ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಹಾಗೂ ಹೈಬೀಮ್ ಎಲ್‌ಇಡಿ ದೀಪಗಳನ್ನು ಅಳವಡಿಸಿಕೊಂಡಿರುವ ವಾಹನ ಸವಾರರ ವಿರುದ್ಧ ನಗರ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ, 5.79 ಲಕ್ಷ ರೂ. ಸಂಗ್ರಹಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕೆಲವು ವಾಹನಗಳಲ್ಲಿ ಹೈಬೀಮ್ ಲೈಟ್ ಉಪಯೋಗಿಸುತ್ತಿದ್ದು, ಅಂತಹ ವಾಹನಗಳ ಸವಾರರ ವಿರುದ್ಧ 100ಕ್ಕೂ ಪ್ರಕರಣ ದಾಖ ಲಿಸಿರುವ ಪೂರ್ವ ಸಂಚಾರ ವಿಭಾಗದ ಪೊಲೀಸರು, 57,500 ರೂ. ದಂಡ ವಿಧಿಸಿದ್ದಾರೆ.
ಈಗಾಗಲೇ ಹೆಚ್ಚು ಪ್ರಖರ ಬೆಳಕು ಹೊರಹಾಕುವ, ಕಣ್ಣು ಕುಕ್ಕುವ ಎಲ್ ಇಡಿ ದೀಪಗಳನ್ನು ಅಳವಡಿಸದಂತೆ ವಾಹನ ಸವಾರರಿಗೆ ಎಚ್ಚರಿಕೆ ನೀಡಲಾಗಿತ್ತು. ಆದರೂ, ನಿರ್ಲಕ್ಷ್ಯ ಮಾಡಿದ್ದರಿಂದ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು.
ಆಟೋ ಚಾಲಕರ ವಿರುದ್ಧ ಕಾರ್ಯಾಚರಣೆ: ಕರೆದಲ್ಲಿಗೆ ಬಾರದಿರುವ, ಮೀಟರ್‌ಗಿಂತ ಅಧಿಕ ಬಾಡಿಗೆ ಕೇಳುವ, ಸಮವಸ್ತ್ರ ಧರಿಸದ, ಸಂಚಾರ ನಿಯಮ ಉಲ್ಲಂ ಸಿದ ಆಟೋ ಚಾಲಕರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಬಂದ ದೂರುಗಳನ್ನು ಆಧರಿಸಿ, ನಗರ ಪೂರ್ವ ಸಂಚಾರ ವಿಭಾಗದ ಎಲ್ಲಾ ಠಾಣೆಗಳ ವ್ಯಾಪ್ತಿಯಲ್ಲಿ 170 ಆಟೋ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿ, 88 ಸಾವಿರ ರೂ. ದಂಡ ವಿಧಿಸಿದ್ದಾರೆ.
ಪಶ್ಚಿಮ ವಿಭಾಗ ಪೊಲೀಸರ ಕಾರ್ಯಾಚರಣೆ: ಏಕಮುಖ ಸಂಚಾರ, ಫುಟ್‌ಪಾತ್ ಪಾರ್ಕಿಂಗ್, ಹೆಲ್ಮೆಟ್ ಧರಿಸದೆ ವಾಹನ ಚಾಲನೆ, ಮೊಬೈಲ್ ಬಳಸಿ ವಾಹನ ಚಾಲನೆ, ತ್ರಿಪಲ್ ರೈಡಿಂಗ್ ಸೇರಿ ಇತರೆ ಸಂಚಾರ ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರ ವಿರುದ್ಧ ಪಶ್ಚಿಮ ಸಂಚಾರ ವಿಭಾಗ ಪೊಲೀಸರು 851 ಕೇಸುಗಳನ್ನು ದಾಖಲಿಸಿ, 4,33,600 ರೂ. ದಂಡ ವಿಧಿಸಿದ್ದಾರೆ.