Advertisement

ವಿನಾಯಕಸ್ವಾಮಿ 9ನೇ ಬ್ರಹ್ಮರಥೋತ್ಸವ

01:07 PM Aug 26, 2020 | Team Udayavani |

ಮಾಗಡಿ: ತಾಲೂಕಿನ ನೇತೇನಹಳ್ಳಿ ಸುಪ್ರಸಿದ್ಧ ಇಷ್ಟಾರ್ಥ ಸಿದ್ಧಿ ಶ್ರೀ ವಿನಾಯಕಸ್ವಾಮಿ 9ನೇ ವರ್ಷದ ಬ್ರಹ್ಮರಥೋತ್ಸವ ನೆರವೇರಿತು. ಬ್ರಹ್ಮರಥೋತ್ಸವಕ್ಕೆ ಟ್ರಸ್ಟಿಗಳು, ಗ್ರಾಮಸ್ಥರು ಚಾಲನೆ ನೀಡಿದರು. ಕೋವಿಡ್ ನಡುವೆಯೂ ರಥೋತ್ಸವದ ಮೆರವಣಿಗೆ ನಡೆಯಿತು.

Advertisement

ಬ್ರಹ್ಮರಥೋತ್ಸವದ ಪ್ರಯುಕ್ತ ವಿನಾಯಕಸ್ವಾಮಿಗೆ ವಿಶೇಷ ಪೂಜೆ ನಡೆಯಿತು. ಮುಖಂಡರಾದ ಯಾಲಕ್ಕಯ್ಯ ಮಾತನಾಡಿ, ನೇತೇನಹಳ್ಳಿ ವಿನಾಯಕ ಸ್ವಾಮಿ ದೇವಾಲಯ ಚೋಳರ ಕಾಲದಲ್ಲಿ ನಿರ್ಮಾಣವಾಗಿದ್ದು, ಬಹಳಷ್ಟು ಶಕ್ತಿಯನ್ನು ಹೊಂದಿದೆ. ಎಂದರು. ನೇತೇನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ದಶರಥ, ಗ್ರಾಮ ದಲ್ಲಿ ಏನೇ ಸಮಸ್ಯೆ, ವ್ಯಾಜ್ಯಗಳಿದ್ದರೂ ಅದನ್ನು ಗಣೇಶನ ದೇವಾಲಯದಲ್ಲಿ ಕೂತು ಬಗೆಹರಿಸಗುತ್ತದೆ . ಮಾಗಡಿ ಪಟ್ಟಣದಲ್ಲಿ ನೇಕಾರಿಕೆ ಕುಟುಂಬದವರು ಗಣೇಶನ ಹಬ್ಬವಾದ ನಂತರ ಇಲ್ಲಿರುವ ವಿನಾಯಕ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆಂದರು.

ಒಂದು ವೇಳೆ ಇಲ್ಲಿ ಬಂದು ಪೂಜೆ ಮಾಡಿಸದಿದ್ದರೆ ಇಲಿಗಳ ಕಾಟ ಹೆಚ್ಚಾಗಿ ರೇಷ್ಮೆ ನೂಲನ್ನು ಕಡಿದು ಹಾಕುತ್ತವೆ ಎಂಬ ನಂಬಿಕೆ ಇದೆ ಎಂದು ತಿಳಿಸಿದರು. ರಥೋತ್ಸವದ ಪ್ರಯುಕ್ತ ಭಕ್ತರಿಂದ ಪ್ರಸಾದ ವಿತರಣೆ ನಡೆಯಿತು. ರಾಜಣ್ಣ, ಅಂಗಡಿ ನಾಗರಾಜ್‌, ಲಕ್ಷ್ಮೀ, ವಿನಯ್‌, ಶ್ರೀನಿವಾಸ್‌, ನಾರಾಯಣಪ್ಪ, ಚಂದ್ರ ಶೇಖರಯ್ಯ, ಅಂಗಡಿ ಲಕ್ಷ್ಮೀ ನಾರಾಯಣ್‌, ಕುಮಾರ್‌, ಪುರುಷೋತ್ತಮ್‌, ತಿರುಮಲೆ ಉಮೇಶ್‌, ವೆಂಕಟೇಶ್‌, ರವಿಕುಮಾರ್‌, ರಂಗನಾಥ್‌, ಪ್ರಕಾಶ್‌, ರಾಜಣ್ಣ, ಅರ್ಚಕ ವೆಂಕಟೇಶ್‌, ಆನಂದ್‌, ನಿವೃತ್ತ ಪಿಡಿಒ ಲಕ್ಷ್ಮಿ ನಾರಾಯಣ್‌, ಬಾಲಕೃಷ್ಣ ಜಯರಾಮ್‌, ಮಹಾಲಕ್ಷ್ಮೀ, ಶಿವಕುಮಾರ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next