Advertisement
ಈ ಸಂದರ್ಭದಲ್ಲಿ ಮರಕುಂಬಿ ಗ್ರಾಮದ ಮುಖಂಡ ಶರಣಪ್ಪ ಇಳಿಗೆರ್, ಬಸವರಾಜ್ ನಾಯಕ ಮಾತನಾಡಿ, ಕೇಸರಹಟ್ಟಿ ಹಣವಾಳ್ ಗ್ರಾಮಗಳ ಮಧ್ಯೆ ಮರಕುಂಬಿ ಗ್ರಾಮವಿದ್ದು, ಮರಕುಂಬಿ ಗ್ರಾಮ ಹಣವಾಳ ಹಾಗೂ ಕೇಸರಹಟ್ಟಿ ಸಮಾನಾಂತರ ದೂರದಲ್ಲಿದೆ. ಸುಮಾರು ಆರು ಕಿಲೋಮೀಟರ್ ಉದ್ದದ ರಸ್ತೆ ದುರಸ್ಥಿ ಮಾಡಲು ಕಳೆದ ಐದು ವರ್ಷಗಳ ಹಿಂದೆ ರಸ್ತೆಯನ್ನು ಬಗೆದು ಕಲ್ಲು ಮತ್ತು ಮಣ್ಣು ಹಾಕಲಾಗಿದ್ದು ನಂತರ ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ರಸ್ತೆ ಕಾಮಗಾರಿ ಅರ್ಧಂಬರ್ಧಾವಾಗಿದ್ದ ಗ್ರಾಮಸ್ಥರ ಸಂಚಾರಕ್ಕೆ ಬಹಳ ತೊಂದರೆಯಾಗಿದೆ ಎಂದರು.
Related Articles
Advertisement
ಇದರಿಂದ ಮರಕುಂಬಿ ಗ್ರಾಮಸ್ಥರು ಸೇರಿದಂತೆ ಕೇಸರಹಟ್ಟಿ, ಹಣವಾಳ್ ಮಧ್ಯೆ ಬರುವ ಗ್ರಾಮಸ್ಥರಿಗೆ ಸಂಚಾರಕ್ಕೆ ಬಹಳ ತೊಂದರೆಯಾಗಿದೆ. ಈಗಾಗಲೇ ಹಲವು ಬಾರಿ ಕನಕಗಿರಿ ಶಾಸಕ ದಡೇಸೂಗುರು ಬಸವರಾಜ ಮತ್ತು ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಇಲಾಖೆಯ ಎ.ಇ. ಇ. ಪಲ್ಲವಿ ಇವರಿಗೆ ಮನವಿ ಮಾಡಿದರು ಒಬ್ಬರ ಮೇಲೊಬ್ಬರು ಸುಳ್ಳುಗಳನ್ನ ಹೇಳುತ್ತಾ ಕಾಲಹರಣ ಮಾಡುತ್ತಿದ್ದಾರೆ. ಸರಕಾರ ರಸ್ತೆ ದುರಸ್ತಿಗಾಗಿ ಹಣ ಮಂಜೂರ ಮಾಡಿದ್ದರು ಎಂದು ಹೇಳಿದರು.
ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಗುತ್ತಿಗೆದಾರರು ಸೇರಿಕೊಂಡು ಹಣವನ್ನು ಭ್ರಷ್ಟಾಚಾರ ಮಾಡಿರುವ ಅನುಮಾನವಿದ್ದು ಕೂಡಲೇ ಸರಕಾರದ ಅಧಿಕಾರಿಗಳು ಗಮನ ಹರಿಸಿ ಕೇಸರಹಟ್ಟಿ ಹಣವಾಳ್ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ 2023ನೇ ಸಾಲಿನಲ್ಲಿ ಜರುಗುವ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕನಕಗಿರಿ ಕ್ಷೇತ್ರದ ಮತದಾನ ಬಹಿಷ್ಕಾರ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಶರಣೇಗೌಡ, ಬಸವರಾಜ್, ಈಡೀಗೇರ್, ಪಂಪಾಪತಿ, ಕೋರಿ ಶೆಟ್ಟರ್, ಬಸವರಾಜ್ ನಾಯಕ್ ಸೇರಿದಂತೆ ಊರಿನ ಗ್ರಾಮಸ್ಥರು ಇದ್ದರು.