ಮಂಗಳೂರು: ಜಿ.ಪಂ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣವನ್ನು ಕಾನೂನು ಪ್ರಕಾರ ತನಿಖೆ ಮಾಡಲಾಗುತ್ತಿತ್ತು. ಇಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನವು ಸಿಬಿಐನ ಕಾನೂನಾತ್ಮತ ನಿರ್ಧಾರವಾಗಿದೆ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಯೋಗೆಶ್ ಗೌಡ ಹತ್ಯೆಯಾಗಿದ್ದ ಸಂದರ್ಭ ತನಿಖೆ ಮಾಡಿ ಎಂದು ಬಿಜೆಪಿ ಆಗ್ರಹಿಸಿದ್ದು, ಅವರ ಮನೆಗೆ, ಕುಟುಂಬಕ್ಕೆ ನ್ಯಾಯ ಸಿಗಬೇಕು ಎನ್ನುವ ಆಗ್ರಹ ಮಾಡಿತ್ತು. ಎಲ್ಲಾ ತನಿಖೆ ಮಾಡಿದ ನಂತರ ಸಿಬಿಐ ಕಾನೂನು ಕ್ರಮ ಕೈಗೊಂಡಿದೆ ಎಂದರು.
ಕಾಂಗ್ರೆಸ್‌ಗೆ ಎಲ್ಲಾವಿಚಾರದಲ್ಲೂ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್ ಆಡಳಿತದಲ್ಲಿರುವ ವೇಳೆಯೂ ಸಿಬಿಐ ದಾಳಿ, ಬಂಧನವಾಗುತ್ತಿತ್ತು. ಆಗೆಲ್ಲಾ ಇದು ಇವರ ಪ್ರೇರಣೆಯಲ್ಲಿ ಆಗುತ್ತಿತ್ತಾ? ಸಿಬಿಐ ಸ್ವತಂತ್ರ ಸಂಸ್ಥೆ ಕಾನೂನು ಪ್ರಕಾರ ಕುಲಕರ್ಣಿಯನ್ನು ಬಂಧಿಸಿದೆ ಎಂದು ಹೇಳಿದರು.
ಇದನ್ನೂ ಓದಿ:ರಾಜ್ಯದಲ್ಲಿ ಲವ್ ಜಿಹಾದ್ ಕಡೆಗಾಣಿಸಲು ಕಠಿಣ ಕ್ರಮ: ಮಂಗಳೂರಿನಲ್ಲಿ ಸಿಎಂ ಯಡಿಯೂರಪ್ಪ
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸಿಬಿಐ ಅಧಿಕಾರಿಗಳ ವಿಚಾರಣೆಯಿಂದ ಸತ್ಯ ಹೊರಬರಲಿದೆ. ಕುಲಕರ್ಣಿ ಬಿಜೆಪಿ ಸೇರುವ ವಿಚಾರವನ್ನು ವರಿಷ್ಟರು, ರಾಜ್ಯಾಧ್ಯಕ್ಷರರು ತೀರ್ಮಾನಿಸಲಿದ್ದಾರೆ ಎಂದರು.
ಇದನ್ನೂ ಓದಿ: ಯೋಗೀಶ್ ಗೌಡ ಹತ್ಯೆ ಪ್ರಕರಣ: ಮಾಜಿ ಸಚಿವ ವಿನಯ್ ಕುಲಕರ್ಣಿ, ಸಹೋದರ ವಿಜಯ್ ಸಿಬಿಐ ವಶಕ್ಕೆ
ವಿನಯ್ ಕುಲಕರ್ಣಿ ಪ್ರಕರಣವನ್ನು ಸಿಬಿಐ ನಿಸ್ಪಕ್ಷಪಾತವಾಗಿ ತನಿಖೆ ನಡೆಸಲಿದೆ ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ.
ಮಂಗಳೂರಿನಲ್ಲಿ ಪ್ರತಿಕ್ರೀಯಿಸಿದ ಅವರು, ತನಿಖೆಯಲ್ಲಿ ವಿನಯ್ ಕುಲಕರ್ಣಿ ನಿರಪರಾಧಿ ಎಂದು ಹೊರಬಂದರೆ ಖುಷಿಯಾಗುತ್ತದೆ. ವಿನಯ್ ಕುಲಕರ್ಣಿ ಅವರನ್ನು ಯಾವುದೇ ಕಾರಣಕ್ಕೆ ಬಿಜೆಪಿಗೆ ಸೇರಿಸಿಕೊಳ್ಳುವುದಿಲ್ಲ ಎಂದರು.