Advertisement

ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದ ಗ್ರಾಮಸ್ಥರು ಸ್ಥಳಕ್ಕೆ ಬಂದ ಅಧಿಕಾರಿಗಳನ್ನು ರಕ್ಷಿಸಿದರು

05:13 PM Aug 16, 2020 | Mithun PG |

ಡೆಹ್ರಾಡೂನ್: ಸ್ವಾತಂತ್ರ್ಯದಿನಾಚರಣೆಯ ಹಿಂದಿನ ದಿನ  ಉತ್ತರಖಂಡ್ ನಾಕಾಯಲ್ ಗ್ರಾಮದ ಗ್ರಾಮಸ್ಥರು ರಸ್ತೆ ಹಾಗೂ ಸೇತುವೆ ನಿರ್ಮಿಸದಿದ್ದರೇ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು. ಈ  ಹಿನ್ನಲೆಯಲ್ಲಿ ಸ್ಥಳಕ್ಕೆ ತೆರಳಿದ ಅಧಿಕಾರಿಗಳೇ  ಸ್ವತಃ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದು ಬಳಿಕ ಗ್ರಾಮಸ್ಥರೇ ಕಾಪಾಡಿದ ಘಟನೆ ನಡೆದಿದೆ.

Advertisement

ಹಲವು ವರ್ಷಗಳಿಂದ ನಕಾಯಲ್ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು ಸ್ಥಳೀಯಾಡಳಿತ ಕಲ್ಪಿಸಿರಲಿಲ್ಲ. ಇದರಿಂದ ರಸ್ತೆ ಸೇತುವೆಗಳಿಲ್ಲದೆ ಗ್ರಾಮಸ್ಥರು ತೀರಾ ಸಮಸ್ಯೆಯನ್ನು ಅನುಭವಿಸುತ್ತಿದ್ದರು. ಆದರೇ ಆಗಸ್ಟ್ 14 2020 ರಂದು ಗ್ರಾಮಸ್ಥರು ಒಟ್ಟಾಗಿ, ಸಮಸ್ಯೆ ಬಗೆಹರಿಸದಿದ್ದರೇ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.

ಇದರಿಂದ ಕೂಡಲೇ ಎಚ್ಚೆತ್ತ ಜಿಲ್ಲಾಡಳಿತ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿಕೊಟ್ಟಿತ್ತು. ನೈನಿತಾಲ್ ಮತ್ತು ಹಲ್ ದ್ವಾನಿ ಯಿಂದ ನಕಾಯಲ್ ಗ್ರಾಮ ಸುಮಾರು 9 ಕಿ.ಮೀ ದೂರದಲ್ಲಿತ್ತು. ಆದರೇ ಸ್ಥಳಕ್ಕೆ ತೆರಳಿದ ಅಧಿಕಾರಿಗಳು ಸೇತುವೆ ಸಂಪರ್ಕ ಇಲ್ಲದ್ದರಿಂದ ಮಾತ್ರವಲ್ಲದೆ ಪ್ರವಾಹ ಪರಿಸ್ಥಿತಿಯಿದ್ದರಿಂದ ನದಿನೀರಿನಲ್ಲಿ ಅಪಾಯಕ್ಕೆ ಸಿಲುಕಿದ್ದರು. ಬಳಿಕ ಗ್ರಾಮಸ್ಥರೇ ಟ್ರ್ಯಾಕ್ಟರ್ ಸಹಾಯದಿಂದ ಅಧಿಕಾರಿಗಳ ಕಾರನ್ನು ನದಿಯಿಂದ ಎಳೆದು ತಂದು ರಕ್ಷಿಸಿದ್ದಾರೆ.

ಗ್ರಾಮಸ್ಥರಿಗೆ ಈ ಅಧಿಕಾರಿಗಳು ಒಂದು ತಿಂಗಳಲ್ಲಿ ಸೇತುವೆ ನಿರ್ಮಿಸಿಕೊಡುವುದಾಗಿ ಹಲವು ವರ್ಷಗಳಿಂದ ಭರವಸೆ ನೀಡುತ್ತಲೇ ಬರುತ್ತಿದ್ದರು. ಭಾರತಕ್ಕೆ ಸ್ವಾತಂತ್ರ್ಯ ಬಂದು 74 ವರ್ಷಗಳಾದರೂ ನಮ್ಮ ಗ್ರಾಮಕ್ಕೆ ಸಣ್ಣದೊಂದು ಸೇತುವೆಯನ್ನು ಸರ್ಕಾರಕ್ಕೆ ನಿರ್ಮಿಸಿ ಕೊಡಲು ಸಾಧ್ಯವಾಗಲಿಲ್ಲ.  ನಕಾಯಲ್ ಗ್ರಾಮದಿಂದ 2 ಕಿ.ಮೀ ದೂರದಲ್ಲಿ ಪಟ್ಟಣವಿದ್ದು ರಸ್ತೆ ಸೇತುವೆ ಸೌಲಭ್ಯಗಳಿಲ್ಲ. ಪ್ರವಾಹದಿಂದ ಕಳೆದ ಒಂದು ತಿಂಗಳಿಂದ ಪಟ್ಟಣಕ್ಕೂ ತೆರಳಲು ಸಾಧ್ಯವಾಗಿಲ್ಲ ಎಂದು ಅಲ್ಲಿನ ಜನರು ಮಾಧ್ಯಮದೊಮದಿಗೆ ಅಳಲು ತೋಡಿಕೊಂಡಿದ್ದಾರೆ.

ಪ್ರವಾಹದಿಂದಾಗಿ ಗ್ರಾಮದ ಅದೆಷ್ಟೋ ಜನರ ಜೀವ ಹೋಗಿದೆ. ವೈದ್ಯಕೀಯ ತುರ್ತು ಪರಿಸ್ಥಿತಿಯಿದ್ದಾಗ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ಮಳೆಗಾಲದಲ್ಲಿ ಅಕ್ಷರಶಃ ನರಕವಾಗುತ್ತದೆ ಎಂದು ಅಳಲು ತೋಡಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next