2003ರಲ್ಲಿ ಸ್ಥಾಪಿತವಾದ ಯುಎಇ ಬ್ರಾಹ್ಮಣ ಸಮಾಜ, ದುಬೈ ತನ್ನ ಸಮುದಾಯ ಸೇವೆಯ 20ನೇಯ ವರ್ಷದ ಆಚರಣೆಯನ್ನು, ಶೋಭಕೃತ್ ಸಂವತ್ಸರದ ಉದ್ದಕ್ಕೂ 20 ಕಾರ್ಯಕ್ರಮಗಳ ಆಯೋಜನೆಯ ಮೂಲಕ ವಿಭಿನ್ನವಾಗಿ ಆಚರಿಸುತ್ತಿದ್ದು, ಸಮಾರೋಪ ಸಮಾರಂಭ – ವಿಂಶತಿ ವೈಭವದ ಸವಿನಯ ಆಮಂತ್ರಣ ಪತ್ರಿಕೆಯನ್ನು ಐತಿಹಾಸಿಕ ಅಯೋಧ್ಯೆಯಲ್ಲಿ ಮಾರ್ಚ್ 7ರಂದು ವಿಧ್ಯುಕ್ತವಾಗಿ ಬಿಡುಗಡೆಗೊಳಿಸಲಾಯಿತು.
ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ವಿಶ್ವಸ್ತ ಮಂಡಳಿ ಸದಸ್ಯ, ಅಧೋಕ್ಷಜ ಪೇಜಾವರ ಮಠಾಧೀಶ ಪರಮಪೂಜ್ಯ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು, ಕರೆಯೋಲೆಯನ್ನು ಮಂಗಳಾರತಿಯ ಸಂದರ್ಭದಲ್ಲಿ ಶ್ರೀ ರಾಮ ದೇವರ ಕರಕಮಲದಲ್ಲಿರಿಸಿ ಯಶಸ್ಸಿಗೆ ಪ್ರಾರ್ಥಿಸಿ, ಹರಸಿ¨ªಾರೆ. ಇಂತಹ ಅಪೂರ್ವ ಸೌಭಾಗ್ಯ ಬಹುಶ ಇದುವೇ ಪ್ರಥಮ.
ಅವರು ತಮ್ಮ ಅನುಗ್ರಹ ಸಂದೇಶದಲ್ಲಿ ಯುಎಇ ಬ್ರಾಹ್ಮಣ ಸಮಾಜದ ಎರಡು ದಶಕಗಳ ಸಾಧನೆಯನ್ನು ಶ್ಲಾ ಸಿ, ಮಾತನಾಡಿ ನಮ್ಮ ಮುಂದಿನ ಪೀಳಿಗೆಗೆ, ಸನಾತನ ಸಂಪ್ರದಾಯಗಳ ಅರಿವನ್ನು ಮನದಟ್ಟು ಮಾಡುವ ನಿಟ್ಟಿನಲ್ಲಿ ಸಮಾಜ ಕಾರ್ಯಗತವಾಗಿರುದಕ್ಕೆ ಸಂತಸ ವ್ಯಕ್ತ ಪಡಿಸಿದರು. ಈ ಸಮಾಜ ಕೇವಲ ಯುಎಇಯಲ್ಲಿ ಮಾತ್ರವಲ್ಲ, ಭಾರತದಲ್ಲೂ ಅನೇಕ ಸಂಘ – ಸಂಸ್ಥೆ, ಮಠ- ಮಂದಿರ, ಗೋಶಾಲೆಗಳಿಗೂ ದೊಡ್ಡ ನೆರವು ನೀಡುತ್ತಿರುವದನ್ನು ಗುರುತಿಸಿದರು. ವಿಂಶತಿ ವೈಭವಕ್ಕೆ ಶುಭ ಹಾರೈಸುತ್ತ ಮುಂದಿನ ತಲೆಮಾರಿಗೂ ಅಷ್ಟೇ ನಿಷ್ಠೆಯಿಂದ ಸೇವೆ ಮಾಡುವ ಸೌಭಾಗ್ಯ ದಯಪಾಲಿಸಲಿ ಎಂದರು. ಸಮಾಜದ ಸ್ಥಾಪಕ ಸಂಚಾಲಕ ಸುಧಾಕರ ಪೇಜಾವರ ಕೃತಜ್ಞತೆ ಸಲ್ಲಿದರು.
ಭಾರತಕ್ಕಿಂತ ತೀರಾ ಭಿನ್ನವಾದ ಆಡಳಿತ ಪದ್ಧತಿ, ಜೀವನ ಕ್ರಮ, ಸ್ಥಾನೀಯ ಕಾಯಿದೆಗಳ ಮಧ್ಯೆಯೂ ಕಳೆದ ಇಪ್ಪತ್ತು ವರ್ಷಗಳಿಂದ ಸಮುದಾಯದ ಸೇವೆಯಲ್ಲಿ, 150ಕ್ಕೂ ಮಿಕ್ಕಿ ಕಾರ್ಯಕ್ರಮಗಳನ್ನು ಆಯೋಜಿಸಿ, ನಮ್ಮ ಸಂಪ್ರದಾಯದ ಪರಂಪರೆಯನ್ನು ಸಕ್ರಿಯವಾಗಿರಿಸುವ ಪ್ರಯತ್ನ ನಡೆಸಲಾಗಿತ್ತು. ಕೋವಿಡ್ ಸಮಯದಲ್ಲೂ ವರ್ಷಂಪ್ರತಿಯ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿಕೊಂಡು, ಸದಸ್ಯರನ್ನು ಸಾಮಾಜಿಕ ಜಾಲತಾಣದಲ್ಲಿ ಒಟ್ಟುಹಾಕಿ, ಜತೆಯಲ್ಲಿ ಸಾಂಸ್ಕೃತಿಕ ಹಾಗೂ ಅರೋಗ್ಯ ಸಂಬಂಧಿತ ಕಾರ್ಯಕ್ರಮಗಳನ್ನು ಆಯೋಜಿಸಿತ್ತು.
20ನೇಯ ವರ್ಷದ ಆಚರಣೆಯ ಸಂಬಂಧ, ಆರಾಧನೆ, ಪ್ರತಿಭಾ ಪ್ರದರ್ಶನ, ವಿದ್ಯಾ ಪುರಸ್ಕಾರ, ತಾಳ ಮದ್ದಳೆ, ಗುರು ಸಮ್ಮಾನ, ಅಭಿನಂದನೆ ಹೀಗೆ 19 ಕಾರ್ಯಕ್ರಮಗಳನ್ನು ಯಶಸ್ಸಿಯಾಗಿ ಆಯೋಜಿಸಿ, ಇದೀಗ 20 ಕಾರ್ಯಕ್ರಮಗಳ ಅದ್ದೂರಿಯ ಸಮಾರೋಪ – ವಿಂಶತಿ ವೈಭವ ಎ.13ರಂದು ಜುಮೇರಾದ ಬೆಕಲೋರಿಯಟ್ ಸ್ಕೂಲ್ ನಲ್ಲಿ ನಡೆಯಲಿದೆ. ಭೀಮ ವೇದಿಕೆಯಲ್ಲಿ, ವೀನಸ್ ಆತಿಥ್ಯದಲ್ಲಿ ದಿನಪೂರ್ತಿ ವೈವಿಧ್ಯಮಯ ಕಾರ್ಯಕ್ರಮಗಳ ಆಯೋಜನೆಗೆ ಸಿದ್ಧತೆಗಳು ನಡೆಯುತ್ತಿವೆ. ನೃತ್ಯ, ನಾಟಕ, ಗಾಯನ, ಸಂಗೀತ, ಯಕ್ಷಗಾನ, ಪ್ರದರ್ಶನಗಳ ಜತೆ, ಗೌರವ, ಅಭಿನಂನಂದನೆ , ಸಮ್ಮಾನಗಳೂ ನಡೆಯಲಿವೆ.