Advertisement

ಗ್ರಾಮಸ್ಥರ ಒತ್ತಾಯಕ್ಕೆ ಡ್ಯಾನ್ಸ್‌: ಮೋಜು ಮಸ್ತಿಗಾಗಿ ಅಲ್ಲ

03:47 PM Feb 23, 2021 | Team Udayavani |

ಬಂಗಾರಪೇಟೆ: ಕಳೆದ ಶುಕ್ರವಾರ ಕಾಮಸಮುದ್ರಂ ಹೋಬಳಿ ನರಿನತ್ತ ಗ್ರಾಮದಲ್ಲಿ ಕೈಗೊಂಡಿದ್ದ ಗ್ರಾಮ ವಾಸ್ತವ್ಯ  ಕಾರ್ಯಕ್ರಮಕ್ಕೆ ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅನೇಕ ವರ್ಷಗಳಿಂದ ಆಗದ ಗ್ರಾಮಸ್ಥರ ಕೆಲಸಗಳನ್ನು ತಹಶೀಲ್ದಾರ್‌ ಎಂ.ದಯಾನಂದರವರು ಆಸಕ್ತಿ ವಹಿಸಿ ಗ್ರಾಮದಲ್ಲಿಯೇ ತಕ್ಷಣ ಫ‌ಲಾನುಭವಿಗಳಿಗೆ ಸಿಗುವಂತೆ ಮಾಡಿದ್ದಾರೆ. ಎರಡು ದಿನ ಮೊದಲೇ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮ ವಾಸ್ತವ್ಯದ ಬಗ್ಗೆ ಅರಿವು ಮೂಡಿಸಿ, ಅದರ ಯಶಸ್ಸಿಗೆ ಕಾರಣರಾದರು ಎಂದು ಗ್ರಾಮಸ್ಥರು ಶ್ಲಾಘಿಸಿದರು.

Advertisement

ಗ್ರಾಮದ ಹಿರಿಯರು ಹಾಗೂ ಗ್ರಾಪಂ ಮಾಜಿ ಸದಸ್ಯ ಮುನೀರ್‌ ಮಾತನಾಡಿ, ಗ್ರಾಮ ವಾಸ್ತವ್ಯ ಕಾರ್ಯಕ್ರಮದಿಂದ ನಮ್ಮ ಗ್ರಾಮ ಎಲ್ಲಾ ಸವಲತ್ತುಗಳನ್ನು ಪಡೆದಿದೆ. ತಹಶೀಲ್ದಾರರ ಕಾರ್ಯ ನಿಜಕ್ಕೂ ಮೆಚ್ಚುಗೆ ವ್ಯಕ್ತಪಡಿಸುವ ಕಾರ್ಯ. ಯಾರೋ ಪಿತೂರಿ ಮಾಡಿ ಈ ರೀತಿ ಸುದ್ದಿ ಮಾಡಿಸಿದ್ದಾರೆ, ಅವರಿಗೆ ನಮ್ಮ ಧಿಕ್ಕಾರ ದೂರಿದರು.

ಗ್ರಾಮ ವಾಸ್ತವ್ಯದಿಂದ ಗ್ರಾಮದ ಜನರಿಗೆ ಹಲವು ಸಮಸ್ಯೆಗಳಿಗೆ ಪರಿಹಾರ ದೊರಕಿರುವುದು ನಿಜ. ಗ್ರಾಮಸ್ಥರ ಒತ್ತಾಯದ ಮೇರೆಗೆ ಕಲಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ತಹಶೀಲ್ದಾರರ ಪರವಾಗಿ ಇಡೀ ಗ್ರಾಮವೇ ನಿಂತಿದೆ ಎಂದು ಹೇಳಿದರು.

ದುರುದ್ದೇಶದಿಂದ ವಿಡಿಯೋ ವೈರಲ್‌ :  

ತಾಲೂಕಿನ ನರಿನತ್ತ ಗ್ರಾಮದಲ್ಲಿ ಗ್ರಾಮ ವಾಸ್ತವ್ಯವನ್ನು ಯಶಸ್ವಿಯಾಗಿ ನಡೆಸಿ 240 ಅರ್ಜಿಗಳನ್ನು ವಿಲೇವಾರಿ ಮಾಡಿ ಗ್ರಾಮಸ್ಥರಪ್ರಶಂಸೆಗೆ ಗುರಿಯಾಗಿದ್ದರಿಂದ ಈ ಗ್ರಾಮದ ಸವಿನೆನಪಿಗಾಗಿ ಹಾಗೂ ಗ್ರಾಮಸ್ಥರ ಒತ್ತಾಯದ ಮೇರೆಗೆ ಡಾನ್ಸ್‌ ಮಾಡಿದ್ದು, ಯಾವುದೇ ಮೋಜು ಮಸ್ತಿಗಾಗಿ ಅಲ್ಲ ಎಂದು ತಹಶೀಲ್ದಾರ್‌ ಎಂ.ದಯಾನಂದ್‌ ತಿಳಿಸಿದ್ದಾರೆ. ಈ ಸಂಬಂಧ ಉದಯವಾಣಿಗೆ ಅವರು, ತಹಶೀಲ್ದಾರ್‌ ಎಂಬ ಹೆಗ್ಗಳಿಕೆ ಇಲ್ಲದೇ ಗ್ರಾಮ ವಾಸ್ತವ್ಯದಲ್ಲಿ ಗ್ರಾಮದಸಾಮಾನ್ಯ ವ್ಯಕ್ತಿಯಂತೆ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದು ತೃಪ್ತಿ ತಂದಿದೆ. ಆದರೆ, ಡಾನ್ಸ್‌ ಮಾಡಿದ್ದವಿಡಿಯೋವನ್ನು ದುರುದ್ದೇಶದಿಂದ ವೈರಲ್‌ ಮಾಡಿದ್ದು, ನನ್ನ ಜೀವಮಾನದಲ್ಲಿಯೇ ಕಂಡರಿಯದ ದುಃಖದ ಸಂಗತಿಯಾಗಿದೆ ಎಂದು ಹೇಳಿದರು.

Advertisement

ಎಲ್ಲಾ  ಕಾರ್ಯಕ್ರಮಗಳ ನಂತರ ಸ್ಥಳೀಯ ಕಲಾವಿದರಿಗೆ ಮನ್ನಣೆ ನೀಡುವ ಕಲಾ ಕಾರ್ಯಕ್ರಮವು ಇತ್ತು. ಆಗ ತಹಶೀಲ್ದಾರರು ಮತ್ತು ಇತರೆ ಅಧಿಕಾರಿಗಳು ನಮ್ಮ ಒತ್ತಾಯದ ಮೇರೆಗೆ ಜೊತೆ ಸೇರಿ ಕುಣಿದರೆ ಹೊರತು, ಅವರು ಯಾವುದೇ ಕಾಲಾಹರಣ ಮಾಡಲಿಲ್ಲ. ಮುನೀರ್‌, ಗ್ರಾಮಸ್ಥರು, ಗ್ರಾಪಂ ಮಾಜಿ ಸದಸ್ಯ

 

Advertisement

Udayavani is now on Telegram. Click here to join our channel and stay updated with the latest news.

Next