿ ಸಿಕ್ಕಿಹಾಕಿಕೊಂಡಾಗ ಅವರನ್ನು ಕಿಡ್ನ್ಯಾಪ್ ಮಾಡುವುದು.
3. ಆಶಿಷ್ ನೆಹ್ರಾರನ್ನು ಯುಕೆ ಪ್ರಧಾನಿ ಎಂದು ಹೇಳಿ ಬ್ರಿಟನ್‌ಗೆ ಕಳುಹಿಸುವುದು.
4. ಕೊಹಿನೂರ್ ಅನ್ನು ಭಾರತಕ್ಕೆ ವಾಪಸ್ ಕೊಡುವ ಬಗ್ಗೆ ವಿಧೇಯಕವನ್ನು ಅಂಗೀಕರಿಸುವುದು. (ಇದಕ್ಕೆ ಪ್ಲ್ರಾನ್ “ಬಿ’ ಅಗತ್ಯವಿಲ್ಲ)
***
ಆಶಿಷ್ ನೆಹ್ರಾರಿಗೆ ಅಭಿನಂದನೆಗಳು. 2003ರಲ್ಲಿ ಇಂಗ್ಲೆಂಡ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ 6 ವಿಕೆಟ್‌ಗಳನ್ನು ಪಡೆಯುವುದರಿಂದ ಹಿಡಿದು ಈಗ ಇಂಗ್ಲೆಂಡ್‌ನ ಪ್ರಧಾನಿಯಾಗುವವರೆಗೆ… ಎಂಥಾ ಅದ್ಭುತ
ಪಯಣ.
***
ಇಮ್ರಾನ್ ಖಾನ್ ಬಳಿಕ ದೇಶವೊಂದರ ಪ್ರಧಾನಿ ಪಟ್ಟಕ್ಕೆ ಏರಿರುವ 2ನೇ ಕ್ರಿಕೆಟರ್ ಆಶಿಷ್ ನೆಹ್ರಾ. ಅಭಿನಂದನೆಗಳು
***
ರಿಷಿ ಸುನಕ್ ಅವರು ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾಗಿರುವ ಕಾರಣ, ಆಶಿಷ್ ನೆಹ್ರಾರ ಭದ್ರತೆಯನ್ನು ಹೆಚ್ಚಿಸಬೇಕಾಗಿ ವಿನಂತಿ.