Advertisement

ವಿನಯ್‌ ಮೂರನೇ ಚಿತ್ರ ಅಚ್ಚರಿ

10:43 AM Jul 18, 2017 | |

ವಿನಯ್‌ ರಾಜಕುಮಾರ್‌ ಅವರ ಮೂರನೇ ಚಿತ್ರವನ್ನು ಸುನೀಲ್‌ ತಾಳ್ಯ ಎನ್ನುವವರು ನಿರ್ದೇಶಿಸುತ್ತಿದ್ದಾರೆಂಬ ವಿಚಾರ ನಿಮಗೆ ಗೊತ್ತೇ ಇದೆ. ಚಿತ್ರದ ಪೂರ್ವತಯಾರಿ ನಡೆಯುತ್ತಿದ್ದು, ಈಗ ಚಿತ್ರಕ್ಕೆ ಟೈಟಲ್‌ ಸಿಕ್ಕಿದೆ. ಅದು “ಅಚ್ಚರಿ’.

Advertisement

ಹೌದು, ವಿನಯ್‌ ರಾಜಕುಮಾರ್‌ ಅವರ ಮೂರನೇ ಚಿತ್ರಕ್ಕೆ “ಅಚ್ಚರಿ’ ಎಂದು ಟೈಟಲ್‌ ಇಡಲಾಗಿದೆ. ಚಿತ್ರದ ಟೈಟಲ್‌ ಕಥೆಗೆ ಪೂರಕವಾಗಿರುವುದರಿಂದ ಅದನ್ನೇ ಇಡಲಾಗಿದೆಯಂತೆ.  ಈಗಾಗಲೇ ಸ್ಕ್ರಿಪ್ಟ್ ಫೈನಲ್‌ ಆಗಿದ್ದು, ಮುಂದಿನ ತಿಂಗಳು ಸುನೀಲ್‌ ತಾಳ್ಯ ನಿರ್ದೇಶನದ ಚಿತ್ರ ಆರಂಭವಾಗಲಿದೆ.

ಆ ನಂತರ ವಿನಯ್‌ ಅವರ ಮತ್ತೂಂದು ಚಿತ್ರ ಶುರುವಾಗಲಿದೆ. “ಅಚ್ಚರಿ’ ಒಂದು ಫ್ಯಾಮಿಲಿ ಎಂಟರ್‌ಟೈನರ್‌ ಸಿನಿಮಾವಾಗಿದ್ದು, ಲವ್‌, ರೊಮ್ಯಾನ್ಸ್‌, ಕಾಮಿಡಿ ಮಿಶ್ರಿತ ಕಥೆಯನ್ನು ಹೊಂದಿದೆಯಂತೆ. ಈ ಹಿಂದಿನ ಎರಡು ಸಿನಿಮಾಗಳಿಗಿಂತ ಹೊಸ ಶೇಡ್‌ನ‌ಲ್ಲಿ ವಿನಯ್‌ ಇಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

ಚಿತ್ರದಲ್ಲಿ ಸಾಧು ಕೋಕಿಲ, ಸುಚೇಂದ್ರ ಪ್ರಸಾದ್‌, ತಾರಾ, ವಸಿಷ್ಠ, ರಾಕೇಶ್‌ ಅಡಿಗ ಸೇರಿದಂತೆ ಅನೇಕರು ನಟಿಸಲಿದ್ದಾರೆ. ಸುಮಾರು 80 ದಿನಗಳ ಕಾಲ ಕರ್ನಾಟಕದಾದ್ಯಂತ ಚಿತ್ರೀಕರಣ ನಡೆಯಲಿದೆ. ಚಿತ್ರಕ್ಕೆ ನಾಯಕಿಯ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. ಯುವನ್‌ ಶಂಕರ್‌ ರಾಜಾ ಅವರ ಸಂಗೀತ ಚಿತ್ರಕ್ಕಿದೆ. 

Advertisement

Udayavani is now on Telegram. Click here to join our channel and stay updated with the latest news.

Next