Advertisement

ಹೃತಿಕ್‌ –ಸೈಫ್‌ ʼವಿಕ್ರಂ ವೇದʼ ಟೀಸರ್‌ ಬಿಡುಗಡೆ: ಇದು ಗ್ಯಾಂಗ್‌ ಸ್ಟರ್‌ ಹೇಳಿದ ಕಥೆ!

12:55 PM Aug 24, 2022 | Team Udayavani |

ಮುಂಬಯಿ: ಬಾಲಿವುಡ್‌ ಬಹು ನಿರೀಕ್ಷಿತ ಆ್ಯಕ್ಷನ್ ಥ್ರಿಲ್ಲರ್‌ ʼವಿಕ್ರಂ  ವೇದʼ ಚಿತ್ರದ ಟೀಸರ್‌ ಬುಧವಾರ (ಆ.24 ರಂದು) ರಿಲೀಸ್‌ ಆಗಿದೆ. 2017 ರಲ್ಲಿ ತೆರೆಗೆ ಬಂದ ತಮಿಳಿನ ʼವಿಕ್ರಂ  ವೇದʼ ಚಿತ್ರದ ರಿಮೇಕ್‌ ಚಿತ್ರಕ್ಕೆ ಹಿಂದಿಯಲ್ಲೂ ಅದೇ ಟೈಟಲ್‌ ಇಡಲಾಗಿದೆ. ಮಾಧವನ್‌ ಹಾಗೂ ವಿಜಯ್‌ ಸೇತುಪತಿ ಕಾಲಿವುಡ್‌ ನಲ್ಲಿ ಕಾಣಿಸಿಕೊಂಡಿದ್ದರು. ಚಿತ್ರ ಬಾಕ್ಸ್‌ ಆಫೀಸ್‌ ನಲ್ಲಿ ದೊಡ್ಡ ಮಟ್ಟದ ಕಲೆಕ್ಷನ್‌ ಮಾಡಿ ಸದ್ದು ಮಾಡಿತ್ತು.

Advertisement

ಹಿಂದಿಯಲ್ಲಿ ಹೃತಿಕ್‌ ರೋಷನ್‌ ಹಾಗೂ ಸೈಫ್‌ ಅಲಿ ಖಾನ್ ವಿಕ್ರಂ ಹಾಗೂ ವೇದನಾಗಿ ಕಾಣಿಸಿಕೊಂಡಿದ್ದಾರೆ. ಇದೊಂದು ಪೊಲೀಸ್‌ ಹಾಗೂ ಗ್ಯಾಂಗ್‌ ಸ್ಟರ್‌ ನಡುವಿನ ಕಥೆ.  ಚಿತ್ರದ ಪೋಸ್ಟರ್‌ ನಿಂದ ಗಮನ ಸೆಳೆದಿದ್ದ ನಟರು ಟೀಸರ್‌ ನಲ್ಲಿ ಅಬ್ಬರಿಸಿದ್ದಾರೆ.

ಟೀಸರ್‌ ನ ಆರಂಭದಲ್ಲಿ ಪೊಲೀಸ್‌ ( ಸೈಫ್‌ ಅಲಿ ಖಾನ್) ಹಾಗೂ ಗ್ಯಾಂಗ್‌ ಸ್ಟರ್‌ ( ಹೃತಿಕ್‌ ರೋಷನ್)‌ ಮುಖಾಮುಖಿಯಾಗಿ ಕೂತು ಗ್ಯಾಂಗ್‌ ಸ್ಟರ್‌ ಕಥೆ ಹೇಳುವ ದೃಶ್ಯವಿದೆ.  ರಫ್‌ ‍& ಟಫ್‌ ಲುಕ್‌ ನಲ್ಲಿ ಸೈಫ್‌ ಅಲಿ ಖಾನ್‌ ಕಾಣಿಸಿಕೊಂಡರೆ, ರಗಡ್‌ ಅವತಾರದಲ್ಲಿ ಹೃತಿಕ್‌ ಕಾಣಿಸಿಕೊಂಡಿದ್ದಾರೆ. ಭರಪೂರ ಸಾಹಸಮಯ ದೃಶ್ಯಗಳನ್ನು ಟೀಸರ್‌ ನಲ್ಲಿ ತೋರಿಸಲಾಗಿದೆ. ರಾಧಿಕಾ ಆಪ್ಟೆ ಅವರೊಂದಿಗಿನ ಪ್ರಣಯದ ಕಥೆಯ ಎಳೆಯನ್ನೂ ಇಲ್ಲಿ ತೋರಿಸಲಾಗಿದೆ.

ಚಿತ್ರಕ್ಕೆ ಪುಷ್ಕರ್‌ ಹಾಗೂ ಗಾಯತ್ರಿ ಅವರ ನಿರ್ದೇಶನವಿದೆ. ಸಿನಿಮಾದಲ್ಲಿ ಯೋಗಿತಾ ಬಿಹಾನಿ, ರೋಹಿತ್‌ ಸರಫ್‌, ಶರೀಬ್ ಹಶ್ಮಿ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ. ಇದೇ ಸೆಪ್ಟೆಂಬರ್‌ 30 ರಂದು ಚಿತ್ರ ತೆರೆಗೆ ಬರಲಿದೆ.

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next