ಬಂಟ್ವಾಳ: ಗ್ರಾ.ಪಂ. ಚುನಾವಣೆಗೆ ಬಹಿಷ್ಕಾರ ಹಾಕಿ, ಸಜೀಪಮುನ್ನೂರು ಗ್ರಾಮದ ಗ್ರಾಮಸ್ಥರು ರಸ್ತೆಯಲ್ಲಿ ಬ್ಯಾನರ್ ಹಾಕಿದ ಪ್ರಸಂಗ ಶನಿವಾರ ನಂದಾವರದಲ್ಲಿ ನಡೆದಿದೆ.
ಬಂಟ್ವಾಳ ತಾಲೂಕಿನ ಇತಿಹಾಸ ಪ್ರಸಿದ್ಧ ನಂದಾವರ ದೇವಸ್ಥಾನದ ಸಮೀಪ ಅರಮನೆ ಹಿತ್ಲು ಗ್ರಾಮಸ್ಥರು ಚುನಾವಣಾ ಬಹಿಷ್ಕಾರದ ಬ್ಯಾನರ್ ಒಂದನ್ನು ಹಾಕಿದ್ದಾರೆ.
2020 – 21 ಸಾಲಿನ ನಡೆಯುವ ಗ್ರಾಮ ಪಂಚಾಯತ್ ಚುನಾವಣೆಯನ್ನು ಸಜೀಪ ಮುನ್ನೂರು ಗ್ರಾಮದ ನಂದಾವರ ಅರಮನೆಹಿತ್ಲುವಿನ ಸಾರ್ವಜನಿಕರು ಒಗ್ಗಟ್ಟಿನಿಂದ ಬಹಿಷ್ಕರಿಸುತ್ತೇವೆ.
ನಂದಾವರದಿಂದ ಅರಮನೆಹಿತ್ಲುವಿಗೆ ಸಂಪರ್ಕಿಸುವ ರಸ್ತೆಗೆ ಸರಕಾರದಿಂದ ಅನುದಾನ ದೊರೆತರೂ ಸಹ ಸ್ಥಳೀಯ ರಾಜಕಾರಣಿಗಳ ಬೇಜವಾಬ್ದಾರಿಯಿಂದ ಯಾವುದೇ ಕೆಲಸ ನಡೆಯದ ಕಾರಣ ಈ ಬಾರಿಯ ಗ್ರಾಮ ಪಂಚಾಯತ್ ಚುನಾವಣೆಯನ್ನು ಬಹಿಷ್ಕಾರ ಮಾಡುತ್ತೇವೆ ಎಂದು ಬ್ಯಾನರ್ ನಲ್ಲಿ ಬರೆಯಲಾಗಿದೆ.
ಬ್ಯಾನರ್ ನಲ್ಲಿ “ವಿಶೇಷ ಸೂಚನೆ, ಯಾವುದೇ ಪಕ್ಷದ ರಾಜಕೀಯ ಪ್ರೇರಿತ ವ್ಯಕ್ತಿಗೆ ಒಳಗೆ ಬರಲು ಅವಕಾಶವಿರುವುದಿಲ್ಲ” ಎಂದು ಬರೆಯಲಾಗಿದೆ.
ಇದನ್ನೂ ಓದಿ: ಹಿರಿಯ ವಿದ್ವಾಂಸ, ಪದ್ಮಶ್ರೀ ಪುರಸ್ಕೃತ ಬನ್ನಂಜೆ ಗೋವಿಂದಾಚಾರ್ಯ ನಿಧನ