Advertisement

ಅಫ್ಘಾನ್ ಅನುಭವ ವಿಸ್ಮಯ: ವಿಕ್ರಂ ಪ್ರತಿಕ್ರಿಯೆ

02:19 AM Aug 21, 2021 | Team Udayavani |

ಉಪ್ಪಿನಂಗಡಿ : ಅಫ್ಘಾನಿಸ್ಥಾನದಿಂದ ಅಮೆರಿಕ ಸೇನೆಯನ್ನು ಹಿಂದೆಗೆಯುವ ಘೋಷಣೆಯಾದ ಬಳಿಕ ಸೇನಾ ವಿಭಾಗದಲ್ಲಿದ್ದ ಉದ್ಯೋಗಿಗಳನ್ನು ಅವರವರ ದೇಶಕ್ಕೆ ಕಳುಹಿಸಿದ ಕಾರಣ ಪ್ರಸಕ್ತ ನಾವೆಲ್ಲ ನಿಶ್ಚಿಂತೆಯಿಂದ ಇರುವಂತಾಗಿದೆ ಎಂದು ಮಂಗಳೂರು ಅತ್ತಾವರದ ನಿವಾಸಿ ವಿಕ್ರಂ ಪ್ರತಿಕ್ರಿಯೆ ನೀಡಿದ್ದು ಇದೀಗ ಸೇನಾ ವಾಪಸಾತಿಯ ಬಳಿಕ ತಾಲಿಬಾನ್‌ ಉಗ್ರರು ಕ್ಷಿಪ್ರಗತಿಯಲ್ಲಿ ದೇಶದ ಆಡಳಿತವನ್ನು ಬುಡಮೇಲುಗೊಳಿಸಿದ್ದು ವಿಸ್ಮಯ ತಂದಿದೆ ಎಂದರು.

Advertisement

ಸೇನಾಪಡೆಯ ಮೆಕ್ಯಾನಿಕಲ್‌ ವಿಭಾಗದಲ್ಲಿ ಕಳೆದ 10 ವರ್ಷಗಳಿಂದ ಮೆಕ್ಯಾನಿಕಲ್‌ ಇನ್‌ ಚಾರ್ಜ್‌ ಆಗಿ ಕರ್ತವ್ಯ ನಿರ್ವಹಿಸಿದ್ದ ವಿಕ್ರಂ ನಾಲ್ಕು ತಿಂಗಳ ಹಿಂದೆ ಸ್ವದೇಶಕ್ಕೆ ಮರಳಿದ್ದರು. ಅಲ್ಲಿನ ಇಂದಿನ ಅರಾಜಕತೆಯ ಘಟನಾವಳಿ ಮನಕಲಕುತ್ತಿದೆ. ನಾವು ಇದ್ದ ಬಗ್ರಾಮ್‌ ವಾಯು ನೆಲೆ ಹಾಗೂ ಕಂದಹಾರ್‌ ವಾಯು ನೆಲೆಗಳೆರಡೂ ಉಗ್ರಗಾಮಿಗಳ ಉಪಟಳಕ್ಕೆ ಒಳಗಾಗಿದ್ದರೂ ಸೇನೆಯ ಭದ್ರತೆಯಿಂದಾಗಿ ಸುರಕ್ಷಿತ ವಾಗಿದ್ದೆವು.

ವರ್ಷಕ್ಕೆರಡು ಬಾರಿ ತವರಿಗೆ ಬರುತ್ತಿದ್ದರೂ ನಮ್ಮ ಆಗಮನ ಮತ್ತು ನಿರ್ಗಮನ ಎಲ್ಲವೂ ಅಮೆರಿಕದ ಸೇನಾ ಭದ್ರತೆಯಲ್ಲೇ ನಡೆಯುತ್ತಿತ್ತು. ಸೇನೆಯ ಸೂಕ್ಷ್ಮ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಾಗೂ ಭದ್ರತೆಯ ಕಾರಣಕ್ಕೆ ನಾವು ಸ್ಥಳೀಯರೊಂದಿಗೆ ಬೆರೆಯುವಂತಿರಲಿಲ್ಲ. ಅವರು ಅಲ್ಲಿನ ಆಡಳಿತ ತಾಲಿಬಾನ್‌ ವಶವಾದ ಬಳಿಕ ನಮ್ಮ ವಿಭಾಗದಲ್ಲಿದ್ದ ಇಬ್ಬರು ಭಾರತೀಯ ಸಿಬಂದಿ ಅಲ್ಲೇ ಇದ್ದು, ಅವರನ್ನು ಅಮೆರಿಕ ಸೇನಾಪಡೆ ಕತಾರ್‌ ದೇಶಕ್ಕೆ ಸ್ಥಳಾಂತರಿಸಿದ ಮಾಹಿತಿ ಬಂದಿದೆ. ಕಳೆದ 2 ದಶಕಗಳಲ್ಲಿ ಸುವ್ಯವಸ್ಥೆಯಲ್ಲಿದ್ದ ದೇಶವೊಂದು ಕೆಲವೇ ದಿನಗಳಲ್ಲಿ ಈ ದುಸ್ಥಿತಿಗೆ ಒಳಗಾಗಿರುವುದು ಬೇಸರ ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next