Advertisement

4 ಹೊಸ ತಳಿಯ ಬಳ್ಳಿ ಹಾವು ಪತ್ತೆ

01:10 AM Nov 14, 2020 | mahesh |

ಹೊಸದಿಲ್ಲಿ: ಪಶ್ಚಿಮಘಟ್ಟ ಪ್ರದೇಶ ಸೇರಿದಂತೆ ಭಾರತದ ಪರ್ಯಾಯದ್ವೀಪ ಪ್ರದೇಶದ ಹಲವು ಭಾಗಗಳಲ್ಲಿ 5 ಹೊಸ ತಳಿಯ ಬಳ್ಳಿ ಹಾವುಗಳನ್ನು ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸಸ್‌ (ಐಐಎಸ್‌ಸಿ)ನ ಸೆಂಟರ್‌ ಫಾರ್‌ ಇಕಲಾಜಿಕಲ್‌ ಸೈನ್ಸಸ್‌ನ ಸಂಶೋಧಕರ ತಂಡ ಪತ್ತೆಹಚ್ಚಿದೆ.

Advertisement

ಪಶ್ಚಿಮಘಟ್ಟಗಳ ಮಳೆಕಾಡುಗಳಲ್ಲಿ ತೆಳ್ಳಗಿನ ಶರೀರ ಮತ್ತು ಚಿಕ್ಕ ಮೂಗು ಹೊಂದಿರುವ 4 ವಿಶಿಷ್ಟ ತಳಿಯ ಬಳ್ಳಿ ಹಾವುಗಳು ಕಂಡುಬಂದಿವೆ ಎಂದು ಅಶೋಕ್‌ ಕುಮಾರ್‌ ಮಲಿಕ್‌ ನೇತೃತ್ವದ ಸಂಶೋಧಕರ ತಂಡ ಹೇಳಿದೆ.

ಈ ತಳಿಗಳ ಹಾವುಗಳ ರೂಪವಿಜ್ಞಾನ ಒಂದೇ ಮಾದರಿಯಲ್ಲಿದ್ದರೂ, ಭೌಗೋಳಿಕವಾಗಿ ಭಿನ್ನವಾಗಿವೆ. ಇನ್ನು, ಪರ್ಯಾ ಯ ದ್ವೀಪದ ಒಣ ಭಾಗಗಳಲ್ಲಿ ರೂಪದಲ್ಲೂ ವಿಶಿಷ್ಟವೆನಿಸಿರುವ ಹಾಗೂ ಉದ್ದ ನೆಯ ಮೂಗು ಹೊಂದಿರುವ ಬಳ್ಳಿ ಹಾವಿನ ತಳಿ (ಅಹೆತುಲ್ಲಾ ಆಕ್ಸಿರಿಂಚ) ಪತ್ತೆಯಾಗಿದೆ ಎಂದು ಸಂಶೋ ಧಕರು ತಿಳಿಸಿದ್ದಾರೆ. ಒಟ್ಟಾರೆ, ಪಶ್ಚಿಮ ಘಟ್ಟದಲ್ಲಿ ಪ್ರಸ್ತುತ 6 ಜಾತಿಯ ಬಳ್ಳಿ ಹಾವುಗಳಿವೆ ಎಂದಿದ್ದಾರೆ. ಈ ಅಧ್ಯಯನ ವರದಿಯು ಝೂಟಾಕ್ಸಾ ನಿಯತ ಕಾಲಿಕೆಯಲ್ಲಿ ಪ್ರಕಟವಾಗಿದೆ. ಚೆನ್ನೈ ಸ್ನೇಕ್‌ ಪಾರ್ಕ್‌ನ ಸಂಶೋಧಕ ಎಸ್‌.ಆರ್‌.ಗಣೇಶ್‌, ಬಾಂಬೆ ನ್ಯಾಚುರಲ್‌ ಹಿಸ್ಟರಿ ಸೊಸೈಟಿಯ ಸೌನಕ್‌ ಪಾಲ್‌ ಮತ್ತು ಐಐಎಸ್‌ಸಿಯ ಪ್ರಿನ್ಸಿಯಾ ಡಿ’ಸೋಜಾ ಅವರ ಸಹಭಾಗಿತ್ವದಲ್ಲಿ ಈ ಅಧ್ಯಯನ ಕೈಗೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next