Advertisement

Viral: ಲಾಟರಿಯಿಂದ ಬಂದ ಲಕ್ಷಾಂತರ ರೂ.ಹಣವನ್ನು IVF ವಿಧಾನಕ್ಕೆ ಬಳಸಿ ಮಗು ಪಡೆದ ದಂಪತಿ

01:17 PM Apr 17, 2023 | Team Udayavani |

ಲಂಡನ್:‌ ಜೀವನದಲ್ಲಿ ಯಾರಿಗೆ ಯಾವಾಗ ಅದೃಷ್ಟ ಖುಲಾಯಿಸುತ್ತದೆ ಎಂದು ಹೇಳಲಾಗದು. ಒಂದು ವೇಳೆ ನಮಗೆ ಲಾಟರಿ ಮೂಲಕ ಕೋಟಿ ಅಥವಾ ಲಕ್ಷ ರೂ. ಸಿಕ್ಕರೆ ಏನು ಮಾಡಬಹುದು? ಮುಲಾಜಿಲ್ಲದೆ ಮೊದಲು ನಮ್ಮ ಯೋಚನೆಗೆ ಬರುವುದು ಒಂದು ಗಾಡಿ ಖರೀದಿಸಬೇಕು, ಮನೆ ಕಟ್ಟಬೇಕು ಇತ್ಯಾದಿ ಯೋಚನೆಗಳೇ. ಆದರೆ ಇಲ್ಲೊಂದು ದಂಪತಿಗೆ ಸಿಕ್ಕ ಲಾಟರಿ ಹಣದಿಂದ ಅವರ ಕುಟುಂಬಕ್ಕೆ ಸಂತಸವನ್ನೇ ಕರೆ ತಂದಿದ್ದಾರೆ.

Advertisement

2018 ರಲ್ಲಿ ಮದುವೆಯಾದ ಎಲ್ಲೀ ಹಿಂಟನ್ ಹಾಗೂ ಕ್ಯಾಮರೂನ್ ದಂಪತಿಗೆ ಮಕ್ಕಳಾಗುವುದಿಲ್ಲ. ಇದೇ ಯೋಚನೆಯಲ್ಲಿದ್ದ ಅವರಿಗೆ ಐವಿಎಫ್‌ (IVF ಎಂದರೆ ಇನ್ ವಿಟ್ರೋ ಫರ್ಟಿಲೈಝೇಶನ್ ಅಥವಾ ಕಸಿ ಪದ್ದತಿ ಎಂದು ಕರೆಯುತ್ತಾರೆ . ಇದು ತಾಯಿಯ ದೇಹದ ಹೊರಗಡೆ ಅಂದರೆ ಪ್ರಯೋಗಾಲಯದಲ್ಲಿ ನಡೆಸುವ ಚಿಕಿತ್ಸೆ ಆಗಿರುತ್ತದೆ.) ಮೂಲಕ ಮಗು ಪಡೆಯುವ ನಿರ್ಧಾರವನ್ನು ಮಾಡುತ್ತಾರೆ. ತಮ್ಮ ಪೋಷಕರ ಸಹಾಯದಿಂದ ದಂಪತಿ ಐವಿಎಫ್‌ ಚಿಕಿತ್ಸೆಯಿಂದ ಲಂಡನ್‌ ನ ಬ್ರಿಸ್ಟಲ್‌ನಲ್ಲಿರುವ ಸೌತ್‌ಮೀಡ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡುತ್ತಾರೆ.

ಎರಡನೇ ಮಗು ಸರಿಯಾದ ರೀತಿ ಆಗಬಹುದು ಅಂದುಕೊಂಡಿದ್ದ ದಂಪತಿಗೆ ಮತ್ತೆ ನಿರಾಶೆಯಾಗಿದೆ. ಎರಡನೇ ಮಗುವಿನ ನಿರೀಕ್ಷೆ ಹುಸಿಯಾಗಿದೆ. ಐವಿಎಫ್‌ ವಿಧಾನಕ್ಕಾಗಿ ಮತ್ತೆ ದಂಪತಿ ತಯಾರಾಗಿದೆ. ಆದರೆ ದುಬಾರಿ ಚಿಕಿತ್ಸೆಗೆ ಹಣ ಹೊಂದಿಸಲು ಕಷ್ಟವಾಗಿದೆ.

ಆಗಸ್ಟ್‌ 2021 ರಲ್ಲಿ ದಂಪತಿಯ ಜೀವನವೇ ಬದಲಾಗಿದೆ. ದಂಪತಿ ಖರೀದಿಸಿದ್ದ ಪೀಪಲ್ಸ್ ಪೋಸ್ಟ್‌ಕೋಡ್ ಲಾಟರಿಯಲ್ಲಿ ಅವರಿಗೆ £30,000 (30,51,188.15 ಲ.ರೂ.) ಹಣ ಸಿಕ್ಕಿದೆ. ಇಷ್ಟು ಹಣ ಬಂದರೆ ನಾವು – ನೀವು ದುಬಾರಿ ಗಾಡಿ, ಬಟ್ಟೆ ಖರೀದಿಸಿ ಐಷಾರಾಮಿಯಾಗಿ ಬದುಕಿದ್ದೇವೇನೋ ಆದರೆ ಈ ದಂಪತಿ ಬಂದ ಲಾಟರಿ ಹಣದಿಂದ ತನ್ನ ಕುಟುಂಬಕ್ಕೆ ಮತ್ತೊಂದು ಮುದ್ದಾದ ಮಗಳನ್ನು ಬರಮಾಡಿಕೊಂಡಿದೆ.!

2022 ಮಾರ್ಚ್‌ನಲ್ಲಿ ಈ ಹಣದಲ್ಲಿ ಭ್ರೂಣ ವರ್ಗಾವಣೆ(embryo transfer) ಯನ್ನು ಮಾಡಿದೆ. ಆಗ ಅವರ ಎರಡನೇ ಮಗುವಿನ ಐವಿಎಫ್‌ ವಿಧಾನ ಯಶಸ್ವಿಯಾಗಿದೆ. ನವೆಂಬರ್‌ ನಲ್ಲಿ (2022) ರಲ್ಲಿ ಎಲ್ಲೀ ಹಿಂಟನ್ ಮತ್ತೊಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

Advertisement

ಮಗುವಿಗೆ ಮಟಿಲ್ಡಾ ಎನ್ನುವ ಹೆಸರನ್ನಿಡಲಾಗಿದೆ. ನಮ್ಮ ಮಕ್ಕಳೊಂದಿಗೆ ನಾವು ತುಂಬಾ ಸಂತೋಷದಲ್ಲಿದ್ದೇವೆ. ಬಂಜೆತನದಿಂದ ಬಳಲುತ್ತಿರವವರ ಬಗ್ಗೆ ನನಗೆ ತುಂಬಾ ಸಹಾನುಭೂತಿಯಿದೆ ಎಂದು ಎಲ್ಲೀ ಹಿಂಟನ್ ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next