Advertisement

ಬೇಡಿಕೆ ಈಡೇರಿಕೆ ನಿರೀಕೆಯಲ್ಲಿ ಗ್ರಾಮಸ್ಥರು ; ಜಿಲ್ಲಾಧಿಕಾರಿ ಗ್ರಾಮವಾಸ್ತವ್ಯ

05:38 PM Feb 20, 2023 | Team Udayavani |

ಕಾಣಿಯೂರು: ಕಸ್ತೂರಿ ರಂಗನ್‌ ವರದಿಯಲ್ಲಿ ಪಶ್ಚಿಮಘಟ್ಟ ತಪ್ಪಲಿನ ಗ್ರಾಮವೆಂದು ಸೂಚಿಸಿದ ಕಡಬ ತಾಲೂಕಿನ ದೋಳ್ಪಾಡಿ ಗ್ರಾಮದ ದೋಳ್ಪಾಡಿ ಪ್ರಾ. ಶಾಲೆಯಲ್ಲಿ ಫೆ. 20ರಂದು ನಡೆಯವ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ವಿಶೇಷ ಮಹತ್ವ ಪಡೆದಿದೆ. ಕನಿಷ್ಠ ಹಲವು ಮೂಲಸೌಕರ್ಯಗಳ ಬೇಡಿಕೆ ಈಡೇರುವ ನಿರೀಕ್ಷೆ ಹೊಂದಿದ್ದಾರೆ.

Advertisement

ದೋಳ್ಪಾಡಿ ಗ್ರಾಮ ತಾಲೂಕು ಕೇಂದ್ರದಿಂದ ಸುಮಾರು 20 ಕಿ.ಮೀ ದೂರದಲ್ಲಿದ್ದು, ಕಾಣಿಯೂರು ಗ್ರಾ.ಪಂ. ವ್ಯಾಪ್ತಿಯ ಮೂರು ಗ್ರಾಮಗಳ ಪೈಕಿ ದೋಳ್ಪಾಡಿಯೂ ಒಂದು. ದೋಳ್ಪಾಡಿ ಗ್ರಾಮದ ಜನತೆಗೆ ಆತಂಕ ಸೃಷ್ಟಿಸಿದ್ದು ಕಸ್ತೂರಿ ರಂಗನ್‌ ವರದಿ. ವರದಿಯಲ್ಲಿ ಉಲ್ಲೇಖವಾಗಿರುವ ಪಶ್ಚಿಮ ಘಟ್ಟದಲ್ಲಿರುವ ಗ್ರಾಮಗಳಲ್ಲಿ ದೋಳ್ಪಾಡಿಯೂ ಒಂದು. ವರದಿ ಅನುಷ್ಠಾನ ವಿಷಯ ಬಹಿರಂಗವಾ ದಾಗಿನಿಂದ ಈ ಪ್ರದೇಶದ ಹಳ್ಳಿಗಳ ಜನರು ಆತಂಕದಲ್ಲೇ ದಿನ ಕಳೆಯುತ್ತಿದ್ದಾರೆ.

ಪಶ್ಚಿಮಘಟ್ಟ ತಪ್ಪಲಿನ ಜನತೆ ವಿವಿಧ ಹಂತಗಳಲ್ಲಿ ಪ್ರತಿರೋಧ ವ್ಯಕ್ತಪಡಿಸಿದ್ದರು. ಅಧಿಸೂಚನೆ ಮತ್ತು ಅನುಷ್ಠಾನದ ಪ್ರಕ್ರಿಯೆಗಳು ಪುನರಾವರ್ತನೆ ಆಗುವ
ಮೂಲಕ ಜನತೆಯ ನಿದ್ದೆಗೆಡಿಸಿದೆ. ಕ್ರೀಡಾಂಗಣದ ಆವಶ್ಯಕತೆ ಗ್ರಾಮದಲ್ಲಿ ಶೌಚಾಲಯ, ವಿದ್ಯುತ್‌, ನೀರು ಸರಬರಾಜು ಉತ್ತಮವಾಗಿದೆ.

ಆದರೆ ಜನಸಂಖ್ಯೆ ಹೆಚ್ಚಾದಂತೆ ಜನತೆಯ ಅವಶ್ಯಕತೆಗಳೂ ಹೆಚ್ಚುತ್ತಿದೆ. ದೋಳ್ಪಾಡಿ ಯಲ್ಲಿ ಅಂಗನವಾಡಿ ಕೇಂದ್ರ, ಪ್ರಾಥಮಿಕ ಶಾಲೆ, ಪ್ರೌಢಶಾಲೆ ಇದೆ. ಆದರೆ ಈ ಸರಕಾರಿ ಪ್ರೌಢಶಾಲೆಗೆ ಸುಸಜ್ಜಿತ ಕ್ರೀಡಾಂಗಣದ ಆವಶ್ಯಕತೆ ಇದೆ. ಹಾಲು ಉತ್ಪಾದಕರ ಸಹಕಾರ ಸಂಘವಿದ್ದು, ಸರಕಾರಿ ಜಾಗದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದೆ. ಸಂಘದ ಹೆಸರಿನಲ್ಲಿ ಜಾಗ ಕಾದಿರಿಸುವ ಕೆಲಸವಾಗಬೇಕಿದೆ. ಅಂಬೇಡ್ಕರ್‌ ಭವನಕ್ಕೆ ಜಾಗ ಕಾದಿರಿಸಲಾಗಿದೆ. ಶೀಘ್ರ ನಿರ್ಮಾಣವಾಗಬೇಕಿದೆ.

ಬಸ್‌ ಸಂಚಾರ ಬೇಕಾಗಿದೆ ದೋಳ್ಪಾಡಿ ಗ್ರಾಮವು ಹಳ್ಳಿಯಾಗಿದ್ದು, ಸಂಪರ್ಕಕ್ಕೆ ದೂರವಾಗಿರುವುದರಿಂದ ಈ ಭಾಗದ ಸಂಪರ್ಕ ರಸ್ತೆಯಾಗಿರುವ ದೋಳ್ಪಾಡಿ-ಕಟ್ಟ ಜಿ.ಪಂ. ರಸ್ತೆಯ ಅಭಿವೃದ್ದಿ ಶೀಘ್ರದಲ್ಲಿ ಆಗಬೇಕಿದೆ.ದೋಳ್ಪಾಡಿಗೆ ಸರಕಾರಿ ಬಸ್‌ ಸೇವೆ ಸಿಗಬೇಕಿದೆ. ಈ ಭಾಗದ ಜನತೆ ಪೇಟೆಗೆ ಬರಬೇಕಾದರೆ ಖಾಸಗಿ ವಾಹನಗಳನ್ನೇ ಅವಲಂಬಿಸಬೇಕಿದೆ. ಇದರಿಂದ ಶಾಲಾ ಕಾಲೇಜು, ಉದ್ಯೋಗಕ್ಕೆ ಹೋಗುವವರಿಗೆ ಸಮಸ್ಯೆಯಾಗಿದೆ.

Advertisement

ಬೇಡಿಕೆಗಳು
1. ದೋಳ್ಪಾಡಿ ಗ್ರಾಮದಲ್ಲಿ ರುದ್ರಭೂಮಿಯ ನಿರ್ಮಾಣ
2. ಅಂಬೇಡ್ಕರ್‌ ಭವನ ನಿರ್ಮಾಣ
3. ದೋಳ್ಪಾಡಿ ಶಾಲೆಯ ಜಾಗವು ಸರಕಾರಿ ಹೆಸರಿನಲ್ಲಿದ್ದು , ಆ ಜಾಗವನ್ನು ಶಾಲೆಯ ಹೆಸರಿಗೆ ಮಾಡಿಸುವುದು
4. ದೋಳ್ಪಾಡಿ ಗ್ರಾಮಕ್ಕೆ ಗ್ರಾಮಕರಣಿಕರ ಕಚೇರಿ
5. ಗ್ರಾಮದಲ್ಲಿರುವ ಆರಾಧನಾ ಕೇಂದ್ರಗಳ ಜಾಗ ಸಕ್ರಮೀಕರಣ
6. ಸರಕಾರಿ ಪ್ರೌಢಶಾಲೆ ದೋಳ್ಪಾಡಿಗೆ ಸುಸಜ್ಜಿತ ಕ್ರೀಡಾಂಗಣ
7. ದೋಳ್ಪಾಡಿ ಗ್ರಾಮಕ್ಕೆ ಮೊಬೈಲ್‌ ಟವರ್‌ ನಿರ್ಮಾಣ ಪ್ರವೀಣ್ ಚೆನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next