Advertisement

ಕೋಸ್ಟ್‌ ಗಾರ್ಡ್‌ಗೆ ವಿಕ್ರಮ್‌ನ ಬಲ

11:15 AM May 14, 2018 | Team Udayavani |

ಪಣಂಬೂರು: ರಾಜ್ಯದ ಕರಾವಳಿ ತೀರದ ರಕ್ಷಣೆಗಾಗಿ ಭಾರತೀಯ ತಟ ರಕ್ಷಣಾ ಪಡೆಗೆ ನಿಯೋಜನೆಗೊಂಡಿರುವ ವಿಕ್ರಮ್‌ ಕಣ್ಗಾವಲು ಹಡಗು ರವಿವಾರ ನವಮಂಗಳೂರು ಬಂದರಿಗೆ ಆಗಮಿಸಿತು. ಕೋಸ್ಟ್‌ಗಾರ್ಡ್‌ನ ಕರ್ನಾಟಕ ಕೇಂದ್ರೀಯ ವಿಭಾಗದ ವತಿಯಿಂದ ಸ್ವಾಗತಿಸಲಾಯಿತು.

Advertisement

ಶಾಸಕ ಮೊದಿನ್‌ ಬಾವಾ ನೌಕೆಯನ್ನು ಸ್ವಾಗತಿಸಿ ವಿಕ್ರಮ್‌ ಆಗಮನದಿಂದ ತಟ ರಕ್ಷಣಾ ಪಡೆಗೆ ಹೆಚ್ಚಿನ ಬಲ ಬಂದಂತಾಗಿದೆ ಎಂದರು.

ಆದಾಯ ಇಲಾಖೆಯ ಆಯುಕ್ತ ನರೋತ್ತಮ್‌ ಮಿಶ್ರ ಐಆರ್‌ಎಸ್‌ ಮಾತನಾಡಿ, ಮೇಕ್‌ ಇನ್‌ ಇಂಡಿಯಾ ಯೋಜನೆಯಡಿ ಭಾರತದಲ್ಲೇ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಾಣವಾಗಿದ್ದು ಹೆಮ್ಮೆಯೆನಿಸುತ್ತದೆ. ಅಮೆರಿಕ ತನ್ನ ನೌಕಾ ಬಲದಿಂದಲೇ ಸೂಪರ್‌ ಪವರ್‌ ಪಟ್ಟವನ್ನು ಅಲಂಕರಿಸಿದೆ.  ಹಡಗು ನಿರ್ಮಾಣದಲ್ಲಿ ಭಾರತವೂ ಇದೀಗ ತನ್ನದೇ ತಂತ್ರಜ್ಞಾನ ಬಳಸಿ ಯಶಸ್ವಿಯಾಗುತ್ತಿದ್ದು ತನ್ನ ಬಲವನ್ನು ವೃದ್ಧಿಸಿಕೊಳ್ಳುತ್ತಿದೆ ಎಂದರು. ಕೋಸ್ಟ್‌ಗಾರ್ಡ್‌ ಕಮಾಂಡರ್‌ ಸತ್ವಂತ್‌ ಸಿಂಗ್‌ ಪ್ರಸ್ತಾವನೆಗೈದು, ಕಣ್ಗಾವಲು ನೌಕೆಯ ವಿಶೇಷತೆಗಳನ್ನು ವಿವರಿಸಿದರು. ಎನ್‌ಎಂಪಿಟಿ ಚೇರ್‌ಮನ್‌ ಸುರೇಶ್‌ ಪಿ. ಶಿರ್ವಾಡ್ಕರ್‌, ಕೋಸ್ಟ್‌ ಗಾರ್ಡ್‌ ಕಮಾಂಡೆಂಟ್‌ ಗುಲ್ವಿಂದರ್‌ ಸಿಂಗ್‌ ಮತ್ತಿತರರು ಉಪಸ್ಥಿತರಿದ್ದರು.

ವಿಕ್ರಮ್‌ ವೈಶಿಷ್ಟ é?
ಕೋಸ್ಟ್‌ಗಾರ್ಡ್‌ಗೆ ಸೇರ್ಪಡೆ ಗೊಂಡಿರುವ ವಿಕ್ರಮ್‌ ನೌಕೆ ದಾಳಿ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಒಳಗೊಂಡಿದೆ. 98 ಮೀಟರ್‌ ಉದ್ದ, 15 ಮೀಟರ್‌ ಅಗಲ, 2,100 ಟನ್‌ ಭಾರವಿದೆ. ಗಂಟೆಗೆ 24 ನಾಟಿಕಲ್‌ ಮೈಲು ದೂರ ಸಂಚರಿಸಬಲ್ಲ ಈ ನೌಕೆ ಎರಡು ಎಂಜಿನ್‌ಗಳ ಒಂದು ಹೆಲಿಕಾಪ್ಟರನ್ನು ಹೊತ್ತೂಯ್ಯಬಲ್ಲದು ಮಾತ್ರವಲ್ಲ 30 ಎಂಎಂ ಗನ್‌, ಎರಡು ಅತ್ಯಾಧುನಿಕ ಸ್ಪೀಡ್‌ ಬೋಟ್‌ ಹೊಂದಿದೆ. ಅಗ್ನಿ
ಅನಾಹುತದ ವಿರುದ್ಧ ಕಾರ್ಯಾಚರಣೆ, ಆಟೋಮೇಟೆಡ್‌ ಪವರ್‌ ಮ್ಯಾನೇಜ್‌ ಮೆಂಟ್‌ ಸಮುದ್ರದ ನೀರನ್ನು ಶುದ್ಧೀಕರಿಸುವ ವಿಶೇಷ ತಂತ್ರಜ್ಞಾನ ಇದರಲ್ಲಿದ್ದು 14 ಅ ಧಿಕಾರಿಗಳು, 88 ಸಿಬಂದಿ ಇದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ನೌಕೆಯನ್ನು ಲಾರ್ಸನ್‌ ಆಂಡ್‌ ಟೂಬ್ರೋ ಕಂಪೆನಿ ಚೆನ್ನೈಯ ಕಟ್ಟುಪಲ್ಲಿ ಹಡಗು ಕಟ್ಟೆಯಲ್ಲಿ ನಿರ್ಮಿಸಿ ಕೋಸ್ಟ್‌ಗಾರ್ಡ್‌ಗೆ ಹಸ್ತಾಂತರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next