ತುಮಕೂರು: ಇಡೀ ವಿಶ್ವವನ್ನೇ ವ್ಯಾಪಿಸಿ ರುವ ಕೊರೊನಾಮಹಾಮಾರಿ ಇಲ್ಲಿಯ ವರೆಗೆ ನಗರ ಪ್ರದೇ ಶದ ಜನರಲ್ಲಿಹೆಚ್ಚು ವ್ಯಾಪಿಸುತಿತ್ತು. ಲಾಕ್‌ಡೌನ್‌ನಿಂದ ನಗರ ದಿಂದ ಹಳ್ಳಿಗೆಹೋದ ವಲಸಿಗರಿಂದ ಈಗ ಹಳ್ಳಿ ಗಳು ಕೊರೊನಾ ಹಾಟ್‌ಸ್ಪಾಟ್‌ಗಳಾಗಿವೆ.
ರಾಜ್ಯದಲ್ಲಿ ಕೊರೊನಾ ಹೆಚ್ಚಳ ಹಿನ್ನೆಲೆ ರಾಜ್ಯ ದಲ್ಲಿ ಸರ್ಕಾರಲಾಕ್‌ಡೌನ್ ಘೋಷಣೆ ಮಾಡಿತು. ಇದರಿಂದ ನಗರಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ ಸಾವಿರಾರು ಜನರು ಹಳ್ಳಿಗಳತ್ತ ಹೆಜ್ಜೆ ಹಾಕಿದರು. ಕೊರೊನಾ ವೈರಸ್‌ನ ಗಂಧಗಾಳಿಇಲ್ಲದೇ ಸಂತಸದಿಂದ ಇದ್ದ ಹಳ್ಳಿಗಳು ಈಗ ಕೊರೊನಾಹರಡುವ ಕೇಂದ್ರಗಳಾಗಿವೆ.
ಹಳ್ಳಿಗಳಿಗೆ ನಗರ ಪ್ರದೇಶದಿಂದ ಬಂದ ವಲಸಿಗರಿಂದವೈರಸ್ ಹೆಚ್ಚು ಹರಡುತ್ತಿದೆ. ಹಳ್ಳಿ ಗಳಲ್ಲಿ ಹಲವು ಜನರು ಜ್ವರ,ತಲೆ ನೋವು. ಕೆಮ್ಮು ಸೇರಿದಂತೆ ಇತರೆ ಕೊರೊನಾ ಸೋಂಕಿನಲಕ್ಷಣ ಕಂಡು ಬರು ತ್ತಲೇ ಹೆಚ್ಚಿನ ಜನರು ಪರೀಕ್ಷೆ ಮಾಡಿಸಿಕೊಳ್ಳು ತ್ತಿದ್ದಾರೆ. ಪರೀಕ್ಷೆ ಮಾಡಿಸಿಕೊಂಡವ ರಲ್ಲಿ ಹಲÊ ರಿ ಗೆಸೋಂಕು ಕಾಣಿಸಿಕೊಂಡಿದೆ.
ಎಲ್ಲೆಂದರಲ್ಲಿ ಅಡ್ಡಾಟ: ಹಳ್ಳಿಜನರಿಗೆ ಕೊರೊನಾ ಪಾಸಿಟೀವ್‌ಬಂದಿದೆ ಎಂದು ಗೊತ್ತಾಗುತ್ತಲೇ ಆಸ್ಪತ್ರೆ ಗಳಲ್ಲಿ ಚಿಕಿತ್ಸೆಗೆಜನರು ದುಂಬಾಲು ಬೀಳು ತ್ತಿದ್ದು, ಆಸ್ಪತ್ರೆಯಲ್ಲಿ ಹಾಸಿಗೆಸಿಗದೇ ಸಂಕಷ್ಟ ಅನು ಭವಿಸುತ್ತಿದ್ದಾರೆ. ಇಷ್ಟಾದರೂ ಜನರುಇಂದಿಗೂ ನಗರ ಪ್ರದೇಶಗಳಿಂದ ಹಳ್ಳಿಗೆ ಬರುತ್ತಿದ್ದಾರೆ. ಹಳ್ಳಿಗೆಬಂದವರು ಹೋಂ ಕ್ವಾರೆಂಟೈನ್ ಇರದೇ ಎಲ್ಲೆಂದರಲ್ಲಿ ಅಡ್ಡಾಡು ತ್ತಿದ್ದಾರೆ. ಇದರಿಂದ ಸೋಂಕು ಹೆಚ್ಚುತ್ತಿದೆಅಧಿಕಾರಿಗಳುಗಮನಹರಿಸಲಿಬೆಂಗಳೂರು ಸೇರಿದಂತೆ ಇತರೆ ಪ್ರದೇಶಗಳಿಂದತುಮಕೂರು ಜಿಲ್ಲೆಯ ಹಳ್ಳಿಗಳಿಗೆ ಬರುವವರ ಸಂಖ್ಯೆಹೆಚ್ಚಳವಾಗುತ್ತಿದೆ.
ಬೇರೆ ಕಡೆಯಿಂದ ಬರುವರಿಗೆಕೊರೊನಾ ಪರೀಕ್ಷೆ ಮಾಡಿ ಅವರನ್ನು ಹೋಂಕ್ವಾರೆಂಟೈನ್‌ನಲ್ಲಿ ಇಡಬೇಕಾಗಿದೆ. ಈ ಬಗ್ಗೆಅಧಿಕಾರಿಗಳು ಹೆಚ್ಚು ಗಮನ ಹರಿಸಬೇಕು.ಸೋಂಕಿತರು ಹಳ್ಳಿಗಳಲ್ಲಿ ಓಡಾಡದಂತೆ ಕ್ರಮವಹಿಸಬೇಕು. ಈ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಹಳ್ಳಿಗಳಲ್ಲಿಕೊರೊನಾ ಕಟ್ಟಿ ಹಾಕುವುದು ತುಂಬಾ ಕಷ್ಟವಾಗುತ್ತದೆ.
ಚಿ.ನಿ.ಪುರುಷೋತ್ತಮ್