Advertisement

ನೀತಿ ಸಂಹಿತೆ ಉಲ್ಲಂಘನೆ: ನಟಿ ಪೂಜಾಗೆ ಜಾಮೀನು

06:20 AM Oct 27, 2017 | |

ರಾಯಚೂರು: ಕಳೆದ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ನಟಿ ಪೂಜಾ ಗಾಂಧಿ ಗುರುವಾರ ಇಲ್ಲಿನ ಜೆಎಂಎಫ್‌-2 ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಿದ್ದರು. ವಿಚಾರ ಣೆಗೆ ಹಾಜರಾಗದೆ ನಿರ್ಲಕ್ಷé ತೋರಿದ ಬಗ್ಗೆ ಬೇಸರ ವ್ಯಕ್ತಪಡಿಸಿದ ನ್ಯಾ.ಪೂರ್ಣಿಮಾ ಯಾದವ್‌ ಅವರು ಸಂಜೆವರೆಗೂ ಪೂಜಾ ಗಾಂಧಿ ಅವರನ್ನು ಜೈಲಿನಲ್ಲಿಡುವಂತೆ ಸೂಚಿಸಿದರು.

Advertisement

ಆದರೆ, ನಟಿ ಪರ ವಕೀಲರ ಮನವಿ ಮೇರೆಗೆ ಸಂಜೆವರೆಗೂ ನ್ಯಾಯಾಲಯದಲ್ಲೇ ಕಾದು ಕುಳಿತುಕೊಳ್ಳುವಂತೆ ತಿಳಿಸಿದರು. ಭೋಜನ ವಿರಾಮದಲ್ಲೂ ನಟಿ ಎಲ್ಲೂ ತೆರಳದೆ ಒಳಗೆ ಕುಳಿತಿದ್ದರು. ಸಂಜೆ 5 ಗಂಟೆಗೆ ವಿಚಾರಣೆ ನಡೆಸಿದ ನ್ಯಾಯಾಧೀಶರು 50 ಸಾವಿರ ರೂ. ನಗದು ಹಾಗೂ ಸ್ಥಳೀಯರಿಬ್ಬರಿಂದ ತಲಾ 25 ಸಾವಿರ ರೂ. ಶ್ಯೂರಿಟಿ ಆಧಾರದ ಮೇಲೆ ಷರತ್ತು ಬದಟಛಿ ಜಾಮೀನು ಮಂಜೂರುಗೊಳಿಸಿದ್ದಾರೆ.ಮುಂದಿನ ವಿಚಾರಣೆಯನ್ನು ನ.3ಕ್ಕೆ ನಿಗದಿಪಡಿಸಿದ್ದು, ಹಾಜರಾಗುವಂತೆ ನಿರ್ದೇಶಿಸಿದರು .

Advertisement

Udayavani is now on Telegram. Click here to join our channel and stay updated with the latest news.

Next