Advertisement

Sanju Samson: ಐಪಿಎಲ್‌ ನೀತಿಸಂಹಿತೆ ಉಲ್ಲಂಘನೆ : ಸಂಜು ಸ್ಯಾಮ್ಸನ್‌ಗೆ ದಂಡ

08:30 AM May 09, 2024 | Team Udayavani |

ಹೊಸದಿಲ್ಲಿ: ಐಪಿಎಲ್‌ ನೀತಿಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂಬ ಕಾರಣಕ್ಕೆ ರಾಜಸ್ಥಾನ ರಾಯಲ್ಸ್‌ ತಂಡದ ನಾಯಕ ಸಂಜು ಸ್ಯಾಮ್ಸನ್‌ ಅವರಿಗೆ ದಂಡ ವಿಧಿಸಲಾಗಿದೆ.

Advertisement

ಮಂಗಳವಾರ ಡೆಲ್ಲಿ ವಿರುದ್ಧದ ಪಂದ್ಯದ ಬಳಿಕ ಸಂಜುಗೆ ಪಂದ್ಯದ ಸಂಭಾವನೆಯ ಶೇ.30ರಷ್ಟು ದಂಡ ವಿಧಿಸಲಾಗಿದೆ.

ಡೆಲ್ಲಿ ವಿರುದ್ಧ ಬ್ಯಾಟಿಂಗ್‌ ಮಾಡುವಾಗ 16ನೇ ಓವರ್‌ನಲ್ಲಿ ಸಂಜು ಬಾರಿಸಿದ ಚೆಂಡನ್ನು ಬೌಂಡರಿ ಗೆರೆಯ ಬಳಿ ಶೈ ಹೋಪ್‌ ಕ್ಯಾಚ್‌ ಹಿಡಿದಿದ್ದರು. ಕ್ಯಾಚ್‌ ಹಿಡಿಯುವ ವೇಳೆ ಅವರ ಕಾಲು ಬೌಂಡರಿ ಗೆರೆಗೆ ತಾಗಿದೆ ಎಂಬ ಕಾರಣಕ್ಕೆ ಸಂಜು ಫೀಲ್ಡ್‌ ಅಂಪಾ ಯರ್‌ ಜತೆ ವಾದ ಮಾಡಿದ್ದರು. ಇದೇ ಕಾರಣಕ್ಕೆ ದಂಡ ವಿಧಿಸ ಲಾಗಿದೆ ಎನ್ನಲಾಗಿದೆ. ಐಪಿಎಲ್‌ ನೀತಿ ಸಂಹಿತೆಯ ಆರ್ಟಿಕಲ್‌ 2.8ರ ಅಡಿಯಲ್ಲಿ ಸಂಜುಗೆ ದಂಡ ವಿಧಿಸಲಾಗಿದೆ. ಸಂಜು ತಪ್ಪನ್ನು ಒಪ್ಪಿ ಕೊಂಡಿದ್ದು, ಮ್ಯಾಚ್‌ ರೆಫ್ರಿ ದಂಡ ವಿಧಿಸಿದ್ದಾರೆ ಎಂದು ಐಪಿಎಲ್‌ ಪ್ರಕಟನೆ ತಿಳಿಸಿದೆ.

ಇದನ್ನೂ ಓದಿ: Weather ಬಿಸಿಲ ತಾಪ: ಪದವಿ ತರಗತಿ ಬೇಗ ಆರಂಭಿಸಲು ತೀರ್ಮಾನ

Advertisement

Udayavani is now on Telegram. Click here to join our channel and stay updated with the latest news.

Next