Advertisement

ಗ್ರಾಮಗಳಿಗೆ ಅಮರ್ಜಾದಿಂದ ನೀರು

05:58 AM Mar 10, 2019 | |

ಮಾದನಹಿಪ್ಪರಗಿ: ಕುಡಿಯುವ ನೀರಿನ ಬರ ಎದುರಿಸುತ್ತಿರುವ ಗ್ರಾಮಗಳಿಗೆ ಅಮರ್ಜಾ ಡ್ಯಾಂನಿಂದ ನೀರು ಹರಿಸಲಾಗುವುದು ಎಂದು ಆಳಂದ ಶಾಸಕ ಸುಭಾಷ ಆರ್‌. ಗುತ್ತೇದಾರ ಹೇಳಿದರು.

Advertisement

ಎಚ್‌ಕೆಆರ್‌ಡಿಬಿ ಯೋಜನೆ ಅನುದಾಡಿಯಲ್ಲಿ ಮಂಜೂರಾದ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಮಾದನ ಹಿಪ್ಪರಗಿಗೆ ಈಗಾಗಲೇ ಕೇರೂರ ಮತ್ತು ಕಾಮನಳ್ಳಿ ಕೆರೆಗಳಿಂದ ನೀರು ಸರಬರಾಜು ಮಾಡಲಾಗುತ್ತಿದ್ದು, ಈ ವರ್ಷ ಕೆರೆಯಲ್ಲಿ ಮತ್ತು ಕೆರೆ ಪಕ್ಕದಲ್ಲಿ ತೋಡಲಾದ ಬಾವಿಗಳಲ್ಲಿ ನೀರು ಬತ್ತಿ ಹೋಗಿರುವದರಿಂದ ನೀರಿನ ಬವಣೆ ತೀವ್ರವಾಗಿದೆ. ಟ್ಯಾಂಕರ್‌ ಮೂಲಕ ಗ್ರಾಮಗಳಿಗೆ ನೀರು ಪೂರೈಸಿದರೂ ಸಾಕಾಗುತ್ತಿಲ್ಲ. ಸರಕಾರಕ್ಕೆ ಇಲ್ಲಿನ ಸಮಸ್ಯೆ ಮನವರಿಕೆ ಮಾಡಿ ಶಾಶ್ವತ ಕುಡಿಯುವ ನೀರಿನ ಯೋಜನೆ ತಯಾರಿಸಲಾಗುವುದು. ಈ ಸಮಸ್ಯೆ ಬಗೆಹರಿಸಲು ಅಮರ್ಜಾ ನೀರು ತರುವುದೇ ಪರಿಹಾರ ಎಂದು ಹೇಳಿದರು.

ಶ್ರೀ ಶಿವಲಿಂಗೇಶ್ವರ ಮಠದ ಅಭಿನವ ಶಿವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು. ಎಚ್‌ಕೆಆರ್‌ಡಿಬಿ ಅನುದಾನದಲ್ಲಿ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ 20 ಲಕ್ಷ ರೂ. ವೆಚ್ಚದ ಸಭಾಂಗಣ, ಪದವಿ ಪೂರ್ವ ಕಾಲೇಜಿನಲ್ಲಿ 62 ಲಕ್ಷ ರೂ. ವೆಚ್ಚದಲ್ಲಿ ಹೆಚ್ಚುರಿಯಾಗಿ ನಾಲ್ಕು ಕೋಣೆಗಳ ನಿರ್ಮಾಣ, 50 ಲಕ್ಷ ರೂ. ವೆಚ್ಚದದಲ್ಲಿ ಎರಡು ಪ್ರಯೋಗಶಾಲೆ ಕೋಣೆಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಗ್ರಾಪಂ ಉಪಾಧ್ಯಕ್ಷ ಶಿವಲಿಂಗಪ್ಪ ಜಮಾದಾರ, ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ| ಇರ್ಫಾನ ಅಲಿ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ನಾಗೇಂದ್ರಪ್ಪ ಬೆಡಜಿರಗೆ, ತಾ.ಪಂ. ಮಾಜಿ ಅಧ್ಯಕ್ಷ ಶಿವಪ್ಪ ಕೋಳಶೆಟ್ಟಿ, ಮಾಜಿ ಗ್ರಾ.ಪಂ ಅಧ್ಯಕ್ಷ ವಿಶ್ವನಾಥ ಪರೇಣಿ, ಮಹಾರುದ್ರಪ್ಪ ಅರಳಿಮಾರ, ಈರಣ್ಣ ಬಜಾರೆ, ಶಿವಲಿಂಗಪ್ಪ ಮೈಂದರಗಿ, ರಾಜಕುಮಾರ ಕಂಬಾರ, ಶಂಕರೆಪ್ಪ ಮುಗಳಿ ಜಚಜಖೀ ಮತ್ತಿತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next