Advertisement

ವಿಶ್ವನಾಥ ಶೆಟ್ಟಿ ಅಗಲಿಕೆಯಿಂದ ಕಂಬಳ ಕ್ಷೇತ್ರ ಬಡವಾಗಿದೆ : ಕಡಂಬ

07:45 PM Jan 09, 2019 | Karthik A |

ಪಡುಬಿದ್ರಿ: ವಿಶ್ವನಾಥ ಶೆಟ್ಟಿ ಕರಿಂಜೆ ಅವರ ಅಗಲುವಿಕೆಯಿಂದ ಕಂಬಳ ಕ್ಷೇತ್ರವು ನಿಜಕ್ಕೂ ಬಡವಾಗಿದೆ. ಆದರೂ ಅವರ ಆದರ್ಶಗಳು ಸದಾ ನಮ್ಮೊಡನೆ ಇರುವುದಾಗಿ ಕಂಬಳ ಕ್ಷೇತ್ರದ ಅನುಭವಿ ಹಿರಿಯ, ಕಂಬಳ ಅಕಾಡೆಮಿಯ ಪ್ರೇರಣಾ ಶಕ್ತಿ ಗುಣಪಾಲ ಕಡಂಬ ಹೇಳಿದರು. ಅವರು ಪಡುಬಿದ್ರಿಯ ಬಂಟ್ಸ್‌ ಸಂಘದಲ್ಲಿ ಜ. 9ರಂದು ನಡೆದಿದ್ದ ಮೂಡುಬಿದಿರೆ ಕರಿಂಜೆ ವಿಶ್ವನಾಥ ಶೆಟ್ಟಿ ಅವರ ವೈಕುಂಠ ಸಮಾರಾಧನೆಯ ಸಂದರ್ಭದ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

Advertisement

ವಿಶ್ವನಾಥ ಶೆಟ್ಟಿ ಅವರು ಬಾಲ್ಯದ ಕಷ್ಟದ ದಿನಗಳನ್ನು, ಕಂಬಳ ಕ್ಷೇತ್ರಕ್ಕೆ ಕಾಲಿರಿಸಿದ ಬಳಿಕ ತಮ್ಮ ಕೋಣಗಳನ್ನು ಪ್ರೀತಿಸುವುದರೊಂದಿಗೆ ತನ್ನ ಕೆಲಸಗಾರರ, ಮನೆಯ ಹಿರಿ, ಕಿರಿಯ ಹಾಗೂ ಸಮಾಜದಲ್ಲಿ ಸಂಕಷ್ಟಕ್ಕೊಳಗಾದ ಮಂದಿಗೂ ಸಹಾಯ, ಸಹಕಾರಗಳನ್ನಿತ್ತು ಬೆಳೆಸಿದ ಔದಾರ್ಯ ಪೂರ್ಣ ಸ್ವಭಾವ ಇತರರಿಗೆ ಮಾದರಿಯಾಗುವಂಥದ್ದು. ಕೆಲವೊಮ್ಮೆ ನಿಷ್ಠುರವಾದಿಯಾಗಿ ನಮಗೆ ಕಂಡುಬಂದರೂ ಮೃದು ಹೃದಯಿ ಅವರಾಗಿದ್ದರು. ತನ್ನ ತಪ್ಪಿಗಾಗಿ ಯಾವುದೇ ಸಂಕೋಚಗಳಿಲ್ಲದೇ ಕ್ಷಮೆಯಾಚಿಸುವ ಮಹಾನ್‌ ಗುಣ ಅವರದ್ದಾಗಿತ್ತು ಎಂದರು. ಮೃತರ ಗೌರವಾರ್ಥ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಬಳಿಕ ನೆರೆದವರೆಲ್ಲರೂ ವಿಶ್ವನಾಥ ಶೆಟ್ಟಿ ಕರಿಂಜೆ ಅವರ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿದರು.

ಶ್ರದ್ಧಾಂಜಲಿ ಸಭೆಯಲ್ಲಿ ವಿಶ್ವನಾಥ ಶೆಟ್ಟಿ ಅವರ ಪತ್ನಿ ಶಶಿಕಲಾ ಶೆಟ್ಟಿ, ಪುತ್ರಿ ವಿನುಲತಾ ಶೆಟ್ಟಿ, ಅಳಿಯ ಅಕ್ಷತ್‌ ಶೆಟ್ಟಿ, ಕಾಪು ಪುರಸಭಾ ಸದಸ್ಯ ಕಿರಣ್‌ ಆಳ್ವ, ಮಾಜಿ ಶಾಸಕ ವಿನಯ ಕುಮಾರ್‌ ಸೊರಕೆ, ಕಂಬಳ ಕ್ಷೇತ್ರದ ಗಣ್ಯರಾದ ಭಾಸ್ಕರ ಕೋಟ್ಯಾನ್‌ ಎಡೂ¤ರು, ಶಾಂತಾರಾಮ ಶೆಟ್ಟಿ ಬಾರ್ಕೂರು, ಸದಾನಂದ ಶೆಟ್ಟಿ ಬೆಳುವಾಯಿ, ರೋಹಿತ್‌ ಹೆಗ್ಡೆ ಎರ್ಮಾಳು, ಸಂದೀಪ್‌ ಶೆಟ್ಟಿ ಕನ್ಯಾನಗುತ್ತು ಕಾಪು, ರತ್ನಾಕರ ಶೆಟ್ಟಿ ಉಳಿಯಾರಗೋಳಿ, ಕಾಪು ದಿವಾಕರ ಶೆಟ್ಟಿ, ನವೀನ್‌ಚಂದ್ರ ಜೆ. ಶೆಟ್ಟಿ, ಪಿ. ಆರ್‌. ಶೆಟ್ಟಿ, ಶಾಂತರಾಜ ಜೈನ್‌, ಕೊಳಚೂರು ಕೊಂಡೆಟ್ಟು ಸುಕುಮಾರ ಶೆಟ್ಟಿ, ಇರುವೈಲು ಶಶೀಂದ್ರ ಸಾಲ್ಯಾನ್‌ ಮತ್ತಿತರರು ಉಪಸ್ಥಿತರಿದ್ದರು. ರಾಜೀವ ಶೆಟ್ಟಿ ಎಡ್ತೂರು ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next