Advertisement

ಶಿಕ್ಷಣ ಸಂಸ್ಥೆಯಿಂದ ಗ್ರಾಮ ಅಭಿವೃದ್ಧಿ: ರಮಾನಾಥ ರೈ

11:15 AM Dec 10, 2017 | |

ಮುತ್ತೂರು: ಮುತ್ತೂರು ಸರಕಾರಿ ಸಂಯುಕ್ತ ಪದವಿಪೂರ್ವ ಕಾಲೇಜು ಬಂಟ್ವಾಳ ಹಾಗೂ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ. ಈ ಮೂಲಕ ಎರಡು ಕ್ಷೇತ್ರದ ಗಾಮೀಣ ಭಾಗದ ಅಭಿವೃದ್ಧಿಗೆ ಕಾರಣವಾಗಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಬಿ.ರಮಾನಾಥ ರೈ ಹೇಳಿದರು. ಅವರು ಶನಿವಾರ ಮುತ್ತೂರು ಸರಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಿನ ದಶಮಾನೋತ್ಸವ ಸಂಭ್ರಮಾಚರಣೆ ಮತ್ತು 8ಲಕ್ಷ ರೂ. ವೆಚ್ಚದ ಶಾಸಕ ಅನುದಾನದಲ್ಲಿ ನಿರ್ಮಿಸಲಾದ ನೂತನ ತರಗತಿ ಕೊಠಡಿಗಳನ್ನು ಉದ್ಘಾಟಿಸಿದರು.

Advertisement

ಶಾಸಕ ಬಿ.ಎ.ಮೊದಿನ್‌ ಬಾವಾ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳು ಹಿರಿಯರಿಗೆ, ಶಿಕ್ಷಕರಿಗೆ ಗೌರವ ನೀಡಬೇಕು. ಈಗಾಗಲೇ ಈ ಪ್ರದೇಶದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಇನ್ನೂ ಮುಂದೆಯೂ ಶ್ರಮಿಸುವುದಾಗಿ ಭರವಸೆ ನೀಡಿದರು.

ಸಂಸ್ಥೆಯ ‘ದಶಮಿ’ ಸ್ಮರಣ ಸಂಚಿಕೆಯನ್ನು ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ 20ಲಕ್ಷ ರೂಪಾಯಿ ರಾಜ್ಯಸಭಾ ಸದಸ್ಯರ ಅನುದಾನದಲ್ಲಿ ನಿರ್ಮಾಣಗೊಂಡ ಪ್ರೌಢಶಾಲಾ ಕೊಠಡಿಯನ್ನು ಹಾಗೂ ಕಾಲೇಜು ವಿದ್ಯಾರ್ಥಿನಿ ಡಿಂಪಲ್‌ ಅವರ ಚಿಗುರು ಕವನ ಸಂಕಲನವನ್ನು ರಾಜ್ಯಸಭಾ
ಮಾಜಿ ಸದಸ್ಯೆ ಪದ್ಮಶ್ರೀ ಬಿ. ಜಯಶ್ರೀ ಅವರು ಬಿಡುಗಡೆಗೊಳಿಸಿದರು.

ಶಾಸಕ ಬಿ.ಎ.ಮೊಯಿದಿನ್‌ ಬಾವಾ, ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್‌, ರಾಜ್ಯ ಪ್ರಶಸ್ತಿ ಪುರಸ್ಕೃತ, ಕಲಾ ನಿರ್ದೇಶಕ ಮುತ್ತೂರು ಬಾಳಿಕೆ ಶಶಿಧರ ಉಡುಪ, ರಾಜ್ಯಸಭಾ ಮಾಜಿ ಸದಸ್ಯೆ ಪದ್ಮಶ್ರೀ ಬಿ.ಜಯಶ್ರೀ, ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಹಿರಣಾಕ್ಷ ಕೋಟ್ಯಾನ್‌, ದಶಮಾನೋತ್ಸವ ಸಮಿತಿ ಕಾರ್ಯಾಧ್ಯಕ್ಷ ನಾಗೇಶ್‌ ಶೆಟ್ಟಿ, ಎಸ್‌ .ಡಿ.ಎಂ.ಸಿ. ಕಾರ್ಯಾಧ್ಯಕ್ಷ ಚಂದ್ರಹಾಸ ಶೆಟ್ಟಿ, ಕಾಲೇಜು ಪ್ರಾಂಶುಪಾಲ ನಿರಂಜನ್‌ ಎ.,ಮುಖ್ಯ ಶಿಕ್ಷಕ ಸಿಪ್ರಿಯನ್‌ ಡಿ’ಸೋಜಾ ಮತ್ತು ಶಿಕ್ಷಕರನ್ನು ಸಮ್ಮಾನಿಸಲಾಯಿತು.

ಮುಖ್ಯ ಅತಿಥಿಯಾಗಿ ತಾಲೂಕು ಪಂಚಾಯತ್‌ ಅಧ್ಯಕ್ಷ ಮೊಹಮ್ಮದ್‌ ಮೋನು, ಮುತ್ತೂರು ಗ್ರಾಮ ಪಂಚಾಯತ್‌ ಅಧ್ಯಕ್ಷೆ ನಾಗಮ್ಮ, ಜಿಲ್ಲಾ ಪಂಚಾಯತ್‌ ಸದಸ್ಯ ಜನಾರ್ದನ ಗೌಡ, ಮೆಸ್ಕಾಂ ನಿರ್ದೇಶಕ ಸುರೇಂದ್ರ ಬಿ.ಕಾಂಬ್ಳಿ, ಸಮಿತಿಯ ಕೋಶಾಧಿಕಾರಿ ಪ್ರವೀಣ್‌ ಆಳ್ವ, ಪ್ರೌಢಶಾಲಾ ವಿದ್ಯಾರ್ಥಿ ನಾಯಕ ಕೆ.ಅವಿನಾಶ್‌ ಹೊಳ್ಳ, ಕಾಲೇಜು ವಿದ್ಯಾರ್ಥಿ ನಾಯಕ ಅಭಿಷೇಕ್‌, ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷ ಮೊಹಮ್ಮದ್‌ ಅನ್ಸಾರ್‌, ಶಿಕ್ಷಣ ಇಲಾಖೆಯ ಉಸ್ಮಾನ್‌
ಜಿ.ಕುಪ್ಪೆಪದವು ಗ್ರಾಮ ಪಂಚಾಯತ್‌ ಅಧ್ಯಕ್ಷೆ ಲೀಲಾವತಿ, ಮುತ್ತೂರು ಗ್ರಾಮ ಪಂಚಾಯತ್‌ ಸದಸ್ಯರು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.  ಕಾಲೇಜಿನ ಪ್ರಾಂಶುಪಾಲ ನಿರಂಜನ್‌ ಎ.ಸ್ವಾಗತಿಸಿದರು. ಶಿಕ್ಷಕಿ ರಂಜಿತಾ ಕಾರ್ಯಕ್ರಮ ನಿರೂಪಿಸಿದರು. ಎಸ್‌.ಡಿ.ಎಂ.ಸಿ. ಕಾರ್ಯಾಧ್ಯಕ್ಷ ಚಂದ್ರಹಾಸ ಶೆಟ್ಟಿ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next